2019ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಭಾರೀ ಸೋಲನ್ನು ಅನುಭವಿಸಿದ್ದವು. ಕಾಂಗ್ರೆಸ್ ಬರೀ 44 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ ನೇತೃತ್ವದ ಮಿತ್ರಪಕ್ಷಗಳ ಒಕ್ಕೂಟ ಯುಪಿಎ 52 ಸ್ಥಾನ ಪಡೆಯಲಷ್ಟೇ ಸಾಧ್ಯವಾಗಿತ್ತು. ಇದಕ್ಕೆ ವಿರುದ್ಧವಾಗಿ ಬಿಜೆಪಿ 303 ಸ್ಥಾನಗಳನ್ನು ಪಡೆದಿತ್ತು.
ಆದರೆ ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸಾಧನೆ ಮಾಡಿದೆ. ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆದಿದೆ. ಸದ್ಯದ ಟ್ರೆಂಡ್‌ನಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನು I.N.D.I.A. ಒಕ್ಕೂಟ 231 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇತ್ತ ಖರ್ಗೆಯವರ ತವರು ಕ್ಷೇತ್ರ ಕಲಬುರಗಿಯಲ್ಲೂ ಕಾಂಗ್ರೆಸ್ ಗೆದ್ದು ಬೀಗಿದೆ. ಖುದ್ದು ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಸ್ಪರ್ಧಿಸಿದ್ದು, ಹಾಲಿ ಸಂಸದ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸಿದ್ದರು. ತೀವ್ರ ಪೈಪೋಟಿ ಕೊಟ್ಟ ದೊಡ್ಡಮನಿ, ಕೊನೆಗೂ ಗೆದ್ದು ಬೀಗಿದ್ದಾರೆ. 27,205 ಮತಗಳ ಅಂತರದಿಂದ ರಾಧಾಕೃಷ್ಣ ದೊಡ್ಡಮನಿ ಜಯಭೇರಿ ಭಾರಿಸಿದ್ದಾರೆ. ರಾಧಾಕೃಷ್ಣ ದೊಡ್ಡಮನಿ 6,52,321 ಮತಗಳನ್ನು ಪಡೆದಿದ್ದಾರೆ.