ಪುತ್ತೂರು : ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಫೆ. 03 ರಿಂದ ಫೆ. 04 ರ ವರೆಗೆ ಜರಗಿತು.
ಫೆ. 03.ರಂದು ಬೆಳಿಗ್ಗೆ 9.00ಕ್ಕೆ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ನಂತರ ತೋರಣ ಮುಹೂರ್ತ ಕಾರ್ಯಕ್ರಮವು ಜರಗಿತು. 10.00 ಗಂಟೆಗೆ ಉಗ್ರಾಣ ಮುಹೂರ್ತ ಕಾರ್ಯಕ್ರಮ ನೆರವೇರಿಸಿ, ಗ್ರಾಮಸ್ಥರಿಂದ ಬಂದ ಹಸಿರು ಹೊರೆ ಕಾಣಿಕೆಯನ್ನು ದೇವರಿಗೆ ಸಮರ್ಪಿಸಲಾಯಿತು.
ತದನಂತರ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಮಹಾ ವಿಷ್ಣು
ದೇವರ ಸ್ವಾಗತ ಗೋಪುರ ಉದ್ಘಾಟನೆ ಕಾರ್ಯಕ್ರಮ ಜರಗಿತು.
ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು.
ಸಂಜೆ ಮಹಾಪೂಜೆ ಬಳಿಕ ದೇವರ ಬಲಿ ಹೊರಟು, ಶ್ರೀ ಭೂತ ಬಲಿ ಉತ್ಸವ, ವಸಂತಕಟ್ಟೆ ಪೂಜೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಫೆ. 04 ರಂದು ಬೆಳಿಗ್ಗೆ. ಮಹಾ ಗಣಪತಿ ಹೋಮ, ಕಲಶ ಪೂಜೆ, ಆ ಬಳಿಕ ಈ ದೇವರ ಬಲಿ ಹೊರಟು ಉತ್ಸವ, ” ದರ್ಶನ ಬಲಿ” ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ನಂತರ ದೇವರಿಗೆ ಕಲಶಾಭಿಷೇಕ, ಮಹಾಪೂಜೆ ನಡೆದು, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಶ್ರೀ ದೇವರ ಅನ್ನಪ್ರಸಾದವನ್ನು ಸ್ವೀಕರಿಸಿದರು, ಶ್ರೀ ಮಹಾ ವಿಷ್ಣು ದೇವರ ಜಾತ್ರೆಯಲ್ಲಿ ” ವಿಶೇಷ ಪುಷ್ಪಾಲಂಕಾರ ಸೇವೆ”ಯನ್ನು ಶ್ರೀ ವಿಷ್ಣು ಯುವಕ ಮಂಡಲ (ರಿ). ಕೆಮ್ಮಾಯಿ ಇವರು ನೀಡಿರುತ್ತಾರೆ.
ರಾತ್ರಿ ಶ್ರೀ ದೇವರಿಗೆ ರಂಗ ಪೂಜೆ ನಡೆದು ಪ್ರಸಾದ ವಿತರಣೆ ನಂತರ ದೈವದ ಭಂಡಾರ ತೆಗೆಯುವುದು, ಆ ಬಳಿಕ ಪಿಲಿಭೂತ ದೈವದ ನೇಮ ನಡಾವಳಿಗಳು ನಡೆದು ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಶ್ರೀ ದೇವರ ಸನ್ನಿಧಿಯಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ” ವಾರ್ಷಿಕ ಜಾತ್ರೆ”ಯ ವೈದಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.