• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

July 10, 2024
ಕೇರಳ ರಾಜ್ಯದ ಲಾಟರಿ ಪುತ್ತೂರಿನಲ್ಲಿ ಅಕ್ರಮ ಮಾರಾಟ – ಇಬ್ಬರ ವಿರುದ್ಧ ಪ್ರಕರಣ ದಾಖಲು

ಕೇರಳ ರಾಜ್ಯದ ಲಾಟರಿ ಪುತ್ತೂರಿನಲ್ಲಿ ಅಕ್ರಮ ಮಾರಾಟ – ಇಬ್ಬರ ವಿರುದ್ಧ ಪ್ರಕರಣ ದಾಖಲು

October 15, 2026
ಬೆಳ್ತಂಗಡಿ ಆರೋಗ್ಯ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 3 ಆರೋಪಿಗಳ ದಸ್ತಗಿರಿ

ಬೆಳ್ತಂಗಡಿ ಆರೋಗ್ಯ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 3 ಆರೋಪಿಗಳ ದಸ್ತಗಿರಿ

October 15, 2026
ಪುತ್ತೂರುದ ಪಿಲಿಗೊಬ್ಬು 2026, ಸೀಸನ್ 4- ವಿವಿಧ ಆಹಾರ ಮಳಿಗೆಗಳು, ತಾರೆಯರ ಮೆರುಗು ವಿಜೃಂಭಣೆಯಿಂದ ಜರುಗಲಿದೆ- ಸಹಜ್ ರೈ ಬಳಜ್ಜ

ಪುತ್ತೂರುದ ಪಿಲಿಗೊಬ್ಬು 2026, ಸೀಸನ್ 4- ವಿವಿಧ ಆಹಾರ ಮಳಿಗೆಗಳು, ತಾರೆಯರ ಮೆರುಗು ವಿಜೃಂಭಣೆಯಿಂದ ಜರುಗಲಿದೆ- ಸಹಜ್ ರೈ ಬಳಜ್ಜ

October 15, 2026
ಮಂಗಳೂರು ವಿಮಾನ ನಿಲ್ದಾಣದಿಂದ ಲಕ್ಷದ್ವೀಪದ ಅಗತ್ತಿ ದ್ವೀಪಕ್ಕೆ ಅಕ್ಟೋಬರ್‌ ಕೊನೆಯ ವಾರದಿಂದ ಪ್ರತಿದಿನದ ನೇರ ವಿಮಾನ ಸೇವೆ

ಮಂಗಳೂರು ವಿಮಾನ ನಿಲ್ದಾಣದಿಂದ ಲಕ್ಷದ್ವೀಪದ ಅಗತ್ತಿ ದ್ವೀಪಕ್ಕೆ ಅಕ್ಟೋಬರ್‌ ಕೊನೆಯ ವಾರದಿಂದ ಪ್ರತಿದಿನದ ನೇರ ವಿಮಾನ ಸೇವೆ

October 14, 2026
ಕಾಂಗ್ರೆಸ್ ಪಕ್ಷ ದಿಂದ ಆಹ್ವಾನ ಬಂದಿರುವುದು ನಿಜ : ಮಾಜಿ ಶಾಶಕ ರಘುಪತಿ ಭಟ್

ಕಾಂಗ್ರೆಸ್ ಪಕ್ಷ ದಿಂದ ಆಹ್ವಾನ ಬಂದಿರುವುದು ನಿಜ : ಮಾಜಿ ಶಾಶಕ ರಘುಪತಿ ಭಟ್

October 14, 2026
ಸ್ಟಿಂಗ್ ಆಪರೇಷನ್ ವಿವಾದದ : ಮಾನಹಾನಿ ಪ್ರಸಾರಕ್ಕೆ ತಡೆ ಕೋರಿ ಕೋರ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ

