• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ರಷ್ಯಾದ ದಾಗೆಸ್ತಾನ್  ಅಲ್ಲೋಲ ಕಲ್ಲೋಲ!  ಕ್ರೈಸ್ತ, ಯಹೂದಿಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ?

ರಷ್ಯಾದ ದಾಗೆಸ್ತಾನ್ ಅಲ್ಲೋಲ ಕಲ್ಲೋಲ! ಕ್ರೈಸ್ತ, ಯಹೂದಿಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ?

June 25, 2024
ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

August 29, 2026
ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

August 29, 2026
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

August 29, 2026
ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

August 28, 2026
ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

August 28, 2026
ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

August 28, 2026
ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

August 28, 2026
ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

August 28, 2026
ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ? – ಸಿಎಂಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ? – ಸಿಎಂಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

August 28, 2026
ಪುತ್ತೂರು : ದರ್ಬೆ ಗಲಾಟೆ ಪ್ರಕರಣದಲ್ಲಿ ಹಿಂಜಾವೇ ಮುಖಂಡ ದಿನೇಶ್ ಪಂಜಿಗ ವಿರುದ್ಧ ಬಲವಂತದ ಕ್ರಮ ಬೇಡ! ಹೈಕೋರ್ಟ್ ಮಹತ್ವದ ಆದೇಶ

ಪುತ್ತೂರು : ದರ್ಬೆ ಗಲಾಟೆ ಪ್ರಕರಣದಲ್ಲಿ ಹಿಂಜಾವೇ ಮುಖಂಡ ದಿನೇಶ್ ಪಂಜಿಗ ವಿರುದ್ಧ ಬಲವಂತದ ಕ್ರಮ ಬೇಡ! ಹೈಕೋರ್ಟ್ ಮಹತ್ವದ ಆದೇಶ

August 28, 2026
ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಮಹತ್ವದ ಹೆಜ್ಜೆ ಇಟ್ಟ ಸರ್ಕಾರ -ಯು.ಟಿ. ಖಾದರ್​​ಗೆ ಮತ್ತೊಂದು ದೊಡ್ಡ ಜವಾಬ್ದಾರಿ

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಮಹತ್ವದ ಹೆಜ್ಜೆ ಇಟ್ಟ ಸರ್ಕಾರ -ಯು.ಟಿ. ಖಾದರ್​​ಗೆ ಮತ್ತೊಂದು ದೊಡ್ಡ ಜವಾಬ್ದಾರಿ

August 27, 2026
ಪುತ್ತೂರು : ಆಟೋ ರಿಕ್ಷಾದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಪುತ್ತೂರು : ಆಟೋ ರಿಕ್ಷಾದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

August 27, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Sunday, August 30, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

    ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

    ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

    ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

    ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

    ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

    ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

    ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

    ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

    ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

    ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

    ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

    ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

    ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

    ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

    ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

    ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ? – ಸಿಎಂಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

    ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ? – ಸಿಎಂಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರಾಷ್ಟ್ರೀಯ

ರಷ್ಯಾದ ದಾಗೆಸ್ತಾನ್ ಅಲ್ಲೋಲ ಕಲ್ಲೋಲ! ಕ್ರೈಸ್ತ, ಯಹೂದಿಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ?

by ಪ್ರಜಾಧ್ವನಿ ನ್ಯೂಸ್
June 25, 2024
in ಅಂತರಾಷ್ಟ್ರೀಯ, ಇತರೆ, ಕ್ರೈಮ್, ರಾಷ್ಟ್ರೀಯ
0
ರಷ್ಯಾದ ದಾಗೆಸ್ತಾನ್  ಅಲ್ಲೋಲ ಕಲ್ಲೋಲ!  ಕ್ರೈಸ್ತ, ಯಹೂದಿಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ?
353
SHARES
1k
VIEWS
ShareShareShare

