ವಿಧಾನ ಪರಿಷತ್ ಗೆದ್ದ ನಂತರ ಬಿಜೆಪಿಗೆ ಬೆಂಬಲ. ಹಿಂದುತ್ವಕ್ಕೆ ಕೆಲಸ ಮಾಡಿ ಬೆಳೆದವನು ಕಾರ್ಯಕರ್ತರ ಧ್ವನಿಯಾಗಿ ಸ್ಪರ್ಧಿಸಿದ್ದೇನೆ.
ವಿಧಾನಪರಿಷತ್ ಚುನಾವಣಾ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ರಘಪತಿ ಭಟ್ ಪುತ್ತೂರಿನಲ್ಲಿ ಮತಯಾಚನೆ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಇವರು ವಿಧಾನ ಸಭಾ ಚುನಾವಣೆಯಲ್ಲಿ ಟಿಕೇಟ್ ತಪ್ಪಿದರು ಪಕ್ಷಕ್ಕೆ ತೊಂದರೆಯಾಗಬಾರದೆಂದು ನನ್ನ ಶಿಷ್ಯನನ್ನು ಗೆಲ್ಲಿಸಿದ್ದೇನೆ.
ಇದು ಪಕ್ಷದ ಚಿಹ್ನೆಯ ಚುನಾವಣೆಯಲ್ಲ:
ಇಲ್ಲಿ ಮೊದಲ ಪ್ರಾಶಸ್ತ್ಯದ ಮತದಾನದ ಚುನಾವಣೆ. ಬಿಜೆಪಿಯ ಚಿಹ್ನೆಗೆ ಮೂಲಕ ಮತದಾನ ನಡೆಯುವುದಲ್ಲ. ವಿಧಾನಸಭೆ ಚುನಾವಣೆ ತಾವರೆಯ ಚಿಹ್ನೆಯ ಮೂಲಕ ನಡೆಯುತ್ತದೆ ಅದೇ ಉದ್ದೇಶಕ್ಕಾಗಿ ಉಡುಪಿಯಲ್ಲಿ ಗೆಲ್ಲಿಸಿದ್ದೇನೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಡೈಲಾಗ್ ಬಾರಿ ವೈರಲ್ ಆಗಿತ್ತು.ಆದರೆ ಈ ಬಾರಿ ನಾನು ಕಾರ್ಯಕರ್ತರ ಧ್ವನಿಯಾಗಿ ಪರಿಷತ್ ಗೆ ಸ್ಪರ್ಧೆ ಮಾಡಿದ್ದೇನೆ ಎಂಬುದಾಗಿ ತಿಳಿಸಿದರು.
ನಾನು ಈ ಮೂಲಕ ಮತಯಾಚಿಸುತ್ತೇನೆ: ನಾನು ಮೂರು ಬಾರಿ ಶಾಸಕರಾಗಿ ಉಡುಪಿಯಲ್ಲಿ ಸರ್ವರನ್ನು ಜೊತೆಯಾಗಿ ಕರೆದುಕೊಂಡು ಅಭಿವೃದ್ಧಿ ಮಾಡಿದ್ದೇನೆ. ಸಾಮಾನ್ಯ ಕಾರ್ಯಕರ್ತರ ಜೊತೆ ಬೆರೆತು ಹಿಂದುತ್ವ ಆಧಾರದಲ್ಲಿ ದಿನ ಸಮಯವನ್ನು ಜನಪರ ಕಾರ್ಯಗಳಿಗೆ ಮೀಸಲಿಟ್ಟು ದುಡಿದ್ದೇನೆ. ಸುಮಾರು 1500 ಎಕರೆ ಹಡೀಲು ಬಿದ್ದ ಭೂಮಿಯಲ್ಲಿ ಸಾವಯವ ಕೃಷಿ ಮಾಡಿ, ಕೃಷಿ ಕ್ರಾಂತಿಯಾಗಿದೆ.ಪ್ರಸ್ತುತ ಈಗಲೂ ಆ ಜಾಗದಲ್ಲಿ ಕೃಷಿ ನಡೆಯುತ್ತಿದೆ. 