ಬೆಂಗಳೂರು: ಚುನಾವಣೋತ್ತರ ಫಲಿತಾಂಶ ಸಮೀಕ್ಷೆಯ ಮೇಲೆ ವಿಶ್ವಾಸವಿಲ್ಲ: ಡಿ ಕೆ ಶಿವಕುಮಾರ್
ಚುನಾವಣೋತ್ತರ ಸಮೀಕ್ಷೆ ನಡೆಸುವವರು ಅಲ್ಪಪ್ರಮಾಣದ ಮಾದರಿಗಳನ್ನು ಸಂಗ್ರಹಿಸಿರುತ್ತಾರೆ. ಇದರಲ್ಲಿ ಆಳವಾದ ಸಮೀಕ್ಷೆ ನಡೆಯುವುದಿಲ್ಲ. ಹೀಗಾಗಿ ಈ ಎಕ್ಸಿಟ್ ಪೋಲ್ ಗಳ ಮೇಲೆ ನಂಬಿಕೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ 3-4 ಸ್ಥಾನ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಮಾಹಿತಿ ತೋರಿಸುತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ. ಗ್ಯಾರಂಟಿ ಯೋಜನೆಯಿಂದ ಜನರು ಸಂತಸದಲ್ಲಿದ್ದಾರೆ ಬಿಟ್ಟಿ ಭಾಗ್ಯಯೆಂದು ಹಾಸ್ಯ ಮಾಡಿದ ಬಿಜೆಪಿಗರು ಸಹ ಗ್ಯಾರಂಟಿ ಯೋಜನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಇದರಿಂದ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲಿದೆ ದೇಶದ ಅಧಿಕಾರವನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ.
ಸಮೀಕ್ಷೆಗಳಲ್ಲಿ ಕೇವಲ ಐದಾರು ಸೀಟುಗಳನ್ನು ಮಾತ್ರ ಕೊಟ್ಟಿದ್ದಾರೆ. ಆದರೆ, ಜೂ 4ರಂದು ವಾಸ್ತವ ಗೊತ್ತಾಗಲಿದೆ. ಫಲಿತಾಂಶದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ದಾಟಲಿದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಗೆಲ್ಲುವುದು,ಗುಜರಾತ್ ಗೆಲ್ಲುವುದು ಎಂದು ಪೋಲ್ ತಿಳಿಸಿದೆ ಅದು ಎಷ್ಟು ಸತ್ಯ ಎಂದು ಫಲಿತಾಂಶ ದಿನ ತಿಳಿಯಲಿದೆ ಜನರು ಬಿಜೆಪಿ ಸರಕಾರದಿಂದ ಬೇಸತ್ತು ಹೋಗಿದೆ ಈ ಬಾರಿ ಮೈತ್ರಿಕೂಟವೇ ಅಧಿಕಾರ ಪಡೆಯಲಿದೆ ಎಂದು ತಿಳಿಸಿದರು.