ಸ್ಟಿಂಗ್ ಆಪರೇಷನ್ ವಿವಾದದ : ಮಾನಹಾನಿ ಪ್ರಸಾರಕ್ಕೆ ತಡೆ ಕೋರಿ ಕೋರ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ

October 13, 2026
ಕೋಡಿಂಬಾಡಿ: ಅಕ್ಕರೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ

ಕೋಡಿಂಬಾಡಿ: ಅಕ್ಕರೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ

October 13, 2026
ಕರ್ನಾಟಕದ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ

ಕರ್ನಾಟಕದ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ

October 13, 2026
ಪುತ್ತೂರು ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

October 13, 2026
ಶ್ರೀ ಭಗವತೀ ಚಾರಿಟೇಬಲ್ ಟ್ರಸ್ಟ್ ಮರ್ದಾಳ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಆರ್ಥಿಕ ನೆರವು !

ಶ್ರೀ ಭಗವತೀ ಚಾರಿಟೇಬಲ್ ಟ್ರಸ್ಟ್ ಮರ್ದಾಳ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಆರ್ಥಿಕ ನೆರವು !

October 13, 2026
ಉಪ್ಪಿನಂಗಡಿ ಶ್ರೀರಾಮ ಶಾಲೆ ಸಂಚಾಲಕ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಯು.ಜಿ. ರಾಧ ಸಮಾಜ ಸೇವೆಗೆ ವಿದಾಯ

ಉಪ್ಪಿನಂಗಡಿ ಶ್ರೀರಾಮ ಶಾಲೆ ಸಂಚಾಲಕ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಯು.ಜಿ. ರಾಧ ಸಮಾಜ ಸೇವೆಗೆ ವಿದಾಯ

October 12, 2026
ಶಿರ್ಲಾಲು ಗ್ರಾಮದ ಮಣಿಲದಲ್ಲಿ ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ

ಶಿರ್ಲಾಲು ಗ್ರಾಮದ ಮಣಿಲದಲ್ಲಿ ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ

October 12, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Saturday, October 17, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಕೇರಳ ರಾಜ್ಯದ ಲಾಟರಿ ಪುತ್ತೂರಿನಲ್ಲಿ ಅಕ್ರಮ ಮಾರಾಟ – ಇಬ್ಬರ ವಿರುದ್ಧ ಪ್ರಕರಣ ದಾಖಲು

    ಕೇರಳ ರಾಜ್ಯದ ಲಾಟರಿ ಪುತ್ತೂರಿನಲ್ಲಿ ಅಕ್ರಮ ಮಾರಾಟ – ಇಬ್ಬರ ವಿರುದ್ಧ ಪ್ರಕರಣ ದಾಖಲು

    ಬೆಳ್ತಂಗಡಿ ಆರೋಗ್ಯ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 3 ಆರೋಪಿಗಳ ದಸ್ತಗಿರಿ

    ಬೆಳ್ತಂಗಡಿ ಆರೋಗ್ಯ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 3 ಆರೋಪಿಗಳ ದಸ್ತಗಿರಿ

    ಪುತ್ತೂರುದ ಪಿಲಿಗೊಬ್ಬು 2026, ಸೀಸನ್ 4- ವಿವಿಧ ಆಹಾರ ಮಳಿಗೆಗಳು, ತಾರೆಯರ ಮೆರುಗು ವಿಜೃಂಭಣೆಯಿಂದ ಜರುಗಲಿದೆ- ಸಹಜ್ ರೈ ಬಳಜ್ಜ

    ಪುತ್ತೂರುದ ಪಿಲಿಗೊಬ್ಬು 2026, ಸೀಸನ್ 4- ವಿವಿಧ ಆಹಾರ ಮಳಿಗೆಗಳು, ತಾರೆಯರ ಮೆರುಗು ವಿಜೃಂಭಣೆಯಿಂದ ಜರುಗಲಿದೆ- ಸಹಜ್ ರೈ ಬಳಜ್ಜ

    ಕೋಡಿಂಬಾಡಿ: ಅಕ್ಕರೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ

    ಕೋಡಿಂಬಾಡಿ: ಅಕ್ಕರೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ

    ಪುತ್ತೂರು ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

    ಪುತ್ತೂರು ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

    ಶ್ರೀ ಭಗವತೀ ಚಾರಿಟೇಬಲ್ ಟ್ರಸ್ಟ್ ಮರ್ದಾಳ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಆರ್ಥಿಕ ನೆರವು !

