ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಕನ್ನಡಿಗರೊಗೊಂದು ಹೆಮ್ಮೆ.
ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ ಆಫೀಸರ್ ಆಗಿ ಭಾರತೀಯ ಸೇನೆಯಲ್ಲಿ ನಿಯೋಜನೆಗೊಂಡಿದ್ದ ಭವ್ಯ ಅವರು ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. 2022 ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿದ್ದೀನೆ ಎಂದು ತನ್ನ ಪ್ರಮುಖ ಸಾಮಾಜಿಕಜಾಲತಾಣಗಳಲ್ಲಿ ಹಂಚಿಕೊಂಡಿದ್ದರೆ.
ವಿಶೇಷವಾಗಿ ಇಲ್ಲಿ ಪ್ರಾದೇಶಿಕ ಸೇನೆಯು ಭಾರತೀಯ ನಾಗರಕರಿಗೆ ತಮ್ಮ ನಾಗರಿಕ ವೃತ್ತಿಯ ಜೊತೆಗೆ ಭಾರತೀಯ ಸೇನೆಯ ಭಾಗವಾಗಿ ದೇಶಸೇವೆ ಮಾಡುವ ಅವಕಾಶವಾಗಿದೆ. ಕಾಶ್ಮೀರದಲ್ಲಿ ಭಾರತ ಪಾಕಿಸ್ಥಾನ ಗಡಿಯ ಬಳಿಯಿರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದು ಲೆಫ್ಟನಂಟ್ ಆಗಿ ನಿಯೋಜನೆಗೊಂಡಿರುತ್ತಾರೆ.
ಪ್ರಸ್ತುತ Territorial Army ಯಲ್ಲಿರುವ ಕೆಲವು ಪ್ರಮುಖ ವ್ಯಕ್ತಿಗಳಲ್ಲಿ ಕ್ರಿಕೆಟ್ ಆಟಗಾರರಾದ ಶ್ರೀ ಎಂ ಎಸ್ ಧೋನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಮಂತ್ರಿಗಳಾದ ಶ್ರೀ ಸಚಿನ್ ಪಿಲಾಟ್, ಮಾಜಿ ಕೇಂದ್ರ ಸಚಿವರಾದ ಶ್ರೀ ಅನುರಾಗ ಥಾಕುರ್ ಮತ್ತು ಇತರರು ಸೇರಿದ್ದಾರೆ.
ಪ್ರಮುಖವಾಗಿ ಇವರು ಕರ್ನಾಟಕ ಕಾಂಗ್ರೆಸ್ ನ ವಕ್ತಾರೆಯಾಗಿ ಜನಪರ ಕೆಲಸ ಮಾಡಿದ ಜೊತೆಗೆ ಇಲ್ಲಿ ಪಕ್ಷವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಮುಂದೆ ನಾನು ದೇಶದ ಒಳಗೆ ರಾಜಕಾರಣಿಯಾಗಿ ನನ್ನ ಜನರ ಸೇವೆ ಸಲ್ಲಿಸುವುದರ ಜೊತೆಗೆ ಭಾರತೀಯ ಸೇನಾಧಿಕಾರಿಯಾಗಿ ದೇಶ ಕರೆದಾಗ ಗಡಿಯಲ್ಲಿ ದೇಶದ ರಕ್ಷಣೆ ಮಾಡಲೂ ಸಿದ್ದಳಿದ್ದು ದೇಶದ ವಿಚಾರದಲ್ಲಿ ರಾಜಕೀಯ ಇರುವುದಿಲ್ಲ ಪ್ರತಿಯೊಬ್ಬರ ಪ್ರೀತಿ ಅಭಿಮಾನ ಹಾಗೂ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ.