• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಆಸೆಗೆ ಬಿದ್ದ ವ್ಯಕ್ತಿ : ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

June 19, 2026
ಸಾಮಾಜಿಕ ಜಾಲತಾಣದಲ್ಲಿ ತೇಜೋವದೆ – ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆಯಿಂದ ಪೊಲೀಸರಿಗೆ ದೂರು

November 7, 2026
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಎ ನಿಧನ

ಶೇ 31.2 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ – ಸಚಿವ  ರಿಜ್ವಾನ್ ಆರ್ಷದ್. ಆರೋಪ ತಳ್ಳಿ ಹಾಕಿದ ತೈಲ ಕಂಪನಿ

ನವವಿವಾಹಿತೆ ಸಾವಿನ ಪ್ರಕರಣ: ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಅದ್ಭುತ ಪಾಕಪ್ರತಿಭೆ, ಪಾಕಶಾಸ್ತ್ರ ಕ್ಷೇತ್ರದ ‘ನಳಪಾಕ’ ವೆಂಕಟೇಶ್ ಭಟ್ ಪಾವಂಜೆ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ!

ಸಣ್ಣ ಎಡವಟ್ಟು ಕೂಡ ಮಕ್ಕಳ ಜೀವಕ್ಕೇ ಆಪತ್ತು : ಅಜ್ಜಿಯ ಕೆಮ್ಮಿನ ಸಿರಪ್ ಕುಡಿದು 4 ವರ್ಷದ ಮಗು ಸಾವು

ಪ್ರೇಮ ಸಂಬಂಧದ ಗರ್ಭಿಣಿಯಾಗಿದ್ದ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ, ಕೊಲೆ ಯತ್ನ! ಆರೋಪಿ ಬಂಧನ

November 6, 2026
ಕೌಟುಂಬಿಕ ಕಲಹ  ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ, ಸಾವಿನ ದವಡೆಯಿಂದ ಪಾರು

ಮುಂದಿನ ಎಲ್ಲಾ ಸ್ಥಳೀಯ ಚುನಾವಣೆಗಳಿಗೆ  ಮತಪತ್ರ ಬಳಕೆ : ಸಚಿವ ಈಶ್ವರ ಖಂಡ್ರೆ

ಪೆಟ್ರೋಲ್‌ನಲ್ಲಿ ಶೇ.20 ಕ್ಕಿಂತಲೂ ಹೆಚ್ಚು ಎಥೆನಾಲ್ ಮಿಶ್ರಣ, ತೈಲ ಕಂಪನಿಗಳಿಗೆ ಲಾಭ _ ಇದು ವಾಹನಗಳ ದಕ್ಷತೆಗೆ ತೀವ್ರ ಧಕ್ಕೆ :- ಸಚಿವ ರಿಜ್ವಾನ್ ಅರ್ಷದ್

ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

November 6, 2026
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 5 ಕೋಟಿ ಅನುದಾನ ಮಂಜೂರು ಆದೇಶ ಪತ್ರ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Sunday, November 8, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಸಾಮಾಜಿಕ ಜಾಲತಾಣದಲ್ಲಿ ತೇಜೋವದೆ – ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆಯಿಂದ ಪೊಲೀಸರಿಗೆ ದೂರು

    ಸಾಮಾಜಿಕ ಜಾಲತಾಣದಲ್ಲಿ ತೇಜೋವದೆ – ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆಯಿಂದ ಪೊಲೀಸರಿಗೆ ದೂರು

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಎ ನಿಧನ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಎ ನಿಧನ

    ಶೇ 31.2 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ – ಸಚಿವ  ರಿಜ್ವಾನ್ ಆರ್ಷದ್. ಆರೋಪ ತಳ್ಳಿ ಹಾಕಿದ ತೈಲ ಕಂಪನಿ

    ಶೇ 31.2 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ – ಸಚಿವ ರಿಜ್ವಾನ್ ಆರ್ಷದ್. ಆರೋಪ ತಳ್ಳಿ ಹಾಕಿದ ತೈಲ ಕಂಪನಿ

    ನವವಿವಾಹಿತೆ ಸಾವಿನ ಪ್ರಕರಣ: ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

    ನವವಿವಾಹಿತೆ ಸಾವಿನ ಪ್ರಕರಣ: ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

    ಅದ್ಭುತ ಪಾಕಪ್ರತಿಭೆ, ಪಾಕಶಾಸ್ತ್ರ ಕ್ಷೇತ್ರದ ‘ನಳಪಾಕ’ ವೆಂಕಟೇಶ್ ಭಟ್ ಪಾವಂಜೆ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ!

