ನಾನು ಕೂಡ ಮನುಷ್ಯ ಸಹಜ ತಪ್ಪು ಮಾಡಿದ್ದೇನೆ. ನಾನೇನೂ ದೇವರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕರ್ನಾಟಕ ಮೂಲದ ಯುವ ಉದ್ಯಮಿ ಝೆರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನನಗೆ ನರ್ವಸ್ ಅನಿಸುತ್ತಿದೆ. ಇದು ನನಗೆ ಕಠಿಣವಾಗಿದ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ನಾನು ಮೊದಲ ಬಾರಿಗೆ ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾಗುತ್ತಿದ್ದೇನೆ. ಗೊತ್ತಿಲ್ಲಾ ಇದು ಹೇಗೆ ಸಾಗುತ್ತದೆಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಜಕೀಯಕ್ಕೆ ಸೇರಲು ಬಯಸುವ ಯುವಕರಿಗೆ ಸಲಹೆ ನೀಡುವಂತೆ ನಿಖಿಲ್ ಕೇಳಿದ್ದಾರೆ. ಇದಕ್ಕೆ ಉತ್ತರಿಸುತ್ತಾ, ಯಾವಾಗಲೂ ಒಳ್ಳೆಯ ಜನರು ರಾಜಕಾರಣಿಗಳಾಗಬೇಕು. ಅವರು ಕೇವಲ ಮಹತ್ವಾಕಾಂಕ್ಷೆಯೊಂದಿಗೆ ಬರಬೇಕು ಎಂದು ಮೋದಿ ಹೇಳಿದ್ದಾರೆ. ಗುಜರಾತ್ ಸಿಎಂ ಆಗಿದ್ದ ಸಂದರ್ಭದಲ್ಲಿ ನಾನು ಕೂಡ ಮನುಷ್ಯ ಸಹಜ ತಪ್ಪು ಮಾಡಿದ್ದೇನೆ. ನಾನೇನೂ ದೇವರಲ್ಲ. ಇದಲ್ಲದೆ, ಪ್ರಸ್ತುತ ದಿನಗಳಲ್ಲಿ ವಿಶ್ವದಾದ್ಯಂತ ಸಂಭವಿಸುತ್ತಿರುವ ಯುದ್ಧಗಳ ಬಗ್ಗೆ ಚರ್ಚಿಸಿದ್ದಾರೆ. ‘ಭಾರತ ಈಗ ತಟಸ್ಥವಲ್ಲ, ಶಾಂತಿಯ ಕಡೆ ಇರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗಿದ್ದು, ಪೂರ್ಣ ಸಂಚಿಕೆಗಾಗಿ ಜನರು ಎದುರು ನೋಡುತ್ತಿದ್ದಾರೆ.