ಉಪ್ಪಿನಂಗಡಿ: ಪುತ್ತೂರು ಉಪ್ಪಿನಂಗಡಿ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿರುವ ಅಯ್ಯಂಗಾರ್ ಬೇಕರಿಯಲ್ಲಿ ಅವಘಡ ಸಂಭವಿಸಿದೆ. ಅಪಾರ ನಷ್ಟ ಸಂಭವಿಸಿದ್ದು ಬೆಂಕಿ ನಂದಿಸಲು ಸ್ಥಳಿಯರು ಸಹಕರಿಸುತ್ತಿದ್ದಾರೆ. ಯಾವ ಕಾರಣದಿಂದ ಬೆಂಕಿ ತಗುಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.
ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಲ್ಲಿನ ಪೃಥ್ವಿ -ಶಾಪಿಂಗ್ ಮಹಲ್ ವಾಣಿಜ್ಯ ಸಂಕೀರ್ಣದ ಒಂದು ಪಾರ್ಶ್ವದಲ್ಲಿದ್ದ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡು ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿದ್ದು ಘಟನೆಯಿಂದ ಸುಮಾರು ಏಳರಷ್ಟು ಅಂಗಡಿಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.
ವಾಣಿಜ್ಯ ಸಂಕೀರ್ಣದಲ್ಲಿರುವ ಅಯ್ಯಂಗಾರ್ ಬೇಕರಿ, ಶೂ ಬಜಾರ್, ಬೀಡಲ್ ಫ್ಯಾನ್ಸಿ ಸೇರಿದಂತೆ ಸುಮಾರು ಏಳರಷ್ಟು ಚಪ್ಪಲಿ, ಫ್ಯಾನ್ಸಿ, ಬಟ್ಟೆ ಅಂಗಡಿಗಳಿಗೆ ಹಾನಿಯಾಗಿದೆ.ಈ ಪೈಕಿ ಒಂದು ಫ್ಯಾನ್ಸಿ ಅಂಗಡಿ ಮತ್ತು ಮೊಬೈಲ್ ಸರ್ವಿಸ್ ಶಾಪ್ ಸಂಪೂರ್ಣ ಸುಟ್ಟು ಕರಕಲಾಗಿದೆ.ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿಯೇ ಸ್ವಲ್ಪ ಅಂತರ ಬಿಟ್ಟು ಬ್ಯಾಂಕ್ ಆಫ್ ಬರೋಡಾ ಇದ್ದು, ಇದರೊಳಗೂ ಹೊಗೆ ವ್ಯಾಪಿಸಿತ್ತು.ಬೆಂಕಿಯಿಂದಾಗಿ ಲಕ್ಷಾಂತರ ರೂ.ಗಳ ವಸ್ತುಗಳು ಸುಟ್ಟು ಕರಕಲಾಗಿದೆ. ರಾತ್ರಿ 9.30ರ ಸುಮಾರಿಗೆ ಈ ಅನಾಹುತ ಸಂಭವಿಸಿದೆ.ಅಗ್ನಿ ಶಾಮಕದಳಗಳು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಪುತ್ತೂರು ಮತ್ತು ಬೆಳ್ತಂಗಡಿಯಿಂದಲೂ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಅಗ್ನಿಶಾಮಕ ದಳದವರು ಮತ್ತು ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾದರು. ಪೊಲೀಸರೂ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು.
ವಾಣಿಜ್ಯ ಸಂಕೀರ್ಣದಲ್ಲಿರುವ ಸುಮಾರು ಏಳು ಅಂಗಡಿಗಳಿಗೆ ಬೆಂಕಿ ಅವಘಡದಿಂದ ಹಾನಿಯಾಗಿದೆ.ಈ ಪೈಕಿ ಎಸ್2 ಮೊಬೈಲ್ ಹಾಗೂ ಫ್ಯಾನ್ಸಿ ಅಂಗಡಿಯೊಂದು ಸಂಪೂರ್ಣ ಸುಟ್ಟು ಬೂದಿಯಾಗಿ ಹೋಗಿದೆ.ಮತ್ತೊಂದೆಡೆ ಫ್ಯಾನ್ಸಿ ಅಂಗಡಿಯೊಳಗಿದ್ದ ಪರ್ಪ್ಯೂಮ್ ಬಾಟಲಿಗಳು ಸ್ಫೋಟಗೊಂಡು ಬೆಂಕಿ ಕ್ಷಿಪ್ರವಾಗಿ ಹರಡಲು ಕಾರಣವಾಗಿತ್ತು. ಅಯ್ಯಂಗಾರ್ ಬೇಕರಿಯಲ್ಲಿ ಗ್ಯಾಸ್ ಸಿಲಿಂಡರ್ ಇತ್ತಾದರೂ ಇದು ಸ್ಪೋಟಗೊಳ್ಳದೇ ಇರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.ಆಗಿರುವ ನಷ್ಟದ ಕುರಿತು ಸಂಪೂರ್ಣ ಮಾಹಿತಿ ದೊರೆಯಬೇಕಷ್ಟೆ.