    ಶ್ರೀ ಭಗವತೀ ಚಾರಿಟೇಬಲ್ ಟ್ರಸ್ಟ್ ಮರ್ದಾಳ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಆರ್ಥಿಕ ನೆರವು !

    ಉಪ್ಪಿನಂಗಡಿ ಶ್ರೀರಾಮ ಶಾಲೆ ಸಂಚಾಲಕ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಯು.ಜಿ. ರಾಧ ಸಮಾಜ ಸೇವೆಗೆ ವಿದಾಯ

    ಉಪ್ಪಿನಂಗಡಿ ಶ್ರೀರಾಮ ಶಾಲೆ ಸಂಚಾಲಕ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಯು.ಜಿ. ರಾಧ ಸಮಾಜ ಸೇವೆಗೆ ವಿದಾಯ

    ಶಿರ್ಲಾಲು ಗ್ರಾಮದ ಮಣಿಲದಲ್ಲಿ ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ

    ಶಿರ್ಲಾಲು ಗ್ರಾಮದ ಮಣಿಲದಲ್ಲಿ ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ

    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವಕ್ಕೆ ಚಾಲನೆ

    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವಕ್ಕೆ ಚಾಲನೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಈಶ್ವಮಂಗಲ

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

by ಪ್ರಜಾಧ್ವನಿ ನ್ಯೂಸ್
July 10, 2024
in ಈಶ್ವಮಂಗಲ, ಕುಂಬ್ರ, ಕೃಷಿ, ಪುತ್ತೂರು, ಪ್ರಾದೇಶಿಕ
0
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾಸ್ ಲಿಮಿಟೆಡ್‌ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ
18
SHARES
51
VIEWS
ShareShareShare

ಕಾವು: ದ.ಕ ಜಿಲ್ಲೆಗೆ ಅಡಿಕೆಯೇ ಆಧಾರಸ್ತಂಭವಾಗಿದೆ, ಅಡಿಕೆ ಇಲ್ಲದಿದ್ರೆ ಜಿಲ್ಲೆಯ ಆರ್ಥಿಕ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಲಿದೆ, ಪ್ರಸ್ತುತ ಅನೇಕ ಕಾರಣಗಳಿಂದ ಅಡಿಕೆ ಕೃಷಿಕರು ಸಂಕಷ್ಟದಲ್ಲಿದ್ದಾರೆ ಹಾಗಾಗಿ ಅಡಿಕೆಯ ಬಗ್ಗೆ ಸಂಶೋಧನೆ ಮತ್ತು ಅಡಿಕೆಯ ಪರ್ಯಾಯ ಬಳಕೆಯಾದ್ರೆ ಮಾತ್ರ ಅಡಿಕೆಗೆ ಭವಿಷ್ಯವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಜು.9ರಂದು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳೂರು ಕೃಷಿಕರ ಸಹಕಾರಿ ಸಂಘ ‘ಮಾಸ್’ ಇವರಿಂದ ಆರಂಭಗೊಂಡ ಅಡಿಕೆ ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.