2006 ರಿಂದ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಸುಮಾರು 1500 ಮಕ್ಕಳಿಗೆ ಯಕ್ಷಗಾನ ಕಲಿಸುವ ಸಂಸ್ಕೃತಿ ಉಳಿಸುವ ಯೋಜನೆ ಆರಂಭಿಸಿದ್ದೇನೆ. ಅದಲ್ಲದೇ SSLC ಪರೀಕ್ಷೆ ಸಂಧರ್ಭ ಸಾಧಕ ಶಿಕ್ಷಕ ಪ್ರಶಸ್ತಿ,ಅತ್ಯುತ್ತಮ ಫಲಿತಾಂಶ ಪಡೆದ ಸಾಧಕ ಶಾಲಾ ಪ್ರಶಸ್ತಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ ಪ್ರಮುಖವಾಗಿ ಈ ಟ್ರಸ್ಟ್ ಗಳಲ್ಲಿ ಆ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಿರುತ್ತಾರೆ ಹೊರತು ರಘಪತಿ ಭಟ್ ಅಧ್ಯಕ್ಷನಲ್ಲ ನಾನೊಬ್ಬ ಕ್ರಿಯಾಶೀಲ ರಾಜಕಾರಣಿಯಾಗಿ ಉಡುಪಿಯಲ್ಲಿ ಕೆಲಸ ಮಾಡಿದ್ದೇನೆ.ಅದು ರಾಜ್ಯಕ್ಕೆ ತಿಳಿದಿದೆ ಎಂದರು
ಬಿಜೆಪಿ ಅಭ್ಯರ್ಥಿ ಆಯ್ಕೆ ಸರ್ಜಿ ಸರಿಯಲ್ಲ
ಹಿಂದೆ ಮಲೆನಾಡು ಶಿಕ್ಷಕರ ಕ್ಷೇತ್ರಕ್ಕೆ, ಕರಾವಳಿಗೆ ಪದವೀಧರ ಕ್ಷೇತ್ರ ಎಂಬುದಾಗಿತ್ತು.ಆದರೆ ಮೊನ್ನೆ ತನಕ ಕಾಂಗ್ರೆಸ್ ಪರವಿದ್ದು ಹರ್ಷ ಹತ್ಯೆಯ ಸಂಧರ್ಭದಲ್ಲಿ ಶಾಂತಿ ನಡಿಗೆ ಕಾರ್ಯಕ್ರಮ ಆಯೋಜನೆ ಮಾಡಿದವರಿಗೆ ಬಿಜೆಪಿ ಟಿಕೇಟ್ ನೀಡಿದೆ ಇದು ಸರಿಯಲ್ಲ. ಬಿಜೆಪಿ ಮೋದಿ ಎಂದು ಯಾರನ್ನು ನಿಲ್ಲಿಸಿದರು ಕೈ ಕಟ್ಟಿ ಕೂರುವ ಸಮಯ ಇದಲ್ಲ ಈಗ ಬಕೆಟ್ ಸಂಸ್ಕೃತಿಯಾಗಿದೆ. ಶಿವಮೊಗ್ಗದವರಿಗೆ ಟಿಕೇಟ್ ಕೊಡುವುದಿದ್ದರೆ ಲಿಂಗಾಯತ ಸಮಾಜದ ಹಿರಿಯರಾದ ಗಿರೀಶ್ ಪಾಟೇಲ್ ಕೊಡಬಹುದಿತ್ತು, ಬಾಕಿ ಹಿರಿಯರಿದ್ದರು ಅವರಿಗೆ ಕೊಡುತ್ತಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ.
ನಾನು ಗೆದ್ದ ಮೇಲೆ ಬಿಜೆಪಿಗೆ ಬೆಂಬಲ ಅವರು ಮತ್ತೆ ಸೇರಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಾನು ಬಿಜೆಪಿ, ಹಿಂದುತ್ವ ಪರವಾಗಿ ಹಿಂದೂ ಜಾಗರಣಾ ವೇದಿಕೆಯಲ್ಲಿ ಕೆಲಸ ಮಾಡಿದವನು.ಈ ಬಾರಿ ಗೆಲ್ಲುವ ವಿಶ್ವಾಸವಿದೆ ಎಂದರು.