ಪುತ್ತೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪುತ್ತೂರಿನಲ್ಲಿ ನಡೆಯಲಿರುವ ತಿರಂಗ ಯಾತ್ರೆಯ ಯಶಸ್ಸಿಗಾಗಿ ದೇವಸ್ಥಾನದಲ್ಲಿ ತುಪ್ಪದ ದೀಪ ಬೆಳಗಿಸಿದ ಸಿ.ಟಿ. ರವಿ ಅವರು, ಶ್ರೀ ದೇವರ ಸನ್ನಿಧಿಯಲ್ಲಿ ತಿರಂಗ ಯಾತ್ರೆ ಯಶಸ್ವಿಯಾಗಿ ನೆರವೇರಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗಾಗಿ ಪ್ರಾರ್ಥಿಸಿದರು. ನಂತರ ಕೋರ್ಟ್ ರೋಡ್ ಬಳಿ ಇರುವ ಕಾರಣಿಕದ ಶ್ರೀ ಶಾಂತದುರ್ಗ ದೇವಿಯ ಗುಡಿಗೆ ಭೇಟಿ ನೀಡಿ ದೇವಿ ದರ್ಶನವನ್ನು ಮಾಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸೇರಿದಂತೆ ಬಿಜೆಪಿ ಮುಖಂಡರು, ದೇವಸ್ಥಾನದ ಪದಾಧಿಕಾರಿಗಳು ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ದೇವಸ್ಥಾನದ ಅರ್ಚಕರು ಸಿ.ಟಿ. ರವಿ ಅವರಿಗೆ ಪ್ರಸಾದ ಹಾಗೂ ತೀರ್ಥ ನೀಡಿ ಗೌರವಿಸಿದರು.























