ನಮ್ಮ ವ್ಯವಸ್ಥೆ ಹಾಳಾಗಿದೆ ಎನ್ನುವ ಆರೋಪಗಳನ್ನು ನಾವು-ನೀವೆಲ್ಲಾ ಸಾಕಷ್ಟು ಬಾರಿ ಮಾತನಾಡುವುದನ್ನು ಕೇಳಿರುತ್ತೇವೆ. ಈ ವ್ಯವಸ್ಥೆ ಸರಿ ಆಗೋದೇ ಇಲ್ಲ ಬಿಡು ಎಂದು ಸುಮ್ಮನಾಗಿಬೀಡುತ್ತೇವೆ. ಅದರಲ್ಲೂ ಪೊಲೀಸ್ ವ್ಯವಸ್ಥೆ ಬಗ್ಗೆ ಸಾಕಷ್ಟು ಆರೋಪಗಳನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಇದೀಗ ಅದೇ ರೀತಿ ಪೊಲೀಸ್ ವ್ಯವಸ್ಥೆ ಮೇಲೆ ವ್ಯಕ್ತಿಯೊಬ್ಬ ಆರೋಪ ಮಾಡಿದ್ದು, ಆ ವ್ಯಕ್ತಿ ಮಾಡಿರುವ ಕೆಲಸ ನೋಡಿದ್ರೆ ಬೆಚ್ಚಿಬೀಳುತ್ತೀರಾ…
ಯಾದಗಿರಿಯ ಕೊಡೇಕಲ್ ಮೂಲದ ಶರೀಫ್ ಎನ್ನುವ ವ್ಯಕ್ತಿ ಎಕ್ಸ್‌ನಲ್ಲಿ ತಲ್ವಾರ್‌ಗಳ ಫೋಟೊ ಅಪ್ಲೋಡ್ ಮಾಡಿ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದಾನೆ. ನಮ್ಮ ಮನೆಯ ಎಲ್ಲಾ ದಾಖಲೆಯು ಇದೆ. ನಮ್ಮ ಮನೆ ಕಟ್ಟುತ್ತಿರುವಾಗ ಜೀವ ಬೆದರಿಕೆ ಹಾಕಿದ್ದಾರೆ. ನಾವು ಪೊಲೀಸ್ ಠಾನೆಯಲ್ಲಿ ದೂರು ಕೊಡೋಕೆ ಹೋದ್ರೆ ಅಲ್ಲಿ ಯಾರೂ ಕೇರ್ ಮಾಡಲ್ಲ ಎಂದು ಆರೋಪ ಮಾಡಿದ್ದಾನೆ.
ಠಾಣೆಗೆ ಎಂಎಲ್‌ಎ, ಪಿಎ ಯಿಂದ ಹೇಳಸ್ತಾರೆ ಹಾಗಾಗಿ ಪೊಲೀಸರು ಕೇರ್ ಮಾಡಲ್ಲ. ಅದಕ್ಕೆ ನಾನು ಇದೇ ತಲ್ವಾರ್‌ನಿಂದ ಮರ್ಡರ್ ಮಾಡ್ತೀನಿ ಇಲ್ಲ ಅಂದ್ರೆ ಎಫ್‌ಐಆರ್ ತಗೋಳಿ ಎಂದು ಪೊಲೀಸರಿಗೆ ವಾರ್ನಿಂಗ್ ಕೊಟ್ಟಿದ್ದಾನೆ. ಈ ವ್ಯಕ್ತಿ ಮಾಡಿದ ಪೊಸ್ಟ್‌ಗೆ ಬೆಂಗಳೂರು ಸಿಟಿ ಪೊಲೀಸ್ ಖಾತೆಯಿಂದ ಯಾವ ಪೊಲೀಸ್ ಠಾಣೆಗೆ ನೀವು ಹೋಗಿದ್ರಿ ಎಂದು ಪ್ರಶ್ನೆ ಕೇಳಲಾಗಿದೆ.
ಅದಕ್ಕೆ ಉತ್ತರಿಸಿದ ವ್ಯಕ್ತಿ, ಕೊಡೇಕಲ್ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದೆ. ದಯವಿಟ್ಟು ಕ್ರಮ ಕೈಗೊಳ್ಳಲು ಹೇಳಿಎಂದು ಮನವಿ ಮಾಡಿದ್ದಾನೆ. ನಮ್ಮ ಅಪ್ಪ ಒಂಲದು ತಿಂಗಳಿನಿಂದ ಪೊಲೀಸ್ ಠಾಣೆಗೆ ತಿರುಗಾಡಿದರು. ಆದರೂ ಪ್ರಯೋಜನವಾಗಿಲ್ಲ. ಬಡವರು ಅಂತ ಯಾರೂ ಕೇರ್ ಮಾಡಲ್ಲ ಎಂದು ಆರೋಪ ಮಾಡಿದ್ದಾರೆ. ನೀವು ಕ್ರಮ ಕೈಗೊಳ್ಳದಿದ್ರೆ ನಾನು ನನ್ನ ಕಾನೂನು ಉಪಯೋಗ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.