• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನರ ಸಮಸ್ಯೆಗಳಿಗೆ ಸ್ಪಂದಿಸದ ಧೋರಣೆಯನ್ನು ಖಂಡಿಸಿ  ಬಿಜೆಪಿಯಿಂದ ಬೃಹತ್‌ ಪಾದಯಾತ್ರೆ! – ಮಾಜಿ ಶಾಸಕ ಸಂಜೀವ ಮಠಂದೂರು 

October 29, 2026

ಕೆದಿಲ ವ್ಯವಸಾಯ ಸಹಕಾರಿ ಸಂಘದಲ್ಲಿ ಕೃಷಿಕ ಗ್ರಾಹಕರು ಇಟ್ಟಿದ್ದ ಕೋಟ್ಯಂತರ ಹಣ ಸಮೀರಾ ಎಂಬ ಮಹಿಳೆಗೆ ಸುರಿದುಬಿಟ್ಟ ಸೊಸೈಟಿ ಸಿಇಓ ಕೇಶವ ಗೌಡ

October 29, 2026
ಯುವತಿಗೆ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಆರೋಪಿ ವಿರುದ್ಧ ದೂರು ದಾಖಲು

ಕೋಡಿಂಬಾಡಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ ಚಾಲಕ ಸಾವು

October 28, 2026
ಪುತ್ತೂರು ಶಾಸಕರು ತೆಂಗಿನಕಾಯಿ ಒಡೆಯುವುದು ಬಿಟ್ಟರೆ ಕೆಲಸ ಆರಂಭವಾಗಿದ್ದು ನೋಡಿಲ್ಲ! – ಉಜ್ವಲ್‌ ಪ್ರಭು

October 27, 2026
ಗಿರಿಜಾ ಕಲ್ಯಾಣೋತ್ಸವ ಮತ್ತು ಕೇಸರಿ ಸಂಗಮ ಕಾರ್ಯಕ್ರಮದಲ್ಲಿ ಹಿಂದುಗಳೆಲ್ಲರು ಪಾಲ್ಗೊಳ್ಳಬೇಕು: ಡಾ। ಸುರೇಶ್ ಪುತ್ತೂರಾಯ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರ ಆಕ್ರೋಶ

ಪುತ್ತೂರು ಬಪ್ಪಳಿಗೆಯ ನಿವಾಸಿ ಮಾಜಿ ಸೈನಿಕ ಸುಬೇಧಾ‌ರ್ ಭಾಸ್ಕರ್ ಬಿ.ಎಲ್ ನಿಧನ

ಬೀಚ್‌ನಲ್ಲಿ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಯುವಕ ಆತ್ಮಹತ್ಯೆ!

ಖರ್ಗೆ ಹೇಳಿಕೆ ವಿರುದ್ಧ  ಬಿಜೆಪಿಯ ಪ್ರತಿಭಟನೆಗೆ  ಬಿ. ಕೆ. ಹರಿಪ್ರಸಾದ್ ಟಾಂಗ್

ಸಿದ್ದರಾಮಯ್ಯ ವಿರುದ್ಧದ  ನಕಲಿ ಸ್ಟಿಂಗ್ ಪ್ರಕರಣದ ಹಿಂದೆ ಕೃಪಾ ಆಳ್ವಾ : ಕುಮಾರಸ್ವಾಮಿ ಗಂಭೀರ ಆರೋಪ

ಸೌಜನ್ಯ ಪ್ರಕರಣ ಈ ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ ಎಸ್ ಐ ಟಿ ನೋಟಿಸ್

ಪ್ರಥಮ ಬಾರಿಗೆ ಪುತ್ತೂರು ಒಡೆಯನ ಸನ್ನಿದಿಯಲ್ಲಿ ನಡೆಯುವ “ಪುತ್ತೂರು ದೀಪೋತ್ಸವ 2026” ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, October 29, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ

    ಕೆದಿಲ ವ್ಯವಸಾಯ ಸಹಕಾರಿ ಸಂಘದಲ್ಲಿ ಕೃಷಿಕ ಗ್ರಾಹಕರು ಇಟ್ಟಿದ್ದ ಕೋಟ್ಯಂತರ ಹಣ ಸಮೀರಾ ಎಂಬ ಮಹಿಳೆಗೆ ಸುರಿದುಬಿಟ್ಟ ಸೊಸೈಟಿ ಸಿಇಓ ಕೇಶವ ಗೌಡ

    ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನರ ಸಮಸ್ಯೆಗಳಿಗೆ ಸ್ಪಂದಿಸದ ಧೋರಣೆಯನ್ನು ಖಂಡಿಸಿ  ಬಿಜೆಪಿಯಿಂದ ಬೃಹತ್‌ ಪಾದಯಾತ್ರೆ! – ಮಾಜಿ ಶಾಸಕ ಸಂಜೀವ ಮಠಂದೂರು 

    ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನರ ಸಮಸ್ಯೆಗಳಿಗೆ ಸ್ಪಂದಿಸದ ಧೋರಣೆಯನ್ನು ಖಂಡಿಸಿ  ಬಿಜೆಪಿಯಿಂದ ಬೃಹತ್‌ ಪಾದಯಾತ್ರೆ! – ಮಾಜಿ ಶಾಸಕ ಸಂಜೀವ ಮಠಂದೂರು 

    ಯುವತಿಗೆ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಆರೋಪಿ ವಿರುದ್ಧ ದೂರು ದಾಖಲು

    ಯುವತಿಗೆ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಆರೋಪಿ ವಿರುದ್ಧ ದೂರು ದಾಖಲು

    ಕೋಡಿಂಬಾಡಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ ಚಾಲಕ ಸಾವು

    ಕೋಡಿಂಬಾಡಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ ಚಾಲಕ ಸಾವು

    ಪುತ್ತೂರು ಶಾಸಕರು ತೆಂಗಿನಕಾಯಿ ಒಡೆಯುವುದು ಬಿಟ್ಟರೆ ಕೆಲಸ ಆರಂಭವಾಗಿದ್ದು ನೋಡಿಲ್ಲ! – ಉಜ್ವಲ್‌ ಪ್ರಭು

    ಪುತ್ತೂರು ಶಾಸಕರು ತೆಂಗಿನಕಾಯಿ ಒಡೆಯುವುದು ಬಿಟ್ಟರೆ ಕೆಲಸ ಆರಂಭವಾಗಿದ್ದು ನೋಡಿಲ್ಲ! – ಉಜ್ವಲ್‌ ಪ್ರಭು

    ಗಿರಿಜಾ ಕಲ್ಯಾಣೋತ್ಸವ ಮತ್ತು ಕೇಸರಿ ಸಂಗಮ ಕಾರ್ಯಕ್ರಮದಲ್ಲಿ ಹಿಂದುಗಳೆಲ್ಲರು ಪಾಲ್ಗೊಳ್ಳಬೇಕು: ಡಾ। ಸುರೇಶ್ ಪುತ್ತೂರಾಯ

    ಗಿರಿಜಾ ಕಲ್ಯಾಣೋತ್ಸವ ಮತ್ತು ಕೇಸರಿ ಸಂಗಮ ಕಾರ್ಯಕ್ರಮದಲ್ಲಿ ಹಿಂದುಗಳೆಲ್ಲರು ಪಾಲ್ಗೊಳ್ಳಬೇಕು: ಡಾ। ಸುರೇಶ್ ಪುತ್ತೂರಾಯ

    ಪುತ್ತೂರು ಬಪ್ಪಳಿಗೆಯ ನಿವಾಸಿ ಮಾಜಿ ಸೈನಿಕ ಸುಬೇಧಾ‌ರ್ ಭಾಸ್ಕರ್ ಬಿ.ಎಲ್ ನಿಧನ

    ಪುತ್ತೂರು ಬಪ್ಪಳಿಗೆಯ ನಿವಾಸಿ ಮಾಜಿ ಸೈನಿಕ ಸುಬೇಧಾ‌ರ್ ಭಾಸ್ಕರ್ ಬಿ.ಎಲ್ ನಿಧನ

    ಸಿದ್ದರಾಮಯ್ಯ ವಿರುದ್ಧದ  ನಕಲಿ ಸ್ಟಿಂಗ್ ಪ್ರಕರಣದ ಹಿಂದೆ ಕೃಪಾ ಆಳ್ವಾ : ಕುಮಾರಸ್ವಾಮಿ ಗಂಭೀರ ಆರೋಪ

    ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್ ಪ್ರಕರಣದ ಹಿಂದೆ ಕೃಪಾ ಆಳ್ವಾ : ಕುಮಾರಸ್ವಾಮಿ ಗಂಭೀರ ಆರೋಪ

    ಸೌಜನ್ಯ ಪ್ರಕರಣ ಈ ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ ಎಸ್ ಐ ಟಿ ನೋಟಿಸ್

    ಸೌಜನ್ಯ ಪ್ರಕರಣ ಈ ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ ಎಸ್ ಐ ಟಿ ನೋಟಿಸ್

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಈಶ್ವಮಂಗಲ

ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನರ ಸಮಸ್ಯೆಗಳಿಗೆ ಸ್ಪಂದಿಸದ ಧೋರಣೆಯನ್ನು ಖಂಡಿಸಿ  ಬಿಜೆಪಿಯಿಂದ ಬೃಹತ್‌ ಪಾದಯಾತ್ರೆ! – ಮಾಜಿ ಶಾಸಕ ಸಂಜೀವ ಮಠಂದೂರು 

