• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!

November 3, 2024
ಜಾತಕದಲ್ಲಿ ದೋಷವಿದೆ ಎಂದು ಯುವತಿ ಮೇಲೆ ಸಮಸ್ಯೆ ನಿವಾರಣೆ ನೆಪದಲ್ಲಿ ಜ್ಯೋತಿಷಿ ಅತ್ಯಾಚಾರ

ಜಾತಕದಲ್ಲಿ ದೋಷವಿದೆ ಎಂದು ಯುವತಿ ಮೇಲೆ ಸಮಸ್ಯೆ ನಿವಾರಣೆ ನೆಪದಲ್ಲಿ ಜ್ಯೋತಿಷಿ ಅತ್ಯಾಚಾರ

February 5, 2026
ಅನಧಿಕೃತವಾಗಿ ನೆಲೆಸಿರುವ ವಿದೇಶಿಯರಿಗೆ ನಡುಕ ಶುರು: ಅಕ್ರಮ ವಲಸಿಗರ ಪತ್ತೆಗೆ ರಾಜ್ಯದಲ್ಲಿ ವಿಶೇಷ ಕಾರ್ಯಾಚರಣೆ

ಅನಧಿಕೃತವಾಗಿ ನೆಲೆಸಿರುವ ವಿದೇಶಿಯರಿಗೆ ನಡುಕ ಶುರು: ಅಕ್ರಮ ವಲಸಿಗರ ಪತ್ತೆಗೆ ರಾಜ್ಯದಲ್ಲಿ ವಿಶೇಷ ಕಾರ್ಯಾಚರಣೆ

February 5, 2026
ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ ಕುಂತೂರಿನ ಕೋಡ್ಲದ, ಫೋಟೋಗ್ರಾಫರ್ ರವಿ ಪೂಜಾರಿ

ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ ಕುಂತೂರಿನ ಕೋಡ್ಲದ, ಫೋಟೋಗ್ರಾಫರ್ ರವಿ ಪೂಜಾರಿ

February 4, 2026
ಹಳೆ ನ್ಯಾಯಾಲಯದ ಕಟ್ಟಡಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸಿ: ಮಾಜಿ ಶಾಸಕ ಸಂಜೀವ ಮಠಂದೂರು

ಹಳೆ ನ್ಯಾಯಾಲಯದ ಕಟ್ಟಡಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸಿ: ಮಾಜಿ ಶಾಸಕ ಸಂಜೀವ ಮಠಂದೂರು

February 4, 2026
ಬಂದಾರು: ಹುಟ್ಟೂರಿಗೆ ಆಗಮಿಸಿದ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ಶ್ರೀ ದೇವಪ್ರಸಾದ್ ಗೌಡರಿಗೆ ಗೌರವಪೂರ್ಣ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

ಬಂದಾರು: ಹುಟ್ಟೂರಿಗೆ ಆಗಮಿಸಿದ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ಶ್ರೀ ದೇವಪ್ರಸಾದ್ ಗೌಡರಿಗೆ ಗೌರವಪೂರ್ಣ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

February 3, 2026
ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ

February 3, 2026
ಕೊಡಿಂಬಾಡಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ: ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿ – ರೋಹಿತ್ ಕುಮಾರ್

ಕೊಡಿಂಬಾಡಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ: ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿ – ರೋಹಿತ್ ಕುಮಾರ್

February 3, 2026
ನಾಟಿ ಕೋಳಿಗೆ ಏರಿದ ಬೇಡಿಕೆ: ಆರೋಗ್ಯದತ್ತ ಜನರ ಒಲವು

ನಾಟಿ ಕೋಳಿಗೆ ಏರಿದ ಬೇಡಿಕೆ: ಆರೋಗ್ಯದತ್ತ ಜನರ ಒಲವು

February 2, 2026
ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಹೋರಾಟ

ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟ

February 2, 2026
ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದ ಬಾಲಮೇಳ – ಸ್ತ್ರೀಶಕ್ತಿ ಬೆಳ್ಳಿಹಬ್ಬ

ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದ ಬಾಲಮೇಳ – ಸ್ತ್ರೀಶಕ್ತಿ ಬೆಳ್ಳಿಹಬ್ಬ

February 2, 2026
ಕೋಡಿಂಬಾಡಿ ಅರ್ಬಿ ಗುಡ್ಡದಲ್ಲಿ ಬೆಂಕಿ!