ಅಡಿಕೆ ಕೃಷಿ ಉತ್ಪನ್ನವಾಗದೇ ಕಮರ್ಷಿಯಲ್ ಕ್ರಾಪ್ ಆಗಿ ವಿಭಾಗವಾಗಿರುವುದರಿಂದ ಅಡಿಕೆ ಹಳದಿ ರೋಗ ಇನ್ನಿತರ ಸಮಸ್ಯೆಗಳಿಗೆ ಸರಕಾರದಿಂದ ಯಾವುದೇ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ನಮ್ಮ ರಾಜ್ಯದಲ್ಲಿರುವ 26 ಕಮರ್ಷಿಯಲ್ ಬೆಳೆಗಳನ್ನು ಕೃಷಿ ಉತ್ಪನ್ನವಾಗಿ ಪರಿವರ್ತಿಸುವಂತೆ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಡಿಕೆ ಕೃಷಿ ಉತ್ಪನ್ನವಾದಲ್ಲಿ ಸಾಕಷ್ಟು ಅನುದಾನ, ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಶೋಕ್ ಕುಮಾರ್ ರೈ ಯವರು ಹೇಳಿದರು.

ನೆಟ್ಟಣದಲ್ಲಿರುವ ಸಿಪಿಸಿಆರ್‌ಐ ಅಡಿಕೆ ಮತ್ತು ತೆಂಗು ಸಂಶೋಧನೆಗೆಂದು ಇರುವ ಸಂಸ್ಥೆಯಾದ್ರೂ ಕೃಷಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲಿರುವ ವಿಜ್ಞಾನಿಗಳು ತಿಂಗಳಿಗೆ ೨ ಲಕ್ಷ ಸಂಬಳ ಪಡೆಯುವುದು ಮಾತ್ರವೇ ಹೊರತು ಏನೂ ಸಂಶೋಧನೆ ಮಾಡುತ್ತಿಲ್ಲ, ಹಾಗಾಗಿ ಅಡಿಕೆಗೆ ಒತ್ತುಕೊಟ್ರೆ ಮಾತ್ರ ನೆಟ್ಟಣದಲ್ಲಿರುವ ಜಾಗಕ್ಕೆ ರಿನಿವಲ್‌ಗೆ ಅವಕಾಶ ಕೊಡುತ್ತೇವೆ ಇಲ್ಲದಿದ್ರೆ ಆ ಜಾಗವನ್ನು ಕೃಷಿ ಇಲಾಖೆಗೆ ಕೊಡಿಸುತ್ತೇವೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಮಾಸ್ ಅಧ್ಯಕ್ಷ ಸೀತಾರಾಮ ರೈ ಸವಣೂರುರವರು ಮಾತನಾಡಿ 1970ರಲ್ಲಿ ಅಡಿಕೆಗೆ ರೂ.3 ಆದಾಗ ವಾರಣಾಸಿ ಸುಬ್ರಾಯ ಭಟ್ಟರ ಮೂಲಕ ಕ್ಯಾಂಪ್ಕೋ ಆರಂಭಗೊಂಡಿತು, 2011ರಲ್ಲಿ ಮತ್ತೆ ಅಡಿಕೆ ಧಾರಣೆ ರೂ.30ಕ್ಕೆ ಕುಸಿದಾಗ ಮಾಸ್ ಸಂಸ್ಥೆ ಆರಂಭವಾಗಿ ಪ್ರಸ್ತುತ 9 ಖರೀದಿ ಕೇಂದ್ರಗಳ ಮೂಲಕ ವಾರ್ಷಿಕ ರೂ.167ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸುತ್ತಿದೆ. ಬೈಕಂಪಾಡಿಯಲ್ಲಿ ಪ್ರಧಾನ ಕಛೇರಿ ಹೊಂದಿದ್ದು ಒಟ್ಟು 48 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ, ಸುಳ್ಯದಲ್ಲಿ ಅಡಿಕೆ ಗಾರ್ಬಲಿಂಗ್ ತೆರೆಯಲು ಉದ್ದೇಶಿಸಿದ್ದು, ಕಡಬ-ಸುಳ್ಯದಲ್ಲಿ ಅಡಿಕೆ ಖರೀದಿ ಕೇಂದ್ರ ತೆರೆಯಲು ಬೇಡಿಕೆ ಬಂದಿದೆ. ಪರಿಷ್ಕರಿಸಿದ ಅಡಿಕೆಯನ್ನು ನೇರವಾಗಿ ಮಹಾರಾಷ್ಟ್ರ, ಗುಜರಾತ್‌ಗೆ ಮಾರಾಟ ಮಾಡಿ ಹೆಚ್ಚು ಲಾಭಗಳಿಸುವ ಯೋಜನೆಯನ್ನು ಹೊಂದಿದೆ ಎಂದು ಹೇಳಿದರು.

