ಬೆಂಗಳೂರು: ಲೋಕಸಭಾ ಚುನಾವಣೆಯ ಎರಡು ಹಂತದಲ್ಲಿ ಪ್ರಚಾರ ನಡೆಸಿ ಸುಸ್ತಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯ ವಿಶ್ರಾಂತಿ ಮೂಡ್‌ಗೆ ಜಾರಿದ್ದಾರೆ. ಮಂಗಳವಾರದಿಂದ ಅವರು ಮೂರು ದಿನಗಳ ಕಾಲ ಊಟಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ರಾಜ್ಯದಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಇದೀಗ ತೆರೆಬಿದ್ದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರಿ ನಿವಾಸದಲ್ಲಿ ಸಿಎಂ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಮಂಗಳವಾರ ಅವರು ಊಟಿಗೆ ತೆರಳಲಿದ್ದಾರೆ. ಊಟಿಯಲ್ಲಿ ಮೂರು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಹಸಿರಿನ ವಾತಾವರಣದಿಂದ ಕೂಡಿರುವ ಊಟಿಯಲ್ಲಿ ಸದ್ಯ ರಾಜ್ಯದಲ್ಲಿ ಇರುವಷ್ಟು ಬಿಸಿ ವಾತಾವರಣ ಇಲ್ಲ. ಹೀಗಾಗಿ ಆಪ್ತರ ಸಲಹೆಯ ಮೇರೆಗೆ ಅವರು ಊಟಿಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸದ್ಯ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇದೆ. ಆದರೆ ಊಟಿಯಲ್ಲಿ 22 ಸೆಲ್ಸಿಯಸ್ ತಾಪಮಾನ ಇದೆ. ಊಟಿಯಲ್ಲಿ ತಕ್ಕಮಟ್ಟಿಗೆ ತಂಪಾದ ವಾತಾವರಣ ಇರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಊಟಿಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯಗೆ ಆಪ್ತರು ಊಟಿ ಪ್ರವಾಸದ ಸಂದರ್ಭದಲ್ಲಿ ಸಾಥ್ ನೀಡುವ ಸಾಧ್ಯತೆ ಇದೆ. ಊಟಿಯಲ್ಲಿ ಸಿಎಂ ಜೊತೆಗೆ ಅವರೂ ಕಾಲ ಕಳೆಯುವ ಸಾಧ್ಯತೆ ಇದೆ.