    ಅದ್ಭುತ ಪಾಕಪ್ರತಿಭೆ, ಪಾಕಶಾಸ್ತ್ರ ಕ್ಷೇತ್ರದ ‘ನಳಪಾಕ’ ವೆಂಕಟೇಶ್ ಭಟ್ ಪಾವಂಜೆ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ!

    ಪ್ರೇಮ ಸಂಬಂಧದ ಗರ್ಭಿಣಿಯಾಗಿದ್ದ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ, ಕೊಲೆ ಯತ್ನ! ಆರೋಪಿ ಬಂಧನ

    ಪ್ರೇಮ ಸಂಬಂಧದ ಗರ್ಭಿಣಿಯಾಗಿದ್ದ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ, ಕೊಲೆ ಯತ್ನ! ಆರೋಪಿ ಬಂಧನ

    ಕೌಟುಂಬಿಕ ಕಲಹ  ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ, ಸಾವಿನ ದವಡೆಯಿಂದ ಪಾರು

    ಕೌಟುಂಬಿಕ ಕಲಹ ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ, ಸಾವಿನ ದವಡೆಯಿಂದ ಪಾರು

    ಮುಂದಿನ ಎಲ್ಲಾ ಸ್ಥಳೀಯ ಚುನಾವಣೆಗಳಿಗೆ  ಮತಪತ್ರ ಬಳಕೆ : ಸಚಿವ ಈಶ್ವರ ಖಂಡ್ರೆ

    ಮುಂದಿನ ಎಲ್ಲಾ ಸ್ಥಳೀಯ ಚುನಾವಣೆಗಳಿಗೆ ಮತಪತ್ರ ಬಳಕೆ : ಸಚಿವ ಈಶ್ವರ ಖಂಡ್ರೆ

    ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

    ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಕ್ರೈಮ್

ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಆಸೆಗೆ ಬಿದ್ದ ವ್ಯಕ್ತಿ : ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

by ಪ್ರಜಾಧ್ವನಿ ನ್ಯೂಸ್
June 19, 2026
in ಕ್ರೈಮ್, ರಾಜ್ಯ
0
ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಆಸೆಗೆ ಬಿದ್ದ ವ್ಯಕ್ತಿ : ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!
12
SHARES
35
VIEWS
ShareShareShare

ಬೆಂಗಳೂರು, ಜೂನ್ 17: ಸ್ಮಾರ್ಟ್‌ಫೋನ್‌ನಲ್ಲಿ ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ನಂಬಿಸಿದ ಸೈಬರ್ ವಂಚಕನೊಬ್ಬ, ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಇನ್‌ಸ್ಟಂಟ್ ಲೋನ್ ಮಾಡಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ನಿವಾಸಿ, 50 ವರ್ಷದ ವ್ಯಕ್ತಿ ಈ ಜಾಲಕ್ಕೆ ಬಲಿಯಾದವರಾಗಿದ್ದಾರೆ. ಕೇವಲ 30 ನಿಮಿಷಗಳ ಅವಧಿಯಲ್ಲಿ ವಂಚಕರು ಇವರ ಬ್ಯಾಂಕ್ ಖಾತೆಯನ್ನು ಸಂಪೂರ್ಣ ಹ್ಯಾಕ್ ಮಾಡಿ ಈ ಕೃತ್ಯ ಎಸಗಿದ್ದಾರೆ.

ಜೂನ್ 13 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಈ ವ್ಯಕ್ತಿಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ತಾನು ಪ್ರಮುಖ ಟೆಲಿಕಾಂ ಕಂಪನಿಯೊಂದರ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡ ವಂಚಕ, ನಿಮ್ಮ ಮೊಬೈಲ್ ಸಿಮ್ ಅನ್ನು ಉಚಿತವಾಗಿ 5G ಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ಆಮಿಷ ಒಡ್ಡಿದ್ದ.

