ಉದ್ಯಮಿ ಜಯ ಶೆಟ್ಟಿ ಮರ್ಡರ್ ಕೇಸ್ ಭೂಗತಪಾತಕಿ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ.
2001ರಲ್ಲಿ ಮಹಾರಾಷ್ಟ್ರ ಮೂಲದ ಹೊಟೇಲ್ ಉದ್ಯಮಿಯಾಗಿದ್ದ ಜಯ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತಪಾತಕಿ ಛೋಟಾ ರಾಜನ್ ಗೆ ಮುಂಬೈ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿಶೇಷ MCOCA ನ್ಯಾಯಾಲಯದ ನ್ಯಾಯಾಧೀಶ 23 ವರ್ಷಗಳ ಹಿಂದೆ ನಡೆದ ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳು ಮತ್ತು ಇತರ ಕಾನೂನುಗಳ ಅಡಿಯಲ್ಲಿ ಛೋಟಾ ರಾಜನ್ ಅಪರಾಧಿ ಎಂದು ನ್ಯಾಯಮೂರ್ತಿ ಘೋಷಿಸಿದ್ದಾರೆ.
ಹತ್ಯೆಗೊಳಗಾಗಿರುವ ಜಯ ಶೆಟ್ಟಿ ದಕ್ಷಿಣ ಮುಂಬೈನ ಗ್ರಾಂಟ್ ರೋಡ್ ಪ್ರದೇಶದ ಪ್ರಸಿದ್ಧ ಗೋಲ್ಡನ್ ಕ್ರೌನ್ ಹೋಟೆಲ್ ಮತ್ತು ಬಾರ್‌ನ ಮಾಲೀಕರಾಗಿದ್ದು, ಛೋಟಾ ರಾಜನ್ ಮತ್ತು ಹಿಂಬಾಲಕರನ್ನು ಫೌಲ್ ಮಾಡಿದ್ದರು. 2001ರ ಮೇ 4ರಂದು ರಾತ್ರಿ ಛೋಟಾ ರಾಜನ್ ಅವರ ಇಬ್ಬರು ಶೂಟರ್‌ಗಳು ಹೋಟೆಲ್ ಆವರಣಕ್ಕೆ ನುಗ್ಗಿ, ಜಯ ಶೆಟ್ಟಿಯನ್ನು ಕೊಲೆ ಮಾಡಿದ್ದರು.
ಮುಂಬೈನ ಭಯಾನಕ ಗ್ಯಾಂಗ್ಸ್ಟರ್ಗಳಲ್ಲಿ ಒಬ್ಬ 64 ವರ್ಷದ ಛೋಟಾ ರಾಜನ್, 1989ರಲ್ಲಿ ದುಬೈಗೆ ಪರಾರಿಯಾಗಿದ್ದ. ಸುಮಾರು 27 ವರ್ಷಗಳ ಕಾಲ ದೇಶ ಬಿಟ್ಟು ಪರಾರಿಯಾಗಿದ್ದ ಅವನನ್ನು ನವೆಂಬರ್ 2015ರಲ್ಲಿ ಇಂಡೋನೇಷ್ಯಾದಿಂದ ಭಾರತಕ್ಕೆ ಗಡಿಪಾರು ಮಾಡಲಾಯಿತು. 2011ರ ಜೂನ್ 11ರಂದು ಪತ್ರಕರ್ತ ಜೆ. ಡೇ ಅವರನ್ನು ಹಗಲು ಹೊತ್ತಿನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ಮೇ ತಿಂಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಮುಂಬೈನಲ್ಲಿ ಛೋಟಾ ರಾಜನ್‌ಗೆ ಇದು ಎರಡನೇ ಜೀವಾವಧಿ ಶಿಕ್ಷೆಯಾಗಿದೆ.