ಉಪ್ಪಿನಂಗಡಿ : ಮೇ 21. ಪುತ್ತೂರು ಉಪ್ಪಿನಂಗಡಿ ರಸ್ತೆಯ ನೆಕ್ಕಿಲಾಡಿ ಆದರ್ಶ ನಗರದಲ್ಲಿ ವಿಪರೀತ ಮಳೆ ಸುರಿದು ಬರೆ ಮತ್ತು ತಡೆಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ. ಹೊಸ ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯದ ಕಾರಣ ಈ ಕುಸಿತ ಸಂಭವಿಸಿದೆ ಎಂದು ಸಾರ್ವಜನಿಕರು ಹಾಗೂ ಪ್ರಯಾಣಿಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ
ನಿನ್ನೆ ಸಂಜೆಯಿಂದಲೇ ಉಪ್ಪಿನಂಗಡಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಇದರಿಂದಾಗಿ ರಾತ್ರಿ 34 ನೆಕ್ಕಿಲಾಡಿಯ ಆದರ್ಶನಗರ ಎಂಬಲ್ಲಿ ತಡೆಗೋಡೆ ಕುಸಿದು ಬಿದ್ದಿದೆ.
ತಡೆಗೋಡೆ ಕುಸಿದು ಆದರ್ಶನಗರ ಕಾಲನಿಗೆ ಹೋಗುವ ರಸ್ತೆಯ ಮೇಲೆ ಬಿದ್ದಿದ್ದು, ರಸ್ತೆ ಬ್ಲಾಕ್ ಆಗಿದೆ. ಅಲ್ಲದೇ, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. 34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ ಬೇರಿಕೆ – ಬೊಳಂತಿಲ ರಸ್ತೆ ವಿಸ್ತರಣಾ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಈ ತಡೆಗೋಡೆಯನ್ನು ನಿರ್ಮಿಸಲಾಗಿತ್ತು.