ನೆಲ್ಯಾಡಿ: ಅಪರಿಚಿತ ವ್ಯಕ್ತಿಯ ಸೂಚನೆಯಂತೆ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ ಇಚ್ಲಂಪಾಡಿಯ ಯುವಕನೊಬ್ಬ1.05 ಕೋಟಿ ರೂ.ಕಳೆದುಕೊಂಡಿರುವ ಪ್ರಕರಣವೊಂದು ವರದಿಯಾಗಿದೆ.
ಇಚ್ಲಂಪಾಡಿ ಗ್ರಾಮದ ಕೆಡಂಬೈಲು ಪುಲಿಕ್ಕಲ್ ನಿವಾಸಿ ಪಿ.ಜಿ.ಸಜಿ (43ವ.) ಹಣ ಕಳೆದುಕೊಂಡವರಾಗಿದ್ದಾರೆ. ಇವರಿಗೆ ಮೇ.25ರಂದು Telegram ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ, USDT ಕ್ರಿಪ್ಟೋ ಕರೆನ್ಸಿಗೆ ಹಣ ವರ್ಗಾಯಿಸಲು Binance App ಮತ್ತು Defi App Download ಮಾಡುವಂತೆ ತಿಳಿಸಿದ್ದು, ಅದರಂತೆ ಸಜಿ ಅವರು ಸದ್ರಿ App Download ಮಾಡಿದ್ದಾರೆ.
ಅಲ್ಲದೇ ಅಪರಿಚಿತ ವ್ಯಕ್ತಿ ನೀಡಿದ ಸೂಚನೆಯನ್ನು ಪಾಲಿಸಿ, ತಮ್ಮ ಬ್ಯಾಂಕ್ ಖಾತೆಗಳಿಂದ ಒಟ್ಟು 1,05,79,711 ರೂ., ಹಣ ಹಾಕಿ, ಸದ್ರಿ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ 1,05,79,711 ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪಿ.ಜಿ.ಸಜಿ ಅವರು ನೀಡಿದ ದೂರಿನಂತೆ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 18/2024, ಕಲಂ: 66(ಅ), 66 (ಆ)IT Act, 417, 420 IPC ಯಂತೆ ಪ್ರಕರಣ ದಾಖಲಾಗಿದೆ.