ಮಂಗಳೂರು: ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕ್ತಿ ಗಾಯಗೊಂಡ ಘಟನೆ ವಾಮಂಜೂರಿನಲ್ಲಿ ನಡೆದಿದೆ.
ಸಫ್ವಾನ್ ಎಂಬಾತ ಗಾಯಗೊಂಡ ವ್ಯಕ್ತಿಯಾಗಿದ್ದಾನೆ.
ವಾಮಂಜೂರಿನ ಗ್ಯಾರೇಜ್ ಒಂದರಲ್ಲಿ ಈ ಘಟನೆ ನಡೆದಿದೆ. ರಿವಾಲ್ವರ್ ಒಂದನ್ನು ಸಫ್ವಾನ್ ಪರಿಶೀಲಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ್ದು ಪರಿಣಾಮ ಸಫ್ವಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಇದೊಂದು ಆಕಸ್ಮಿಕ ಘಟನೆ ಎಂದು ತಿಳಿದುಬಂದಿದೆ. ಈತ ಕೆಲವು ವರ್ಷಗಳ ಹಿಂದೆ ನಡೆದ ಚರಣ್ ಎಂಬಾತನ ಕೊಲೆ ಪ್ರಕರಣ ಆರೋಪಿಯಾಗಿದ್ದು, ಸದ್ಯ ಈತನಿಗೆ ಆಕಸ್ಮಿಕವಾಗಿ ಗುಂಡೇಟು ತಗುಲಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.