ಕೋಡಿಂಬಾಡಿ ಅರ್ಬಿ ಗುಡ್ಡದಲ್ಲಿ ಬೆಂಕಿ!

February 1, 2026
ಕೋಡಿಯಾಡಿಗುತ್ತು ಧರ್ಮಚಾವಡಿಯಲ್ಲಿ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಕೋಡಿಯಾಡಿಗುತ್ತು ಧರ್ಮಚಾವಡಿಯಲ್ಲಿ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

February 1, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, February 5, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ ಕುಂತೂರಿನ ಕೋಡ್ಲದ, ಫೋಟೋಗ್ರಾಫರ್ ರವಿ ಪೂಜಾರಿ

    ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ ಕುಂತೂರಿನ ಕೋಡ್ಲದ, ಫೋಟೋಗ್ರಾಫರ್ ರವಿ ಪೂಜಾರಿ

    ಹಳೆ ನ್ಯಾಯಾಲಯದ ಕಟ್ಟಡಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸಿ: ಮಾಜಿ ಶಾಸಕ ಸಂಜೀವ ಮಠಂದೂರು

    ಹಳೆ ನ್ಯಾಯಾಲಯದ ಕಟ್ಟಡಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸಿ: ಮಾಜಿ ಶಾಸಕ ಸಂಜೀವ ಮಠಂದೂರು

    ಬಂದಾರು: ಹುಟ್ಟೂರಿಗೆ ಆಗಮಿಸಿದ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ಶ್ರೀ ದೇವಪ್ರಸಾದ್ ಗೌಡರಿಗೆ ಗೌರವಪೂರ್ಣ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

    ಬಂದಾರು: ಹುಟ್ಟೂರಿಗೆ ಆಗಮಿಸಿದ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ಶ್ರೀ ದೇವಪ್ರಸಾದ್ ಗೌಡರಿಗೆ ಗೌರವಪೂರ್ಣ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

    ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ

    ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ

    ಕೊಡಿಂಬಾಡಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ: ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿ – ರೋಹಿತ್ ಕುಮಾರ್

    ಕೊಡಿಂಬಾಡಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ: ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿ – ರೋಹಿತ್ ಕುಮಾರ್

    ನಾಟಿ ಕೋಳಿಗೆ ಏರಿದ ಬೇಡಿಕೆ: ಆರೋಗ್ಯದತ್ತ ಜನರ ಒಲವು

    ನಾಟಿ ಕೋಳಿಗೆ ಏರಿದ ಬೇಡಿಕೆ: ಆರೋಗ್ಯದತ್ತ ಜನರ ಒಲವು

    ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಹೋರಾಟ

    ತುಳುನಾಡಿನ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟ

    ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದ ಬಾಲಮೇಳ – ಸ್ತ್ರೀಶಕ್ತಿ ಬೆಳ್ಳಿಹಬ್ಬ

    ಬೆಳ್ಳಿಪ್ಪಾಡಿ ಅಂಗನವಾಡಿ ಕೇಂದ್ರದ ಬಾಲಮೇಳ – ಸ್ತ್ರೀಶಕ್ತಿ ಬೆಳ್ಳಿಹಬ್ಬ

    ಕೋಡಿಂಬಾಡಿ ಅರ್ಬಿ ಗುಡ್ಡದಲ್ಲಿ ಬೆಂಕಿ!

    ಕೋಡಿಂಬಾಡಿ ಅರ್ಬಿ ಗುಡ್ಡದಲ್ಲಿ ಬೆಂಕಿ!

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರರಾಜ್ಯ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!

by ಪ್ರಜಾಧ್ವನಿ ನ್ಯೂಸ್
November 3, 2024
in ಅಂತರರಾಜ್ಯ, ಕ್ರೈಮ್, ಬೆಂಗಳೂರು, ಮಂಗಳೂರು, ಮೈಸೂರು
0
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..!
68
SHARES
195
VIEWS
ShareShareShare

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್‌ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..! ಏಕೆಂದರೆ, ಸೈಬರ್‌ ವಂಚಕರು ಹೂಡಿಕೆ ತಜ್ಞರ ಹೆಸರಲ್ಲಿ ಕೋಟ್ಯಂತರ ರೂ. ಲಪಟಾಯಿಸುತ್ತಿದ್ದಾರೆ. ಈ ವಂಚನೆ ಜಾಲಕ್ಕೆ ಬಿದ್ದವರು ಪ್ರತಿನಿತ್ಯ ನಗರದ ಸೈಬರ್‌ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.