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ ನೀಡುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು

by ಪ್ರಜಾಧ್ವನಿ ನ್ಯೂಸ್
October 29, 2026
in ಈಶ್ವಮಂಗಲ, ಉಪ್ಪಿನಂಗಡಿ, ಕುಂಬ್ರ, ಪುಣಚ, ಪುತ್ತೂರು, ಪ್ರಾದೇಶಿಕ, ಮಾಣಿ, ವಿಟ್ಲ
0
ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನರ ಸಮಸ್ಯೆಗಳಿಗೆ ಸ್ಪಂದಿಸದ ಧೋರಣೆಯನ್ನು ಖಂಡಿಸಿ  ಬಿಜೆಪಿಯಿಂದ ಬೃಹತ್‌ ಪಾದಯಾತ್ರೆ! – ಮಾಜಿ ಶಾಸಕ ಸಂಜೀವ ಮಠಂದೂರು 
4
SHARES
12
VIEWS
ShareShareShare

ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಸ್ಥಳೀಯಾಡಳಿತ ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸದ ಧೋರಣೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ ಹಾಗೂ ‘ನಮ್ಮ ಹಕ್ಕು ನಮಗೆ ನೀಡಿ’ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ 31 ಗ್ರಾಮ ಪಂಚಾಯತ್‌ಗಳು, 1 ನಗರಸಭೆ, ಹಾಗೂ ಒಂದು ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಸೇರಿದಂತೆ ಒಟ್ಟು 33 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.

ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 2ರಂದು ಪುತ್ತೂರಿನ ಬೊಳುವಾರಿನಿಂದ ಪಾದಯಾತ್ರೆಗೆ ಚಾಲನೆ ದೊರೆಯಲಿದ್ದು, ಗ್ರಾಮಗಳಲ್ಲಿ ಪ್ರತಿಭಟನೆ ಬಳಿಕ ನವೆಂಬರ್ 19ರಂದು ವಿಟ್ಲದಲ್ಲಿ ಸಮಾರೋಪಗೊಳ್ಳಲಿದೆ. ಈ ಹೋರಾಟವನ್ನು ‘ಹೈಬ್ರಿಡ್ ಪಾದಯಾತ್ರೆ’ ಎಂದು ಬಣ್ಣಿಸಿ, ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸರಕಾರವನ್ನು ಒತ್ತಾಯಿಸುವುದೇ ಇದರ ಪ್ರಮುಖ ಉದ್ದೇಶ ಎಂದರು. ಕಾಂಗ್ರೆಸ್ ಸರಕಾರವು ‘ವೋಟ್ ಚೋರಿ’ ಆರೋಪದ ಮೂಲಕ ಅಧಿಕಾರಕ್ಕೆ ಬಂದಿದೆ. ಆದರೆ ಇತ್ತೀಚೆಗೆ ಮತಪತ್ರದ ಮೂಲಕ ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವು ಈ ಆರೋಪಗಳಿಗೆ ಉತ್ತರ ನೀಡಿದೆ ಎಂದು ಸಂಜೀವ ಮಠಂದೂರು ಹೇಳಿದರು. ಪ್ರಜಾಪ್ರಭುತ್ವದ ರಕ್ಷಕರು ಹಾಗೂ ಸಂವಿಧಾನದ ಪ್ರತಿಪಾದಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಮೇಲೆ ನಿಜವಾದ ವಿಶ್ವಾಸವಿದ್ದರೆ ತಕ್ಷಣ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಗ್ರಾಮ ಪಂಚಾಯತ್‌ಗಳ ಅವಧಿ ಮುಗಿದು ಒಂದು ವರ್ಷ ಕಳೆದಿದೆ. ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ಗಳ ಅವಧಿ ಮುಗಿದು ಆರು ವರ್ಷಗಳಾಗಿವೆ. ಪುತ್ತೂರು ನಗರಸಭೆಯ ಅವಧಿಯೂ ಮುಗಿದು ಒಂದು ವರ್ಷ ಕಳೆದಿದ್ದು, ಎಪಿಎಂಸಿಗಳಿಗೆ ಚುನಾವಣೆ ನಡೆಸದೆ ನಾಲ್ಕು ವರ್ಷಗಳಾಗಿವೆ ಎಂದು ಅವರು ಆರೋಪಿಸಿದರು. ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶಗಳಿಗೂ ಮನ್ನಣೆ ನೀಡದೆ, ಅವುಗಳಿಗೆ ವಿರುದ್ಧವಾಗಿ ಸರಕಾರ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದ ಅವರು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ನಗರಸಭೆ ಚುನಾವಣೆಗಳನ್ನು ನಡೆಸುವ ಮೂಲಕ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಪುತ್ತೂರು ನಗರಸಭೆಯ ಆಡಳಿತದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಸಂಜೀವ ಮಠಂದೂರು, ಕಳೆದ ಒಂದು ವರ್ಷದಲ್ಲಿ ಜಿಲ್ಲಾಧಿಕಾರಿಗಳು ನಗರಸಭೆಯಲ್ಲಿ ಒಂದೇ ಒಂದು ಪರಿಶೀಲನಾ ಸಭೆ ನಡೆಸಿಲ್ಲ ಎಂದು ಆರೋಪಿಸಿದರು.  ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಇಲ್ಲದಿರುವುದರಿಂದ ಕೇಂದ್ರದ 16ನೇ ಹಣಕಾಸು ಆಯೋಗದ ಅನುದಾನ ಪಡೆಯುವ ಪ್ರಕ್ರಿಯೆಯ ಮೇಲೂ ಪರಿಣಾಮ ಉಂಟಾಗುತ್ತಿದೆ. ಇದರ ಹೊರೆ ಅಂತಿಮವಾಗಿ ಜನಸಾಮಾನ್ಯರ ಮೇಲೆ ಬೀಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಸರಕಾರ ಆರ್ಥಿಕ ಸಂಕಷ್ಟದಲ್ಲಿದ್ದರೂ ಸಂವಿಧಾನವನ್ನು ರಕ್ಷಿಸಿ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ ನೀಡುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು ಎಂದು ಹೇಳಿದರು.

