ಬೆಂಗಳೂರು: ರಾತ್ರೋರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪ್ರತಿಕಾರದ ದಾಳಿ ಮಾಡಲಾಗಿದೆ. ಇತ್ತ ಕರ್ನಾಟಕ ಸೇರಿ ದೇಶಾದ್ಯಂತ ಇಂದು ಮಾಕ್ ಡ್ರಿಲ್ ನಡೆಯಲಿದೆ. ಯುದ್ಧ ನಡೆದರೆ ಏನೆಲ್ಲಾ ಪದ್ಧತಿ, ರೀತಿ ರಿವಾಜುಗಳನ್ನು ಪಾಲಿಸಬೇಕೆಂದು ಭದ್ರತಾ ಪಡೆ ಪಾಠ ಮಾಡಲಿದೆ. ದೇಶದ ನಾಗರಿಕರು, ಜನಸಾಮಾನ್ಯರನ್ನೂ ಯುದ್ಧಕ್ಕೆ ಭಾರತ ಸರ್ಕಾರ ಅಣಿಗೊಳಿಸಲು ತಯಾರಾಗಿದೆ. ಬೆಂಗಳೂರಿನಲ್ಲಿ ಇಂದು ಸಂಜೆ 5.30ರಿಂದ ಸಂಜೆ 7 ಗಂಟೆಯವರೆಗೆ ಮಾಕ್ ಡ್ರಿಲ್ ನಡೆಯುವ ಸಾಧ್ಯತೆ ಇದೆ. ದೇಶಾದ್ಯಂತ ನಡೆಯಲಿರುವ ಮಾಕ್ ಡ್ರಿಲ್ ಲೈವ್ ನೋಡಿ.