ಹೌದು, ಷೇರು ಮಾರುಕಟ್ಟೆ ಲಾಭದ ‘ಅಸ್ತ್ರ’ವನ್ನೇ ನಾಗರಿಕರ ಮೇಲೆ ಪ್ರಯೋಗಿಸುತ್ತಿರುವ ಸೈಬರ್‌ ವಂಚಕರು, ಹೂಡಿಕೆ ಸಲಹೆ ಹಾಗೂ ದುಪ್ಪಟ್ಟು ಲಾಭದ ಆಮಿಷವೊಡ್ಡಿ ಸಾಮಾಜಿಕ ಜಾಲತಾಣಗಳ ಮೂಲಕ ಬಲೆ ಬೀಸುತ್ತಿದ್ದಾರೆ. ಆಮಿಷಕ್ಕೆ ಸಿಲುಕಿದ ಐಟಿ ಉದ್ಯೋಗಿಗಳು, ಖಾಸಗಿ ಕಂಪನಿಗಳ ನೌಕರರು, ಉದ್ಯಮಿಗಳು ಹಾಗೂ ಮಹಿಳೆಯರ ಬ್ಯಾಂಕ್‌ ಖಾತೆಗಳನ್ನು ಬರಿದು ಮಾಡುತ್ತಿದ್ದಾರೆ. ಪರಿಣಾಮ ಕಳೆದ 9 ತಿಂಗಳಲ್ಲಿ ಟ್ರೇಡಿಂಗ್‌ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣಗಳೇ ನಗರದಲ್ಲಿ ಒಂದು ಸಾವಿರಕ್ಕೂ ಅಧಿಕ ಕೇಸ್‌ಗಳು ವರದಿಯಾಗಿದ್ದು, 100 ಕೋಟಿ ರೂ.ಗಳಿಗೂ ಹೆಚ್ಚು ವಂಚನೆಯಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನೇ ಕೇಂದ್ರ ಸ್ಥಾನ ಮಾಡಿಕೊಂಡಿರುವ ಸೈಬರ್‌ ವಂಚಕರು ವಾಟ್ಸಾಪ್‌, ಟೆಲಿಗ್ರಾಂ, ಇನ್‌ಸ್ಟಾಗ್ರಾಂಗಳಲ್ಲಿ ಆಕ್ಟೀವ್‌ ಆಗಿದ್ದಾರೆ. ಟ್ರೇಡಿಂಗ್‌ ಕುರಿತ ಸಲಹೆ ನೀಡುವುದಾಗಿ ಆನ್‌ಲೈನ್‌ ಲಿಂಕ್‌ಗಳನ್ನು ರಾಂಡಮ್‌ ಆಗಿ ಕಳಿಸುತ್ತಾರೆ. ಕ್ಲಿಕ್‌ ಮಾಡಿದವರು ವಾಟ್ಸಾಪ್‌ ಗ್ರೂಪ್‌ಗೆ ಸೇರ್ಪಡೆಗೊಳ್ಳುತ್ತಾರೆ. ಈ ಗ್ರೂಪ್‌ನಲ್ಲಿ ಟ್ರೇಡಿಂಗ್‌, ಲಾಭ ಮತ್ತಿತರ ವಿಚಾರಗಳ ಕುರಿತ ಚರ್ಚೆ, ವಿಡಿಯೊಗಳ ಜತೆಗೆ ಲಾಭ ಗಳಿಸಿದವರ ಸಕ್ಸೆಸ್‌ ಸ್ಟೋರಿಗಳ ಕುರಿತು ಹೆಚ್ಚು ಚರ್ಚೆ ನಡೆಯಲಿವೆ. ಈ ನಕಲಿ ಗ್ರೂಪ್‌ನ ಚರ್ಚೆಗಳನ್ನು ನಂಬಿ ಹೂಡಿಕೆ ಆಸಕ್ತಿ ತೋರಿಸಿದವರಿಗೆ ಖೆಡ್ಡಾ ತೋಡುವ ವಂಚಕರು, ನಕಲಿ ಷೇರು ಮಾರುಕಟ್ಟೆ ಕಂಪನಿಗಳ ಹೆಸರು ಹೇಳಿ ಒಂದು ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

