ಮಂಗಳೂರು: ಮದುವೆ ವಿಚಾರಕ್ಕೆ ನಡೆದ ಗಲಾಟೆ, ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಮಂಗಳೂರು ಹೊರವಲಯದ ವಳಚ್ಚಿಲ್ ಬಳಿ ತಡರಾತ್ರಿ ನಡೆದಿದೆ. ಚಾಕುವಿನಿಂದ ಇರಿದು ವಾಮಂಜೂರು ನಿವಾಸಿ ಸುಲೇಮಾನ್(50) ಎಂಬಾತನನ್ನು ಸಂಬಂಧಿ ಮುಸ್ತಾಫನಿಂದ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಸುಲೇಮಾನ್ನ ಇಬ್ಬರ ಪುತ್ರರಾದ ರಿಯಾಬ್, ಸಿಯಾಬ್ ಮೇಲೂ ಹಲ್ಲೆ ನಡೆಸಿ ಪರಾರಿ ಆಗಿದ್ದ ಮುಸ್ತಾಫನನ್ನು ಕೆಲವೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸಂಬಂಧಿ ಮುಸ್ತಫ ಎಂಬವರ ಮದುವೆಯನ್ನು ಸುಲೇಮಾನ್ ನೆರವೇರಿಸಿದ್ದ. ಇವರಿಬ್ಬರ ನಡುವೆ ಮದುವೆ ಸಂದರ್ಭದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರವಾಗಿ ಮುಸ್ತಫ ಜೊತೆ ಮಾತುಕತೆಗೆ ತನ್ನ ಇಬ್ಬರು ಪುತ್ರರೊಂದಿಗೆ ಸುಲೇಮಾನ್ ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸುಲೇಮಾನ್ಗೆ ಮುಸ್ತಫ ಚೂರಿಯಿಂದ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಸುಲೇಮಾನ್ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಮುಸ್ತಫನನ್ನು ಪೊಲೀಸರು ಬಂಧಿಸಿದ್ದಾರೆ.