ಭಾನುವಾರ.. ಜೂನ್ 23.. ರಷ್ಯಾ ದೇಶದ ದಾಗೆಸ್ತಾನ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಈ ಘಟನೆಯಿಂದ ಕ್ರೈಸ್ತರು ಹಾಗೂ ಯಹೂದಿಗಳು ಆತಂಕದಲ್ಲಿದ್ದಾರೆ. ಚರ್ಚ್ ಹಾಗೂ ಯಹೂದಿ ಪ್ರಾರ್ಥನಾ ಮಂದಿರಗಳನ್ನೇ ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದಾರೆ. ಮುಸ್ಲಿಂ ಪ್ರಾಬಲ್ಯದ ದಾಗೆಸ್ತಾನ್‌ನಲ್ಲಿ ನಡೆದಿರೋ ಈ ಕೃತ್ಯ ವಿಶ್ವಾದ್ಯಂತ ಭಾರೀ ಚರ್ಚೆಯಾಗ್ತಿದೆ. ಜೊತೆಯಲ್ಲೇ ಕ್ರೈಸ್ತರು ಹಾಗೂ ಯಹೂದಿ ಭಕ್ತರನ್ನು ರಕ್ಷಿಸಲು ರಷ್ಯಾ ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ರೀತಿ ಕೂಡಾ ಗಮನ ಸೆಳೆದಿದೆ.

ರಷ್ಯಾದ ದಾಗೆಸ್ತಾನ್ ಪ್ರಾಂತ್ಯ ಮುಸ್ಲಿಂ ಬಾಹುಳ್ಯದ ಪ್ರದೇಶ.. ಈ ಪ್ರಾಂತ್ಯದಲ್ಲಿ ಕಳೆದ ಭಾನುವಾರ ಧಾರ್ಮಿಕ ರಜಾ ದಿನ ಇತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ವೇಳೆ ಕ್ರೈಸ್ತರು ಚರ್ಚ್‌ಗಳಿಗೆ ತೆರಳಿದ್ದರೆ, ಯಹೂದಿಗಳು ತಮ್ಮ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಭಾರತದ ಕಾಲ ಮಾನದ ಪ್ರಕಾರ ಹೇಳೋದಾದರೆ ಭಾನುವಾರ ರಾತ್ರಿ 8.30ರ ಸುಮಾರಿಗೆ ಚರ್ಚ್ ಹಾಗೂ ಯಹೂದಿ ಪ್ರಾರ್ಥನಾ ಸ್ಥಳಗಳ ಮೇಲೆ ಉಗ್ರರು ಲಗ್ಗೆ ಇಟ್ಟಿದ್ದರು.

Muliya

ಜಾಹೀರಾತು

ದಾಗೆಸ್ತಾನ್ ಪ್ರಾಂತ್ಯದ ರಾಜಧಾನಿ ಮಖಚ್ಕಲಾಗೆ ಧಾವಿಸಿದ ಉಗ್ರರು ಮೊದಲಿಗೆ ಸಂಚಾರಿ ಪೊಲೀಸರ ಚೆಕ್ ಪೋಸ್ಟ್‌ ಮೇಲೆ ದಾಳಿ ನಡೆಸಿದರು. ಬಳಿಕ ಚರ್ಚ್ ಹಾಗೂ ಯಹೂದಿಗಳ ಎರಡು ಪ್ರಾರ್ಥನಾ ಕೇಂದ್ರಗಳ ಮೇಲೆ ಏಕ ಕಾಲಕ್ಕೆ ಉಗ್ರರು ದಾಳಿ ನಡೆಸಿದರು. ಈ ವೇಳೆ, ಎಲ್ಲ ಪ್ರಾರ್ಥನಾ ಮಂದಿರಗಳಲ್ಲೂ ಭಕ್ತರು ಸೇರಿದ್ದರು. ಈ ಕಟ್ಟಡಗಳ ಒಳಗೆ ನುಗ್ಗಿ ಭಕ್ತ ಸಮೂಹದ ಮೇಲೆ ಮನಬಂದಂತೆ ಗುಂಡು ಹಾರಿಸಬೇಕು ಅನ್ನೋದು ಉಗ್ರರ ಉದ್ದೇಶವಾಗಿತ್ತು. ಒಂದು ವೇಳೆ ಉಗ್ರರ ಈ ಪ್ಲಾನ್ ಸಕ್ಸಸ್ ಆಗಿದ್ದರೆ, ಮೃತರ ಸಂಖ್ಯೆ ನೂರರ ಗಡಿ ದಾಟುತ್ತಿತ್ತು.. ಆದರೆ, ಘಟನಾ ಸ್ಥಳದಲ್ಲಿ ನಡೆದದ್ಧೇ ಬೇರೆ..

