ಬೆಳಗಾವಿ : ಬೆಳಗಾವಿಯಲ್ಲಿ ಹಾಡಹಗಲೇ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಯುವಕನ ಕೊಲೆ ಮಾಡಲಾಗಿದೆ. ಬೆಳಗಾವಿ ನಗರದ ಮಹಾಂತೇಶ ನಗರದ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಗಾಂಧಿ ನಗರ ನಿವಾಸಿ ಇಬ್ರಾಹಿಂ ಗೌಸ್ (22) ಮೃತಪಟ್ಟವನು. ಮುಜಮಿಲ್ ಸತ್ತಿಗೇರಿ ಕೊಲೆ ಆರೋಪಿಯಾಗಿದ್ದಾನೆ.
ಇದೇ ಬಡಾವಣೆಯ ಯುವತಿ ಜತೆಗೆ ಇಬ್ರಾಹಿಂ ಪ್ರೀತಿ -ಪ್ರೇಮ ಅಂತ ಓಡಾಡುತ್ತಿದ್ದ . ಗುರುವಾರ ತನ್ನ ಹುಡುಗಿ ಜತೆಗೆ ಇಬ್ರಾಹಿಂ ಬೈಕ್‌ನಲ್ಲಿ ಹೊರಟ್ಟಿದ್ದ. ಇದನ್ನು ನೋಡಿದ ಯುವತಿಯ ಸಹೋದರ ಮುಜಮಿಲ್ ಸತ್ತಿಗೇರಿ ಎಂಬಾತ ಸ್ಕ್ರೂಡ್ರೈವರ್‌ನಿಂದ ಚುಚ್ಚಿದ್ದಾನೆ.
ಕೂಡಲೇ ಅಲ್ಲಿದ್ದ ಸ್ಥಳೀಯರು ಗಾಯಾಳು ಇಬ್ರಾಹಿಂನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ರಾಹಿಂ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.