camera center ad

ಜಾಹೀರಾತು

ಹೂಡಿಕೆಯಲ್ಲಿ ಲಾಭ ಗಳಿಸುವ ಆಸೆಯಿಂದ ಬ್ಯಾಂಕ್‌ ಖಾತೆಯಲ್ಲಿ ಕೂಡಿಟ್ಟ ಹಣವನ್ನು ವಂಚಕರು ಹೇಳಿದಂತೆ ಹಂತ- ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಾರೆ. ಎಐ ತಂತ್ರಜ್ಞಾನ ಬಳಸುವ ವಂಚಕರು ಹೂಡಿಕೆ ಹಣಕ್ಕೆ ಲಾಭ ಬಂದಿದೆ ಎಂದು ಸುಳ್ಳೇ ಸುಳ್ಳು ಬ್ಯಾಲೆನ್ಸ್‌ ಶೀಟ್‌ ತೋರಿಸುತ್ತಾರೆ. ಇದನ್ನು ನಿಜ ಎಂದು ನಂಬುವ ಅಮಾಯಕರು, ಮತ್ತಷ್ಟು ಹಣ ವರ್ಗಾವಣೆ ಮಾಡುತ್ತಾರೆ. ಅಂತಿಮವಾಗಿ ಹಣ ಖಾಲಿಯಾದ ಬಳಿಕ ತಾವೂ ಹೂಡಿಕೆ ಮಾಡಿದ ಹಣ ಡ್ರಾ ಮಾಡಲು ಮುಂದಾದಾಗ ವಂಚಕರು ಮತ್ತಷ್ಟು ಹೂಡಿಕೆ ಮಾಡಿದರೆ ಮಾತ್ರ ಡ್ರಾ ಮಾಡಬಹುದು ಎಂಬ ಷರತ್ತು ವಿಧಿಸುತ್ತಾರೆ. ಆ ಬಳಿಕವಷ್ಟೇ ತಾವು ಮೋಸ ಹೋಗಿರುವುದು ಗೊತ್ತಾಗಿ ಠಾಣೆಗಳಿಗೆ ದೂರು ನೀಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ತಂತ್ರಜ್ಞಾನವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ವಂಚಕರು ಷೇರುಮಾರುಕಟ್ಟೆ ಅಧಿಕೃತ ಕಂಪನಿಗಳ ಹೆಸರಲ್ಲಿ ನಕಲಿ ವೆಬ್‌ಸೈಟ್‌, ಆ್ಯಪ್‌ಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಟ್ರೇಡಿಂಗ್‌ ಕುರಿತ ಆಸೆ ಹಾಗೂ ಜ್ಞಾನದ ಕೊರತೆಯಿಂದ ವಂಚಕರ ಗಾಳಕ್ಕೆ ಸಿಲುಕುತ್ತಿರುವ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸೈಬರ್‌ ತಜ್ಞ ಡಾ. ಹರ್ಷ.

ಷೇರು ಹೂಡಿಕೆ ಕುರಿತು ಆಸಕ್ತಿ ಹೊಂದಿರುವವರು ತಾವು ಖಾತೆ ಹೊಂದಿರುವ ಬ್ಯಾಂಕ್‌ಗಳನ್ನೇ ಸಂಪರ್ಕಿಸಿ ಸಲಹೆ ಪಡೆಯಬೇಕು. ಈ ಮಾರ್ಗದಲ್ಲಿ ಹೂಡಿಕೆ ಮಾಡಿದರೆ ಅಪಾಯ ಇರುವುದಿಲ್ಲ. ಜತೆಗೆ, ಒಂದು ವೇಳೆ ಮೋಸ ಹೋದರೂ ಬ್ಯಾಂಕ್‌ ಜವಾಬ್ದಾರಿ ಇರಲಿದೆ ಎಂದು ಡಾ. ಹರ್ಷ ತಿಳಿಸುತ್ತಾರೆ.