ಉಗ್ರರು ತಮ್ಮ ಮೊದಲ ದಾಳಿ ನಡೆಸಿದ್ದು ಭಾನುವಾರ ರಾತ್ರಿ 8.30ಕ್ಕೆ.. ಈ ಘಟನಾ ಸ್ಥಳಕ್ಕೆ ರಷ್ಯಾದ ಉಗ್ರ ನಿಗ್ರಹ ದಳ ಧಾವಿಸಿದ್ದು, ಸೋಮವಾರ ಬೆಳಗ್ಗೆ 10.30ಕ್ಕೆ.. ಅಂದರೆ ಸರಿ ಸುಮಾರು 14 ಗಂಟೆಗಳ ಕಾಲ ಉಗ್ರರ ವಿರುದ್ಧ ಎದೆ ಒಡ್ಡಿದ್ದು, ರಷ್ಯಾ ಪೊಲೀಸರು!

ಎಷ್ಟು ಮಂದಿ ಉಗ್ರರಿದ್ದಾರೆ, ಅವರ ಬಳಿ ಯಾವ ರೀತಿಯ ಶಸ್ತ್ರಾಸ್ತ್ರಗಳು ಇವೆ ಅನ್ನೋದ್ರ ಮಾಹಿತಿ ಪೊಲೀಸರಿಗೆ ಇರಲಿಲ್ಲ. ಅಸಲಿಗೆ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುವ ಸೂಕ್ತ ತರಬೇತಿ ಕೂಡಾ ಪೊಲೀಸರಿಗೆ ಇರೋದಿಲ್ಲ. ಇಷ್ಟಾದರೂ ಪ್ರಾರ್ಥನಾ ಮಂದಿರಗಳಲ್ಲಿ ಇದ್ದ ನಾಗರಿಕರ ರಕ್ಷಣೆ ಪೊಲೀಸರ ಪ್ರಥಮ ಆದ್ಯತೆ ಆಗಿತ್ತು.

ಉಗ್ರರ ವಿರುದ್ಧ ಹೋರಾಡುತ್ತಿದ್ದ ಪೊಲೀಸರಿಗೆ ನೆರವಾಗಲು ಭಯೋತ್ಪಾದನಾ ನಿಗ್ರಹ ದಳ ಧಾವಿಸಿದಷ್ಟೇ ವೇಗವಾಗಿ ಕಾರ್ಯಾಚರಣೆ ಮುಗಿದು ಹೋಗಿತ್ತು! ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಕಾರ್ಯಾಚರಣೆ ಆರಂಭಿಸಿದ ಉಗ್ರ ನಿಗ್ರಹ ದಳ, ಮಧ್ಯಾಹ್ನ 12.30ರ ವೇಳೆಗೆ ತನ್ನ ಕಾರ್ಯಾಚರಣೆ ಅಂತ್ಯಗೊಳಿಸಿತ್ತು. ಎಲ್ಲಾ 6 ಉಗ್ರರನ್ನು ಹತ್ಯೆ ಮಾಡಿತ್ತು. ದುರಾದೃಷ್ಟವಶಾತ್ ಈ ಉಗ್ರರ ಗುಂಡಿಗೆ ಎದೆಯೊಡ್ಡಿದ್ದ 15 ಪೊಲೀಸರೂ ಸಾವಿಗೀಡಾದರು.