ಮಾಸ್‌ನಲ್ಲಿ ಪ್ರಸ್ತುತ ಅಡಿಕೆ ಖರೀದಿ ದ್ವಿಗುಣಗೊಂಡಿದ್ದು, ಈ ಆರ್ಥಿಕ ವರ್ಷದ 3 ತಿಂಗಳಲ್ಲಿ ಈಗಾಗಲೇ 510 ಕ್ವಿಂಟಾಲ್ ಅಡಿಕೆ ಕಳೆದ ಬಾರಿಗಿಂತ ಜಾಸ್ತಿ ಖರೀದಿ ಆಗಿದೆ, ಸಂಸ್ಥೆಯ ಆರ್ಥಿಕ ಸದೃಢತೆ ಮತ್ತು ಹಣಕಾಸಿನ ಪೂರೈಕೆಗಾಗಿ ರಾಜ್ಯ ಸರಕಾರದಿಂದ 5 ಕೋಟಿ ರೂ. ಷೇರು ಬಂಡವಾಳ ಪಡೆದುಕೊಳ್ಳಲು ಶಾಸಕರ ಮೂಲಕ ಮನವಿ ಮಾಡಿಕೊಳ್ಳಲಾಗಿದೆ ಎಂದು ಸೀತಾರಾಮ ರೈ ಸವಣೂರುರವರು ಹೇಳಿದರು.

ಜಾಹೀರಾತು

ಮಾರುಕಟ್ಟೆ ಬೆಳವಣಿಗೆಗೆ ಸ್ಪರ್ಧೆ ಅಗತ್ಯವಿದೆ, ಮುಂದಿನ ದಿನದಲ್ಲಿ ಪುತ್ತೂರು ಎಪಿಎಂಸಿಯಲ್ಲೂ ಮಾಸ್‌ನ ಅಡಿಕೆ ಗಾರ್ಬಲಿಂಗ್ ಆರಂಭವಾಗಿ ಕ್ಯಾಂಪ್ಕೋ ಮಾದರಿಯಲ್ಲಿ ಅಂತರ್‌ರಾಜ್ಯ ಸಂಸ್ಥೆಯಾಗಿ ಬೆಳೆಯಲಿ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟುರವರು ಹೇಳಿದರು.

