ಚಾರ್ಮಾಡಿ ಘಾಟಿ ಪರಿಸರದಲ್ಲಿ ನಿರಂತರ ಕಾಡಾನೆ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ರಾತ್ರಿ ಗಸ್ತು ಆರಂಭವಾಗಿದೆ.
ಕಾಡಾನೆ ಘಾಟಿ ಪರಿಸರದಲ್ಲಿ ಓಡಾಟ ನಡೆಸುವ ಕುರಿತು ಪರಿಶೀಲನೆ ನಡೆಸಿದ ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್‌ಎಫ್‌ಒ ಮೋಹನ್ ಕುಮಾರ್ ನೇತೃತ್ವದ ತಂಡವು ಡಿಎಫ್‌ಒ ಆ್ಯಂಟನಿ ಮರಿಯಪ್ಪ ನಿರ್ದೇಶನದಂತೆ ರಾತ್ರಿ ಗಸ್ತು ಆರಂಭಿಸಿದೆ.
ಕಳೆದ ವಾರದಿಂದ ಹಲವು ದಿನಗಳ ಕಾಲ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಸಲಗ ಆಗಾಗ ಕಂಡು ಬರುತ್ತಿದ್ದು, ವಾಹನ ಸವಾರರಲ್ಲಿ ಭೀತಿ ಉಂಟು ಮಾಡಿದೆ.
ಕಾಡಾನೆ ಪದೇ ಪದೇ ಘಾಟಿ ರಸ್ತೆ ವ್ಯಾಪ್ತಿಯಲ್ಲಿ ಕಾಣಿಸುತ್ತಿದೆ . ಪ್ರತಿದಿನ ಸಾವಿರಾರು ವಾಹನಗಳು ಓಡಾಟ ನಡೆಸುವ ಇಲ್ಲಿ ಕಾಡಾನೆ ರಸ್ತೆ ಬದಿ ಕಂಡು ಬರುವುದರಿಂದ ಹಲವು ಕಾಲ ವಾಹನಗಳು ಸರದಿ ನಿಲ್ಲಬೇಕಾದ ಸ್ಥಿತಿ ಇದೆ ಹಾಗೂ ಈ ಹೊತ್ತಿನಲ್ಲಿ ಜೀವ ಭಯದೊಂದಿಗೆ ಕಾಯಬೇಕು. ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಕಾಡಾನೆ ನಿರಂತರ ಕಂಡು ಬರುತ್ತಿದ್ದು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕುರಿತು ಜನರು ಪ್ರಶ್ನಿಸುತ್ತಿದ್ದಾರೆ.
ಆದರೆ ಕೆಲವರು ಆನೆಯನ್ನು ಓಡಿಸುವ ಸಲುವಾಗಿ ಕಲ್ಲುಗಳನ್ನು ಬೀರುವುದು, ಫೋಟೋ ಕ್ಲಿಕ್ಕಿಸಲು ಮುಂದಾಗುವುದು, ಬೊಬ್ಬೆ ಹಾಕುವುದು ಇತ್ಯಾದಿ ಮಾಡುತ್ತಾರೆ. ಇದರಿಂದ ಆನೆ ಕೋಪಗೊಳ್ಳುವ ಸಂಭವವಿದ್ದು, ಈ ಸಮಯ ಜನ ವಾಹನದ ಮೇಲೆ ದಾಳಿಗೂ ಮುಂದಾಗಬಹುದು. ಒಟ್ಟಿನಲ್ಲಿ ಘಾಟಿ ಪ್ರಯಾಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿದ್ದು ರಾತ್ರಿ ಪ್ರಯಾಣವನ್ನು ಆದಷ್ಟು ಮುಂದೂಡಿದರೆ