ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಗದ್ದಲದ ನಡುವೆಯೇ ಹೊಸ ಸಂಪುಟ ರಚನೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ, ಬಿರುಸಿನ ಚಟುವಟಿಕೆಗಳು ನಡೆಯಲಾರಂಭಿಸಿವೆ.
ಮಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯುಟಿ ಖಾದರ್ ಅವರು, ‘ಈಗ ನಾನು ಸ್ಪೀಕರ್ ಆಗಿದ್ದೇನೆ. ಮುಂದೆ ಏನಾಗುತ್ತದೆ ಎಂಬುದು ನನಗೂ ಗೊತ್ತಿಲ್ಲ. ಸಮಯ ಅದನ್ನು ನಿರ್ಧರಿಸುತ್ತದೆ’ ಎಂದು ಪ್ರತಿಕ್ರಿಯಿಸಿದರು. ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದ ಅವರು, ‘ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಯ ಬಂದಾಗ ಎಲ್ಲವೂ ಗೊತ್ತಾಗುತ್ತದೆ’ ಎಂದರು.
ಸರ್ಕಾರ ಯಾವಾಗ ಅಧಿವೇಶನ ನಡೆಸಲು ತೀರ್ಮಾನಿಸುತ್ತೆ ಆಗ ಮಾತ್ರ ಸುಸೂತ್ರವಾಗಿ ಸದನ ನಡೆಸುತ್ತೇವೆ. ಯಾರು ಯಾರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಆಡಳಿತ ಪಕ್ಷದ ಪ್ರಮುಖರು ತೀರ್ಮಾನ ಮಾಡ್ತಾರೆ. ಹೀಗಾಗಿ ನಾನು ಡಿಸಿಎಂ ಆಗಬೇಕೆಂಬ ಪೋಸ್ಟ್ ಅನ್ನು ಯಾರೂ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಬೇಡಿ. ಯಾರು ಸಿಎಂ ಆಗಬೇಕು, ಯಾರು ಮಂತ್ರಿಗಳಾಗದೇಕು ಎಲ್ಲವೂ ಪಕ್ಷದ ನಿರ್ಧಾರಕ್ಕೆ ಬಿಟ್ಟಿದ್ದು. ಎಲ್ಲ ವಿಚಾರಗಳನ್ನ ನಾನು ನಿಮ್ಮ ಮುಂದೆ ಹೇಳಿದ್ರೆ ಗುಟ್ಟು ಉಳಿಯುತ್ತದ ಎಂದು ಲಘುವಾಗಿ ನಕ್ಕರು.
ಎಲ್ಲಾ ವಿಚಾರಗಳು ಪಕ್ಷಕ್ಕೂ ಪಕ್ಷದ ಮುಖಂಡರಿಗೆ ಬಿಟ್ಟಿದ್ದು, ಏನು ಬರ್ತದೆ ಅಂತ ನೋಡುವ. ಇವತ್ತು ಸಂತೋಷದಿಂದ ಹಬ್ಬ ಆಚರಿಸುವ. ನಿಮಗೆ ನಿಮ್ಮ ಮೂಲಕವೇ ಸಿಹಿ ಸುದ್ದಿ ಬರಲಿದೆ. ನಾನು ಬೆಂಗಳೂರಿಗೆ ಹೋಗುವ ಬಗ್ಗೆ ತೀರ್ಮಾನಿಸಿಲ್ಲ. ಇವತ್ತು ಹಬ್ಬ ಇರೋದ್ರಿಂದ ಸಂತೋಷದಿಂದ ಹಬ್ಬ ಆಚರಿಸೋದು ನನ್ನ ಕರ್ತವ್ಯ ಎಂದರು.

