ಈ ಉಗ್ರ ದಾಳಿಯಲ್ಲಿ ಒಟ್ಟು 20 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ 15 ಮಂದಿ ಪೊಲೀಸರೇ ಇದ್ದಾರೆ. ಇನ್ನುಳಿದ ಐವರು ನಾಗರಿಕರ ಪೈಕಿ ಓರ್ವ ಪಾದ್ರಿ ಕೂಡಾ ಇದ್ದಾರೆ. ಈ ಪಾದ್ರಿ ಕಳೆದ 40 ವರ್ಷಗಳಿಂದ ದಾಗೆಸ್ತಾನದ ಪ್ರಾರ್ಥನಾ ಮಂದಿರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಮ್ಯಾಪ್‌ನಲ್ಲಿ ನೋಡಿದರೆ ರಷ್ಯಾ ದೇಶದ ನೈರುತ್ಯ ಭಾಗದ ಅಂಚಿನಲ್ಲಿ ಬರುವ ಭಾಗವೇ ದಾಗೆಸ್ತಾನ್. ಕ್ಯಾಸ್ಪಿಯನ್ ಸಮುದ್ರದ ತೀರದಲ್ಲಿ ಇರುವ ಈ ಪ್ರಾಂತ್ಯ, ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಅತಿ ಸುಲಭವಾಗಿ ಸಂಪರ್ಕ ಸಾಧಿಸಬಲ್ಲದು. ಇದೇ ಕಾರಣಕ್ಕಾಗಿ ಈ ಪ್ರಾಂತ್ಯದಲ್ಲಿ ಕ್ರೈಸ್ತರು ಹಾಗೂ ಯಹೂದಿಗಳಿಗಿಂತ ಹೆಚ್ಚಾಗಿ ಮುಸ್ಲಿಮರೇ ಇದ್ದಾರೆ. ಇಲ್ಲಿನ ಯುವಕರು ಸಿರಿಯಾಗೆ ಪ್ರಯಾಣ ಬೆಳೆಸಿ ಐಸಿಸ್‌ ಸೇರ್ಪಡೆಗೊಳ್ಳುತ್ತಾರೆ. ಅಲ್ಲಿ ತರಬೇತಿ ಪಡೆದ ಬಳಿಕ ದಾಗೆಸ್ತಾನ್‌ಗೆ ವಾಪಸ್ ಬಂದು ಇಲ್ಲಿ ಭಯೋತ್ಪಾದಕ ಕೃತ್ಯ ಎಸಗುತ್ತಾರೆ ಅನ್ನೋದು ರಷ್ಯಾ ಆರೋಪ.

ದಾಗೆಸ್ತಾನ್ ಬಳಿಕ ಚೆಚೈನ್ಯಾದಲ್ಲೂ ಇದೇ ಸಮಸ್ಯೆ.. 1990ರ ದಶಕದಲ್ಲಿ ಎರಡು ಭಾರೀ ರಷ್ಯಾ ಸೇನೆ ಚೆಚೈನ್ಯಾದಲ್ಲಿ ಇಸ್ಲಾಮಿಕ್ ಉಗ್ರರ ವಿರುದ್ಧ ದೊಡ್ಡ ಮಟ್ಟದ ಸಮರ ನಡೆಸಿತ್ತು. ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮತ್ತೆ ಈ ಭಾಗದಲ್ಲಿ ಉಗ್ರರ ಆರ್ಭಟ ತೀವ್ರಗೊಂಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು, ಇಸ್ರೇಲ್ – ಹಮಾಸ್ ಯುದ್ಧ! ಇಸ್ರೇಲ್ – ಹಮಾಸ್ ಯುದ್ಧ ಶುರುವಾದ ಕೆಲವು ದಿನಗಳ ಬಳಿಕ ರಷ್ಯಾ ದೇಶದ ದಾಗೆಸ್ತಾನ್‌ಗೆ ಯಹೂದಿ ಪ್ರಯಾಣಿಕರಿದ್ದ ಒಂದು ವಿಮಾನ ಆಗಮಿಸಿತ್ತು.