Poorna squash

ಜಾಹೀರಾತು

ಸಾಮಾಜಿಕ ಜಾಲತಾಣ, ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಲಿಂಕ್‌ ಕಳಿಸಿ ಹೂಡಿಕೆಯಲ್ಲಿ ಲಾಭ ಮಾಡಿಸಿಕೊಡುತ್ತೇವೆ ಎಂದು ಲಿಂಕ್‌ ಕಳಿಸಿದರೆ ನಂಬಲೇಬಾರದು. ಏಕೆಂದರೆ, ಈ ಲಿಂಕ್‌ಗಳು ಶೇ 99ರಷ್ಟು ವಂಚನೆ ಸಲುವಾಗಿಯೇ ಸೃಷ್ಟಿಸಲಾಗಿರುತ್ತದೆ. ಹೂಡಿಕೆ ಕುರಿತ ಆ್ಯಪ್‌ ಡೌನ್‌ಲೋಡ್‌ ಮಾಡಿ ಎಂದು ಹೇಳಿದ ಕೂಡಲೇ ಡೌನ್‌ಲೋಡ್‌ ಮಾಡಬಾರದು. ಮೊದಲಿಗೆ ಅಂತಹ ಆ್ಯಪ್‌ನ ಅಧಿಕೃತತೆ ತಿಳಿಯಬೇಕು. ಇಂಟರ್ನೆಟ್‌ ಯುಗದಲ್ಲಿ ಅಧಿಕೃತತೆ ತಿಳಿಯುವುದು ಅಸಾಧ್ಯ ಏನಲ್ಲ. ಮೊದಲಿಗೆ ಆ್ಯಪ್‌ನ ಕಚೇರಿ ಎಲ್ಲಿದೆ? ಅದರ ವಹಿವಾಟು ಯಾವ ದೇಶದಲ್ಲಿ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯಬೇಕು. ಇಲ್ಲವಾದಲ್ಲಿ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವುದು ನಿಶ್ಚಿತ ಎಂದು ಅವರು ಹೇಳುತ್ತಾರೆ.

ashwinistudioputtur

ಜಾಹೀರಾತು

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ, ಉದ್ಯಮಿ ಮುಖೇಶ್‌ ಅಂಬಾನಿ ಹೆಸರಿನಲ್ಲಿಸೈಬರ್‌ ವಂಚಕರು ಟ್ರೇಡಿಂಗ್‌ ಕುರಿತು ಸೃಷ್ಟಿಸಿದ್ದ ನಕಲಿ ಜಾಹೀರಾತು ನಂಬಿದ ವೃದ್ಧರೊಬ್ಬರು 19 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಅಶೋಕ್‌ (ಹೆಸರು ಬದಲಿಸಲಾಗಿದೆ) ಬೆಂಗಳೂರು ಗ್ರಾಮಾಂತರ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ನಾರಾಯಣಮೂರ್ತಿ ಹಾಗೂ ಅಂಬಾನಿ ಅವರು ಹೂಡಿಕೆ ಕಂಪನಿಯೊಂದರ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ನೋಡಿದ್ದರು. ಬಳಿಕ ವಿಡಿಯೋ ಆಧರಿಸಿ ವಂಚಕರು ಕಳಿಸಿದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರು. ವಂಚಕರು ತಿಳಿಸಿದಂತೆ ಹಂತ- ಹಂತವಾಗಿ 19 ಲಕ್ಷ ರೂ.ವರ್ಗಾಯಿಸಿದ್ದಾರೆ. ಅಂತಿಮವಾಗಿ ತಾವು ಮೋಸ ಹೋಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Muliya

ಜಾಹೀರಾತು

SendShare27Share
Previous Post

ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಾರು ಕದಿಯುವ ಖದೀಮರ ಬಂಧನ

Next Post

ಪುತ್ತೂರು; ತಲೆಬುರುಡೆ ಪತ್ತೆ – ಮಹಿಳೆಯೋರ್ವರು ಕುಂಬ್ರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಂಕೆ…!?

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..