ಪುತ್ತೂರು: ಕೋಟ್ಯಾನು ಕೋಟಿ ಹಿಂದೂ ಭಕ್ತರ ಪವಿತ್ರ ಸ್ಥಳ-ಕುಂಭ ಮೇಳ ನಡೆಯುತ್ತಿರುವ ಪವಿತ್ರ ತೀರ್ಥ ಸ್ಥಳವಾದ ಗಂಗೆಯಲ್ಲಿ ಸ್ನಾನ ಮಾಡುತ್ತಿರುವ ಭಕ್ತರನ್ನು ಅವಮಾನಗೊಳಿಸಿರುವ ಹಿಂದೂ ವಿರೋಧಿಯಾದ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ರಾಷ್ಟ್ರಪತಿಯವರಿಗೆ ಪುತ್ತೂರಿನ ಹಿಂದೂ ಬಾಂಧವರ ಪರವಾಗಿ ಸಹಾಯಕ ಕಮಿಷನರ್ ಮೂಲಕ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಟ್ಯಾನುಕೋಟಿ ಹಿಂದೂ ಭಕ್ತರ ಪವಿತ್ರ ಸ್ಥಳವಾಗಿರುವ ಗಂಗಾ ನದಿಯ ಸಂಗಮ ಕ್ಷೇತ್ರದಲ್ಲಿ 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ನಮ್ಮ ದೇಶದ ಗೃಹ ಸಚಿವ ಹಾಗೂ ಭಕ್ತರ ಬಗ್ಗೆ ಹೀಯಾಳಿಸುತ್ತಾ, `ಪವಿತ್ರ ಸ್ನಾನ ಮಾಡುವುದರಿಂದ ಬಡತನ ನಿವಾರಣೆ ಆಗುತ್ತಾ’ ಎಂಬ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಉಡಾಫೆಯ ಮಾತಿನಿಂದ ಸಮಸ್ತ ಹಿಂದೂಗಳ ಭಾವನೆಗೆ ಫಾಸಿಯಾಗಿರುತ್ತದೆ. ಪವಿತ್ರ ಸ್ಥಳ ಗಂಗೆಯಲ್ಲಿ ಸ್ನಾನ ಮಾಡಿದರೆ ಸರ್ವ ಪಾಪಗಳು ಪರಿಹಾರ ಆಗುತ್ತದೆ ಎಂದು ನಮ್ಮ ಪೂರ್ವಿಕರ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ ಹಾಗೂ ನಂಬಿಕೆ. ಕೇವಲ ಭಾರತೀಯರಲ್ಲದೇ ವಿದೇಶಿಯರೂ ಸಹ ಪವಿತ್ರ ಸ್ನಾನಕ್ಕೆ ಬರುತ್ತಿದ್ದಾರೆ. ಇದಲ್ಲದೇ ಹಿಂದೂಯೇತರರೂ ಸ್ನಾನ ಮಾಡಿದ ಬಗ್ಗೆ ಈಗಾಗಲೇ ಪತ್ರಿಕೆಯಲ್ಲಿ ನೋಡಿರುತ್ತೇವೆ.
ಆದ್ದರಿಂದ ನಮ್ಮ ಧರ್ಮ ಮತ್ತು ಪವಿತ್ರ ಗಂಗೆಯ ಬಗ್ಗೆ ಕೇವಲವಾಗಿ ಮಾತನ್ನಾಡಿರುವ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇರದಿದ್ದರೂ ಹಿಂದೂ ಹೆಸರನ್ನಿಟ್ಟುಕೊಂಡಿರುವ ಹಿಂದೂ ವಿರೋಧಿಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರಾಜಕೀಯವಾಗಿ ನಮ್ಮ ಸನಾತನ ಧರ್ಮವನ್ನು ಹೀಯಾಳಿಸುತ್ತಿರುವ ಹಿಂದೂ ವಿರೋಧಿಗಳು ನಿಮ್ಮ ನಿಮ್ಮ ಪಕ್ಷಗಳೊಳಗೆ ನಮ್ಮ ಸನಾತನವಾಗಿರುವ ಧರ್ಮ, ನಮ್ಮ ಸಂಸ್ಕøತಿ, ಆಚರಣೆಯ ಬಗ್ಗೆ ಅವಮಾನಿಸುವ ಷಡ್ಯಂತ್ರಕ್ಕೆ ತಡೆ ನೀಡುವಂತೆ ಮಾನ್ಯ ರಾಷ್ಟ್ರಪತಿಯವರನ್ನು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಬಾಲಚಂದ್ರ ಸೊರಕೆ, ಕೃಷ್ಣ ನಾಯ್ಕ ಪರ್ಲಡ್ಕ, ಗೋಪಾಲ್ ವಿಟ್ಲ, ವೇಣುಗೋಪಾಲ ಮಣಿಯಾಣಿ, ಸುರೇಶ್ ಬೊಳುವಾರು, ಶ್ರೀಧರ ಪೂಜಾರಿ, ಮಧ್ವರಾಜ್ ನಗರ, ಅರುಣ್ ಸಾರಥಿಯ, ಸಂದೇಶ್ ನಾಯ್ಕ್, ಸಚಿನ್, ಬಾಬಾ ಪ್ರಕಾಶ್ ಶೆಟ್ಟಿ, ಚೇತನ್ ಭರತ್‍ಪುರ, ಶಿವು ಸಾಲ್ಯಾನ್, ಪದ್ಮಯ್ಯ ಗೌಡ ಕಡ್ಯ, ಸ್ವಾಮಿ ಮಾಧವ, ಮಹೇಶ್ ಕುಮಾರ್ ಪುತ್ತೂರು, ಮಹಾಬಲ, ಸಂದೇಶ್ ನಾಯ್ಕ್ ಕೆಯ್ಯೂರು, ಕಿರಣ್ ಕುಮಾರ್, ಪ್ರಸಾದ್ ರೈ ಮತ್ತಿತರರು ಉಪಸ್ಥಿತರಿದ್ದರು.