ಪುತ್ತೂರು : ಪುತ್ತೂರಿನ ಕೋ- ಆಪರೇಟಿವ್ ಟೌನ್ ಬ್ಯಾಂಕ್ ಲಿ.. ಇದರ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಯುವ ನಾಯಕ ರಂಜಿತ್ ಬಂಗೇರ ಕೆ. ಇವರು ಹಿಂದುಳಿದ ಪ್ರವರ್ಗ ‘ಎ ‘ಮೀಸಲು ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.
ರಂಜಿತ್ ಬಂಗೇರ ಇವರು B. E. (Civil )M . Tech ಪದವೀಧರನಾಗಿದ್ದು, ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಪ್ರಸ್ತುತ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ..
ಸಹಕಾರಿ ತತ್ವದ ಆದರ್ಶವನ್ನು ಮೈಗೂಡಿಸಿಕೊಂಡು ಸಹಕಾರಿ ತತ್ವದಡಿಯಲ್ಲಿ ಸಾರ್ವಜನಿಕ ಸೇವೆ ಮಾಡಬೇಕೆಂಬ ಮಹತ್ತರವಾದ ದ್ಯೆಯೋದ್ದೇಶದಿಂದ 1908ರಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿಂದ ಸ್ಥಾಪಿತವಾದ ಪುತ್ತೂರು ಕೋ- ಆಪರೇಟಿವ್ ಟೌನ್ ಬ್ಯಾಂಕಿನ ಈ ಸಲದ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ.
ಒಬ್ಬ ವಿದ್ಯಾವಂತ ನಾಯಕನಾಗಿ, ಹಲವು ಸಂಘಟನೆಗಳಲ್ಲಿ ದುಡಿದು ಅನುಭವ ಹೊಂದಿದ, ಸರಳ ಹಾಗೂ ಮೃದು ಮನೋಭಾವದ ವ್ಯಕ್ತಿತ್ವ ಹೊಂದಿದ್ದು,
ಈ ಸಲದ ಚುನಾವಣೆಯಲ್ಲಿ, ಅವರು ತನ್ನ ” ಬ್ರೆಡ್ ” ಚಿಹ್ನೆಗೆ ತಮ್ಮೆಲ್ಲರ ಅಮೂಲ್ಯವಾದ ಮತಗಳನ್ನು ನೀಡಿ ಗೆಲ್ಲಿಸಿಕೊಡಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.