ದಕ್ಷಿಣ ಕನ್ನಡ: ಉತ್ತರ ಕನ್ನಡದಿಂದ ಐವರು ಪಿ ಎಸ್ ಐ ದಕ್ಷಿಣ ಕನ್ನಡಕ್ಕೆ ವರ್ಗಾವಣೆ.
ಉತ್ತರಕನ್ನಡ ದಿಂದ ಗೋಪಾಲ ಎನ್ ನೆಗಳೂರು ಬಂಟ್ವಾಳ ನಗರ ಠಾಣೆಗೆ, ದುರ್ಗಪ್ಪ ಹೆಚ್ ಕಲಘಟಗಿ ಬಂಟ್ವಾಳ ನಗರ ಠಾಣೆಗೆ, ತಿಮ್ಮಪ್ಪ ಎಸ್ ಬೆಡುಮನೆ ಬೆಳ್ಳಾರೆ ಠಾಣೆಗೆ, ಪ್ರಕಾಶ್ ಜಿ ಕಟ್ಟಿ ಉಪ್ಪಿನಂಗಡಿ ಠಾಣೆಗೆ (ಸಂಚಾರ ), ಅಶೋಕ್ ಡಿ ತಳದಪ್ಪನವರ್ ವಿಟ್ಲ ಠಾಣೆಗೆ ಕರ್ತವ್ಯ ನಿರ್ವಹಿಸುವಂತೆ ಆದೇಶ ನೀಡಲಾಗಿದೆ.
ಪ್ರಮುಖವಾಗಿ ಹಲವು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಪಿ ಎಸ್ ಐ ಗಳನ್ನು ಪದೋನ್ನತಿ ಹೊಂದಿ ಬೇರೆ ಸ್ಥಳಗಳಿಗೆ ನಿಯುಕ್ತಿಯಾಗುವಂತೆ ಪಶ್ಚಿಮ ವಲಯ ಪೋಲಿಸ್ ಮಹಾನಿರೀಕ್ಷರು ಆದೇಶ ನೀಡಿದ್ದಾರೆ.