ನ.2ರಂದು ಪುತ್ತೂರಿನ ಬೊಳುವಾರಿನ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಿಂದ ಪಾದಯಾತ್ರೆ ಆರಂಭವಾಗಲಿದೆ. ಅಲ್ಲಿಂದ ಕಿಲ್ಲೆ ಮೈದಾನದ ಅಮ‌ರ್ ಜವಾನ್‌ ಜ್ಯೋತಿ ಸ್ಮಾರಕದವರೆಗೆ ತೆರಳಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ಪುತ್ತೂರು ನಗರಸಭೆ ಕಚೇರಿಯ ಮುಂದೆ ಮನವಿ ಸಲ್ಲಿಸಲಾಗುವುದು ಎಂದು ಸಂಜೀವ ಮಠಂದೂರು ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋ‌ರ್ ಕುಮಾ‌ರ್ ಪುತ್ತೂರು ಹಾಗೂ ಪುತ್ತೂರು ಜಿಲ್ಲಾ ಸಂಯೋಜಕ ವಿಕಾಸ್ ಪುತ್ತೂರು ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತ್‌ಗಳು ಮತ್ತು ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆಗಳು ನಡೆಯಲಿವೆ. ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿಗಳ ಎದುರು ‘ನಮ್ಮ ಹಕ್ಕು ನಮಗೆ ನೀಡಿ’ ಎಂಬ ಘೋಷಣೆಯೊಂದಿಗೆ ಚುನಾವಣೆ ನಡೆಸುವಂತೆ ಆಗ್ರಹಿಸಲಾಗುವುದು. ನವೆಂಬರ್ 19ರಂದು ವಿಟ್ಲದಲ್ಲಿ ಪಾದಯಾತ್ರೆಯ ಸಮಾರೋಪ ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್, ಮಾಧ್ಯಮ ಪ್ರಮುಖ್ ಮಹೇಶ್ ಕೇರಿ ಹಾಗೂ ಮಾಧ್ಯಮ ವಕ್ತಾರ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

ಜಾಹೀರಾತು

LOTUS TRAVEL

ಜಾಹೀರಾತು

SendShare2Share
Previous Post

ಯುವತಿಗೆ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಆರೋಪಿ ವಿರುದ್ಧ ದೂರು ದಾಖಲು

Next Post

ಕೆದಿಲ ವ್ಯವಸಾಯ ಸಹಕಾರಿ ಸಂಘದಲ್ಲಿ ಕೃಷಿಕ ಗ್ರಾಹಕರು ಇಟ್ಟಿದ್ದ ಕೋಟ್ಯಂತರ ಹಣ ಸಮೀರಾ ಎಂಬ ಮಹಿಳೆಗೆ ಸುರಿದುಬಿಟ್ಟ ಸೊಸೈಟಿ ಸಿಇಓ ಕೇಶವ ಗೌಡ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post

ಕೆದಿಲ ವ್ಯವಸಾಯ ಸಹಕಾರಿ ಸಂಘದಲ್ಲಿ ಕೃಷಿಕ ಗ್ರಾಹಕರು ಇಟ್ಟಿದ್ದ ಕೋಟ್ಯಂತರ ಹಣ ಸಮೀರಾ ಎಂಬ ಮಹಿಳೆಗೆ ಸುರಿದುಬಿಟ್ಟ ಸೊಸೈಟಿ ಸಿಇಓ ಕೇಶವ ಗೌಡ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In