ಕಳೆದ ಎರಡು ತಿಂಗಳಿಂದ ತೀವ್ರ ಚರ್ಚೆ, ಪ್ರಚಾರ, ಹೇಳಿಕೆ, ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಲೋಕಸಭೆ ಚುನಾವಣೆಯು ಶನಿವಾರ ಮುಕ್ತಾಯಗೊಂಡಿದೆ.
ಈ ಮೂಲಕ ಲೋಕಸಭಾ ಚುನಾವಣೆಗೆ ಪೂರ್ಣವಿರಾಮ ದೊರೆತಿದೆ.
ಸಮೀಕ್ಷೆಗಳು ಪ್ರಕಟವಾಗುತ್ತಿದೆಯಾದರೂ ಯಾವ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರ..? ಯಾವ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ…? ಎಂಬುದಕ್ಕೆ ಮತಗಟ್ಟೆ ಸಮೀಕ್ಷೆ ದಿಕ್ಸೂಚಿಯಾಗಲಿದೆ.
ಸಮೀಕ್ಷೆಯ ವಿವರ ಇಲ್ಲಿದೆ.
ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಮತಗಟ್ಟೆ ಅಂದಾಜು ಸಮೀಕ್ಷೆಗಳು ಪ್ರಕಟವಾಗಿವೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಮೂಲಕ ನರೇಂದ್ರ ಮೋದಿಯೇ ಪ್ರಧಾನಿಯಾಗಿ ಮೂಡಿ ಬರಲಿದ್ದಾರೆ ಎಂದು ತಿಳಿದುಬಂದಿದೆ.
ಗುಜರಾತ್ ಕ್ಲೀನ್ ಸ್ವೀಪ್…!?
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಯು ಎಲ್ಲ 26ಕ್ಕೆ 26 ಕ್ಷೇತ್ರಗಳನ್ನೂ ಗೆಲ್ಲಲಿದೆ ಸಮೀಕ್ಷೆಗಳು ತಿಳಿಸಿವೆ.
ದೇವರನಾಡು ಕೇರಳದಲ್ಲೂ ತಾವರೇ ಅರಳಿದೆ ಸಮೀಕ್ಷೆ ತಿಳಿಸಿದ್ದರು ಯಾವ ಕ್ಷೇತ್ರ ಎಂಬುದು ಕಾದು ನೋಡಬೇಕಾಗಿದೆ.
ಡೈನಾಮಿಕ್ ಯೋಗಿ ರಾಜ್ಯ…?
ಉತ್ತರ ಪ್ರದೇಶದಲ್ಲೂ ಮೇಲುಗೈ
ರಾಮಮಂದಿರ ನಿರ್ಮಾಣ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರ ಅಲೆಯಿಂದಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.
ಒಟ್ಟು ಸಮೀಕ್ಷೆಯಲ್ಲಿ ಈ ರೀತಿ:
ಯಾವ ಸಮೀಕ್ಷೆಯಾದರು ಅಂತಿಮ ಫಲಿತಾಂಶ ಇನ್ನೂ ಮೂರು ದಿನದಲ್ಲಿ ಜನರಿಗೆ ತಿಳಿಯಲಿದೆ.
ಕರ್ನಾಟಕ ರಾಜ್ಯ ಸಮೀಕ್ಷೆ ಈ ರೀತಿ ಇದೆ.