Rosemac bowlar

ಜಾಹೀರಾತು

ಸಭಾಧ್ಯಕ್ಷತೆ ವಹಿಸಿದ್ದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ನಮ್ಮ ಸಂಘದಲ್ಲಿ 1990ರಲ್ಲಿ ಕ್ಯಾಂಪ್ಕೋ ಮೂಲಕ ಅಡಿಕೆ ಖರೀದಿ ಕೇಂದ್ರವನ್ನು ವಾರಣಾಸಿ ಸುಬ್ರಾಯ ಭಟ್‌ರವರು ಉದ್ಘಾಟಿಸಿ 2022ರವರೆಗೆ ಅಡಿಕೆ ಖರೀದಿ ನಡೆಯುತ್ತಿತ್ತು, 2022ರಲ್ಲಿ ಕ್ಯಾಂಪ್ಕೋದವರು ಕಾವುನಲ್ಲೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಆದ ಕಾರಣ ನಮ್ಮ ಸಂಘದಲ್ಲಿ ಅಡಿಕೆ ಖರೀದಿ ಕೇಂದ್ರ ನಿಂತಿತು, ಆದರೆ ನಮ್ಮ ಸಂಘದ ಸದಸ್ಯರು, ಗ್ರಾಹಕರು ನಮ್ಮ ಸಂಘದಲ್ಲೇ ಅಡಿಕೆ ಖರೀದಿ ಬೇಕೆಂದು ಬೇಡಿಕೆ ಇಟ್ಟ ಸಂದರ್ಭದಲ್ಲಿ ನಾವು ಮಾಸ್ ಸಂಸ್ಥೆಯವರಲ್ಲಿ ಮನವಿ ಮಾಡಿಕೊಂಡಿದ್ದೆವು, ಸೀತಾರಾಮ ರೈಯವರು ಅಧ್ಯಕ್ಷರಾದ ಬಳಿಕ ನಮ್ಮ ಮನವಿಗೆ ಸ್ಪಂದನೆ ಸಿಕ್ಕಿ ಇದೀಗ ಮತ್ತೆ ನಮ್ಮ ಸಂಘದಲ್ಲಿ ಅಡಿಕೆ ಖರೀದಿ ಉದ್ಘಾಟನೆಗೊಂಡಿದೆ, ಹಾಗಾಗಿ ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಮಾಸ್‌ನ ಕಾವು ಅಡಿಕೆ ಖರೀದಿ ಕೇಂದ್ರದಲ್ಲಿ ಪ್ರಥಮ ಗ್ರಾಹಕರಾಗಿ ಅಡಿಕೆ ಮಾರಾಟ ಮಾಡಿದ ಶ್ರೀಪತಿ ಮೂಡೆತ್ತಾಯ ನನ್ಯ, ವೆಂಕಟಕೃಷ್ಣ ಭಟ್ ಮಳಿ, ಸತ್ಯನಾರಾಯಣ ಕಡಂಬಳಿಕೆಯವರಿಗೆ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾರಾಟ ಬಿಲ್ ವಿತರಣೆ ಮಾಡಿದರು.

ಮಾಸ್‌ನ ನಿರ್ದೇಶಕರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಬೆಳ್ಳೆ ಶಿವಾಜಿ ಸುವರ್ಣ, ಸುಧಾ ಎಸ್ ರೈ, ಪುಷ್ಪರಾಜ ಅಡ್ಯಂತಾಯ, ಸಿಇಓ ಟಿ ಮಹಾಬಲೇಶ್ವರ ಭಟ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೀತಿಕಾ ಚಾಕೋಟೆ ಪ್ರಾರ್ಥಿಸಿದರು. ಕಾವು ಪಿಎಸಿಎಸ್‌ನ ಸಿಇಓ ಕೇಶವಮೂರ್ತಿ ಪಿ.ಜಿ. ವಂದಿಸಿದರು. ಸವಣೂರು ಪಿಎಸಿಎಸ್‌ನ ಸಿಇಓ ಚಂದ್ರಶೇಖರ್ ಮತ್ತು ಕಾವು ಪಿಎಸಿಎಸ್‌ನ ಸಿಬ್ಬಂದಿ ಸುನೀಲ್ ನಿದಿಮುಂಡರವರು ಕಾರ್ಯಕ್ರಮ ನಿರ್ವಹಿಸಿದರು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಪ್ರವೀಣ್ ರೈ ಮೇನಾಲ, ಲೋಕೇಶ್ ಚಾಕೋಟೆ, ರಾಮಣ್ಣ ನಾಯ್ಕ ಕುದ್ರೋಳಿ, ಶ್ರೀಧರ್ ರಾವ್ ನಿದಿಮುಂಡ, ಶಿವಪ್ರಸಾದ್ ಕೊಚ್ಚಿ, ಲೋಹಿತ್ ಅಮ್ಚಿನಡ್ಕ, ಹೇಮಾವತಿ ಚಾಕೋಟೆ, ