ರಘಪತಿ ಭಟ್ ಅವರಿಗೆ ಬಾಹ್ಯ ಬೆಂಬಲ ನೀಡಿದರೇ ಮಾಜಿ ಸಂಸದ ಪ್ರತಾಪ್ ಸಿಂಹ..!?
ಪದವೀಧರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಘಪತಿ ಭಟ್ ಸ್ಪರ್ಧಿಸುತ್ತಿದ್ದಾರೆ.
ಈ ಹಿಂದೆ ರಘಪತಿ ಭಟ್ ಉಡುಪಿಯಲ್ಲಿ ಸುದ್ದಿಯಾದ ಹಿಜಾಬ್ ವಿಚಾರವಾಗಿ ಹೋರಾಟ ನಡೆಸಿ ರಾಜ್ಯವ್ಯಾಪಿ ಸುದ್ದಿಯಲ್ಲಿದ್ದರು .
ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ರಘಪತಿ ಭಟ್ ಬಂಡಾಯ ಸ್ಪರ್ಧೆ ನಡೆಸಿದ್ದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ ವಜಾ ಮಾಡಲಾಗಿದ್ದು. ಈ ಬೆನ್ನಲ್ಲೇ ಹಿಜಾಬ್ ವಿವಾದದ ವಿದ್ಯಾರ್ಥಿ ಅಲಿಯಾ ಅಸ್ಸಾದಿ ರಘಪತಿಯವರಿಗೆ ಟಕ್ಕರ್ ನೀಡಿ ಟ್ವೀಟ್ ಮಾಡಿದ್ದರು.
ನಂತರದ ಬೆಳವಣಿಗೆಯಲ್ಲಿ ಆಕೆಯ ಶೈಕ್ಷಣಿಕ ಜೀವನಕ್ಕೆ ಶುಭವಾಗಲಿ ಎಂದು ರಘಪತಿ ಭಟ್ ಹಾರೈಸಿದ್ದು ಹಿಜಾಬ್ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ ಎಂಬುದಾಗಿ ಸ್ಪಷ್ಟವಾಗಿ ತಿಳಸಿದ್ದರು..
ಈ ವಿಚಾರವನ್ನು ಪ್ರತಾಪ್ ಸಿಂಹ ಅವರು ಸಾಮಾಜಿಕಜಾಲತಾಣದಲ್ಲಿ ಹಂಚಿಕೊಂಡಿದ್ದು MLA ಹಾಗೂ MLC ಟಿಕೇಟ್ ಸಿಗಲಿಲ್ಲ ಬದಲಾಗಿ ಪಕ್ಷದಿಂದ ಉಚ್ಚಾಟನೆ ಇದೆಲ್ಲ ಅಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ ಎಂದು ಬರೆದುಕೊಂಡಿದ್ದಾರೆ.