ಪುತ್ತೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆ ಸುರಿದಿದೆ .
ಕೆಮ್ಮಿಂಜೆ ಗ್ರಾಮದ ಕರೆಜ್ಜ ಕೋಡಿಜಾಲು ಬಳಿ ಗಾಳಿ ಮಳೆಗೆ ಮರ, ವಿದ್ಯುತ್ ಕಂಬ ಬಿದ್ದು 10 ಮನೆಗೆ ಸಂಪರ್ಕ ರಸ್ತೆ ಕಡಿತ
ಗುಡುಗು ಮಿಂಚಿನೊಂದಿಗೆ ಮಳೆ ಆರಂಭವಾಗಿದ್ದು ದಿಢೀರ್ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಪುತ್ತೂರು ನಗರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಬಿರು ಬಿಸಿಲ ಬೇಗೆಯಿಂದ ಒಣಗಿದ ಇಳೆಗೆ ಸುರಿದ ಮಳೆ ತಂಪೆರೆಯುವುದರೊಂದಿಗೆ ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಮಳೆ ಸಿಂಚನದಿಂದ ಜನತೆ ನಿರಾಳರಾಗಿದ್ದಾರೆ.