ಅವನ ಮಾತು ನಂಬಿದ್ದ ವ್ಯಕ್ತಿ ಆತ ಕೇಳಿದ ಇಐಡಿ (Embedded Identity Document) ಸಂಖ್ಯೆಯನ್ನು ನೀಡಿದ್ದಾರೆ. ಈ ಸಂಖ್ಯೆಯನ್ನು ಬಳಸಿಕೊಂಡು ವಂಚಕರು ವ್ಯಕ್ತಿಯ ಭೌತಿಕ ಸಿಮ್ ಅನ್ನು ತಕ್ಷಣವೇ ತಮ್ಮದೇ ಆದ ಬೇರೆ ಡಿವೈಸ್‌ನಲ್ಲಿ ‘ಇ-ಸಿಮ್’ (e-SIM) ಆಗಿ ಬದಲಾಯಿಸಿಕೊಂಡಿದ್ದಾರೆ. ಸಿಮ್ ಕಾರ್ಡ್ ವಂಚಕರ ಕೈ ಸೇರಿದ ಬೆನ್ನಲ್ಲೇ ವ್ಯಕ್ತಿಯ ಮೊಬೈಲ್ ನೆಟ್‌ವರ್ಕ್ ಕಡಿತಗೊಂಡಿದೆ.

8722552464 Astrloger

ಜಾಹೀರಾತು

ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯ ಸಂಪೂರ್ಣ ನಿಯಂತ್ರಣ ಸಾಧಿಸಿದ ಸೈಬರ್ ಅಪರಾಧಿಗಳು, ಅವರ ಬ್ಯಾಂಕಿಂಗ್ ವಿವರಗಳನ್ನು ಹ್ಯಾಕ್ ಮಾಡಿದ್ದಾರೆ. ಬಳಿಕ ವ್ಯಕ್ತಿಗೆ ತಿಳಿಯದಂತೆ ಅವರದೇ ಬ್ಯಾಂಕ್ ಖಾತೆಯ ಮೂಲಕ 15 ಲಕ್ಷ ರೂಪಾಯಿಗಳ ಇನ್‌ಸ್ಟಂಟ್ ಲೋನ್‌ಗೆ ಅರ್ಜಿ ಸಲ್ಲಿಸಿ, ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ.

ಮಂಜೂರಾದ 15 ಲಕ್ಷ ರೂ. ಸಾಲದ ಮೊತ್ತದಲ್ಲಿ ಸುಮಾರು 14.6 ಲಕ್ಷ ರೂ. ಖಾತೆಗೆ ಜಮೆಯಾಗಿದೆ. ವಂಚಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಧ್ಯಾಹ್ನ 3:30 ರ ವೇಳೆಗೆ ಆ ಖಾತೆಯಿಂದ 2.2 ಲಕ್ಷ ರೂಪಾಯಿಗಳನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಅದೃಷ್ಟವಶಾತ್, ತನ್ನ ಬ್ಯಾಂಕ್ ಖಾತೆಯಲ್ಲಿ ಏನೋ ಅಕ್ರಮ ನಡೆಯುತ್ತಿದೆ ಎಂಬುದನ್ನು ತಕ್ಷಣವೇ ಅರಿತ ವ್ಯಕ್ತಿ, ತಡಮಾಡದೆ ಬ್ಯಾಂಕ್ ಮತ್ತು ಸೈಬರ್ ಕ್ರೈಮ್ ಹೆಲ್ಪ್‌ಲೈನ್‌ಗೆ ದೂರು ನೀಡಿ ಖಾತೆಯನ್ನು ಫ್ರೀಜ್ ಮಾಡಿಸಿದ್ದಾರೆ. ಹೀಗಾಗಿ ಉಳಿದ ಹಣ ವಂಚಕರ ಪಾಲಾಗುವುದು ತಪ್ಪಿದೆ.

ಜೂನ್ 15 ರಂದು ಕೇಂದ್ರ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಭೌತಿಕ ಸಿಮ್ ಅನ್ನು ಇ-ಸಿಮ್ ಆಗಿ ಬದಲಾಯಿಸುವಾಗ ಸಾರ್ವಜನಿಕರು ಒಟಿಪಿ ಅಥವಾ ಯಾವುದೇ ಗೌಪ್ಯ ಸಂಖ್ಯೆಗಳನ್ನು ಹಂಚಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಜಾಹೀರಾತು

LOTUS TRAVEL

ಜಾಹೀರಾತು

SendShare5Share
Previous Post

56ನೇ ವರ್ಷಕ್ಕೆ ಕಾಲಿಟ್ಟ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ – ಮೋದಿ ಶುಭಾಶಯ

Next Post

ಉಪ್ಪಿನಂಗಡಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ – ಇಬ್ಬರ ಬಂಧನ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಉಪ್ಪಿನಂಗಡಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ – ಇಬ್ಬರ ಬಂಧನ

ಉಪ್ಪಿನಂಗಡಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ - ಇಬ್ಬರ ಬಂಧನ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In