ಈ ವೇಳೆ ದಾಗೆಸ್ತಾನ್‌ನ ಇಸ್ಲಾಂ ಧರ್ಮೀಯರು ಈ ವಿಮಾನದ ಮೇಲೆ ದಾಳಿ ನಡೆಸಿದ್ದರು! ರಷ್ಯಾ ದೇಶ ಯಹೂದಿಗಳಿಗೆ ನೆಲೆ ನೀಡಬಾರದು ಅನ್ನೋದು ದಾಗೆಸ್ತಾನ್ ಜನತೆಯ ಆಗ್ರಹ! 2023ರ ಅಕ್ಟೋಬರ್ 29 ರಂದು ನಡೆದ ಈ ಘಟನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದರೆ, ಇದು ಆರಂಭ ಮಾತ್ರ..

8722552464 Astrloger

ಜಾಹೀರಾತು

2024ರ ಮಾರ್ಚ್ 6 ರಂದು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಸಂಗೀತ ಸಮ್ಮೇಳನ ನಡೆಯುತ್ತಿದ್ದ ಸಭಾಂಗಣದ ಮೇಲೆ ದಾಳಿ ನಡೆಸಿದ್ದರು. ಐಸಿಸ್‌ ಕೆ ಎಂದೇ ಕುಖ್ಯಾತವಾದ ಅಫ್ಘಾನಿಸ್ತಾನ ಮೂಲದ ಇಸ್ಲಾಮಿಕ್ ಸ್ಟೇಟ್ ಇನ್ ಖೊರಾಸನ್ ಈ ದಾಳಿಯ ಹೊಣೆಯನ್ನ ಹೊತ್ತುಕೊಂಡಿತ್ತು. ಉಗ್ರರಿಗೆ ಉಕ್ರೇನ್ ಕೂಡಾ ಬೆಂಬಲ ನೀಡಿರಬಹುದು ಅನ್ನೋ ಶಂಕೆಯನ್ನ ರಷ್ಯಾ ವ್ಯಕ್ತಪಡಿಸಿತ್ತು.

ಇದೀಗ ಮತ್ತೊಂದು ಉಗ್ರ ದಾಳಿ ದಾಗೆಸ್ತಾನ್‌ನಲ್ಲಿ ನಡೆದಿದೆ. ಈ ಕೃತ್ಯದ ಹೊಣೆಯನ್ನ ಈವರೆಗೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಚರ್ಚ್ ಹಾಗೂ ಯಹೂದಿ ಪ್ರಾರ್ಥನಾ ಮಂದಿರಗಳ ಮೇಲೆ ಸಂಘಟಿತ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇದು ಐಸಿಸ್ ಮಾದರಿ ಕೃತ್ಯ ಎಂದೇ ರಷ್ಯಾ ಸರ್ಕಾರ ಶಂಕಿಸಿದೆ. ಸದ್ಯ ದಾಗೆಸ್ತಾನದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಆದರೆ, ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ.

SendShare141Share
Previous Post

ಮಳೆಗೆ ಸೋರುತಿದೆ ಅಯೋಧ್ಯ ರಾಮ ಮಂದಿರದ ಗರ್ಭಗುಡಿ : ಪ್ರಧಾನ ಅರ್ಚಕರ ಆರೋಪ

Next Post

ಪುತ್ತೂರು: ಆಟೋ ಚಾಲಕರ ಮನವಿಗೆ ಸ್ಪಂದಿಸಿದ ಪುತ್ತೂರು ಶಾಸಕ ಅಶೋಕ್ ರೈ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರು: ಆಟೋ ಚಾಲಕರ ಮನವಿಗೆ ಸ್ಪಂದಿಸಿದ ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು: ಆಟೋ ಚಾಲಕರ ಮನವಿಗೆ ಸ್ಪಂದಿಸಿದ ಪುತ್ತೂರು ಶಾಸಕ ಅಶೋಕ್ ರೈ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..