ಪುತ್ತೂರು: ಲೋಕಸಭಾ ಗೆಲುವಿನ ನಂತರ ಮೊದಲ ಬಾರಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಮೊದಲ ಬಾರಿಗೆ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು.
ಮಹಾ ಪೂಜೆ ಪ್ರಸಾದ ಪಡೆದಕೊಂಡ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ಕ್ಯಾಪ್ಟನ್ ನಾಳೆ ಅಂದರೆ ಬುಧವಾರ ಜಿಲ್ಲಾಧಿಕಾರಿಗಳ ಸಭೆ ಕರೆದು ನರೇಂದ್ರ ಮೋದಿಯವರ ಕೇಂದ್ರದ ಯೋಜನೆಗಳ ಅನುಷ್ಠಾನಗೊಂಡಿರುವ ಬಗ್ಗೆ ಹಾಗೂ ಮುಂದಿನ ಅಭಿವೃದ್ಧಿ ಮತ್ತು ಯೋಜನೆಗಳ ಅನುಷ್ಠಾನ ಬಗ್ಗೆ ಸಭೆ ಕರೆದ್ದಿದ್ದೇನೆ.
ಮಂಗಳೂರು ಬೆಂಗಳೂರು ಅಡ್ಡಹೊಳೆ ಬೃಹತ್ ರಸ್ತೆ ಕಾಮಗಾರಿ ಬಗ್ಗೆಯೂ ತಜ್ಞರ ಜೊತೆ ಚರ್ಚಿಸುತ್ತೇನೆ ಅದಲ್ಲದೇ ಶಿರಾಡಿ ಸುರಂಗ ಮಾರ್ಗದ ಯೋಜನೆಯನ್ನು ಯಾವ ರೀತಿಯಲ್ಲಿ ನಡೆಸಬಹುದು ಎಂಬುದನ್ನು ಪರಿಪೂರ್ಣವಾಗಿ ಯೋಜನೆ ತಯಾರಿಸಿ ಸಚಿವರ ಜೊತೆ ಚರ್ಚಿಸಿಯೇ ಮುನ್ನಡೆಸುತ್ತೇನೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ದಿಯೇ ಆಧ್ಯತೆಯಾಗಿದ್ದುಕೊಂಡು ರೈಲ್ವೆ ಮತ್ತು ರಸ್ತೆ ಕೆಲಸಗಳು ನಡೆಯಲಿದೆ ಎಂದು ತಿಳಿಸಿದರು. ರಾಜ್ಯ ಕಾಂಗ್ರೆಸ್ ಸರಕಾರದ ಪಿತೂರಿಯಿಂದ ಹಿಂದು ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸುವುದು, ಚೂರಿ ಇರಿತ ಪ್ರಕರಣವನ್ನು ಖಂಡಿಸುತ್ತೇನೆ ತುಷ್ಟೀಕರಣ ನೀತಿಯ ಮೂಲಕ ಒಲೈಕೆ ರಾಜಕೀಯ ನಡೆಸುವುದು ತಪ್ಪು ಎಂಬುದಾಗಿ ಹೇಳಿದರು.