ಪುತ್ತೂರು: ಪುತ್ತೂರುಕೆಎಸ್ ಆರ್ ಟಿ ಸಿ ಡಿಪೋದಲ್ಲಿ ಚಾಲಕ/ ನಿರ್ವಾಹಕರ ಕೊರತೆ ಇದ್ದು ಸರಕಾರ ಹೆಚ್ಚುವರಿಯಾಗಿ ಚಾಲಕ/ ನಿರ್ವಾಹಕರನ್ನು ನೇಮಕ ಮಾಡುವಂತೆ ಸಾರಿಗೆ ಹಾಗೂಮುಜರಾಯಿ ಖಾತೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಶಾಸಕ ಅಶೋಕ್ ರೈ ಯವರು ಮನವಿ ಸಲ್ಲಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನುಭೇಟಿಯಾದ ಶಾಸಕರು ಪುತ್ತೂರು ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಬಸ್ ಸಂಚಾರ ಹೆಚ್ಚುವರಿಯಾಗಿ ವ್ಯವಸ್ಥೆ ಮಾಡುವಲ್ಲಿ ಚಾಲಕ/ ನಿರ್ವಾಹಕರ ಕೊರತೆ ಇದೆ. ಬಸ್ ಇದ್ದರೂ ಚಾಲಕರ ಕೊರತೆಯಿಂದ ಗ್ರಾಮೀಣ ಭಾಗಕ್ಕೆ ಬಸ್ ಓಡಾಟ ನಡೆಸಲು ಅಸಾಧ್ಯವಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಹೆಚ್ಚುವರಿಯಾಗಿ ಚಾಲಕ/ ನಿರ್ವಾಹಕರನ್ನು ನೇಮಿಸುವಂತೆ ಸಚಿವರಲ್ಲಿ ಮನವಿ ಸಲ್ಲಿಸಿದ್ದಾರೆ.
ಅಂತರರಾಜ್ಯ ಬಸ್ ಸಂಚಾರಕ್ಕೆ ಮನವಿ ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಗೆ ಪುತ್ತೂರಿನಿಂದ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭ ಮಾಡಲು ಇಲಾಖೆಯಿಂದ ಅನುಮತಿನೀಡುವಂತೆಯೂ ಸಚಿವರಲ್ಲಿಮನವಿ ಸಲ್ಲಿಸಿದರು.