ಪುತ್ತೂರು: ಮೀನುಗಾರಿಕಾ ಇಲಾಖೆಯ ಮೂಲಕ 50 ಮನೆಯನ್ನು ಬಡವರಿಗೆ ಹಂಚಲಾಗಿದೆ, ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸರಕಾರಗಳುಮಂಜೂರುಮಾಡಿರಲಿಲ್ಲ ಇದರಿಂದ ಬಡವರು ನೊಂದು ಹೋಗಿದ್ದರು. ಇಂದು10 ಸಾವಿರ ಮೌಲ್ಯದ ಕಿಟ್ ಗಳನ್ನು ಕೆಲವು ಕುಟುಂಬಗಳಿಗೆ ನೀಡಲಾಗಿದೆ. ಸರಕಾರ ಪ್ರತೀಯೊಂದು ಇಲಾಖೆಯಮೂಲಕ ಬಡವರಿಗೆ ನೆರವು ನೀಡುವ ಕಾರ್ಯವನ್ನುಮಾಡುತ್ತಿದೆ. ರಾಜ್ಯ ಸರಕಾರ ಬಡವರ ಪರ ಎಂಬುದು ಮತ್ತೆ ಮತ್ತೆ ಸಾಙೀತಾಗುತ್ತಿದೆ ಎಂದು ಶಾಸಕರು ಹೇಳಿದರು.
ಪರಿಸರದಲ್ಲಿ ಎಲ್ಲವೂ ಇರಬೇಕು,ಪ್ರಾಣಿ, ಪಕ್ಷಿ ಮೀನು ಸಹಿತಎಲ್ಲವೂ ನಮ್ಮನಡುವೆ ಬದುಕಬೇಕು. ತಾಲೂಕಿನ ಪ್ರತೀ ಕೆರೆಗಳಲ್ಲಿ ಮೀನು ಸಾಕುವ ಕಾರ್ಯವನ್ನು ಮಾಡಬೇಕು ಎಂದುಶಾಸಕರು ಹೇಳಿದರು.
ತಾಪಂ ಸಹಾಯಕ ನಿರ್ದೇಶಕಿ ಶೈಲಜಾ ರವರು ಮಾತನಾಡಿ ಶಿಭಿರದಲ್ಲಿಭಾಗವಹಿಸಿ ಇದರಪ್ರಯೋಜನವನ್ನು ಪಡೆದುಕೊಳ್ಳಬೇಕು, ತರಭೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದಪ್ರತೀಯೊಬ್ಬರೂ ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ, ಗಜೇಂದ್ರ ಮೇಲೆ ಮೀನುಗಾರಿಕ ಪ್ರಾಧ್ಯಾಪಕ ಪ್ರಭಾಕರ , ನಿವೃತ್ತ ಫ್ರೊಪೆಸರ್ ಡಾ.ಫಝಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೀನುಗಾರಿಕಾ ಇಲಾಖಾ ಸಹಾಯಕ ನಿರ್ದೇಶಕಿ ಮಂಜುಳಾ ಸಿ ಶೆಣೈ ಸ್ವಾಗತಿಸಿ ವಂದಿಸಿದರು. ತಾಪಂಸಿಬಂದಿ ನಮಿತಾ ಕಾರ್ಯಕ್ರಮನಿರೂಪಿಸಿದರು.