ಬಂಟ್ವಾಳ: ಬಾಳೆಕಲ್ಲು ಗರಡಿಮನೆ ಶ್ರೀ ಕೊರಗಪ್ಪ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ದೇವಕಿ(85 ವ ) ಇವರು 21.10.2024 ನೇ ಸೋಮವಾರ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ನಿನ್ನೆ ಸಂಜೆ ಅವರು ನಿಧನರಾಗಿದ್ದಾರೆ. ಮೃತರು ಪತಿ ಮತ್ತು ಒಂದು ಗಂಡು, ಆರು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮನೆಗೆ ಬಂದವರಿಗೆ ಸದಾ ಕಾಲ ಊಟ ತಿಂಡಿ ನೀಡೋ ಭಾಗ್ಯದೇವತೆ :
ಬಾಲೆಕಲ್ಲು ಗರಡಿ ಮನೆತನದಲ್ಲಿ ಹಿರಿಯ ಮಹಿಳೆಯಾಗಿದ್ದು.. ಎಲ್ಲರಿಗೂ ತುಂಬಾ ಪ್ರೀತಿಪಾತ್ರರಾಗಿದ್ದು, ಮನೆಗೆ ಯಾರೇ ಬರಲಿ,ಕಾಫಿ. ತಿಂಡಿ. ಊಟ. ಮಾಡಿಕೊಂಡೆ ಹೋಗಿ ಎಂದು ಹೇಳುವ, ಒಂದು ತಾಯಿ ಪ್ರೀತಿ ತೋರುವ, ಒಬ್ಬರು ಉದಾತ್ತಾ ಮನಸ್ಸಿನ ಎಲ್ಲರ ತಾಯಿ ಎಂದು ಹೇಳಿದರೂ ತಪ್ಪಿಲ್ಲ.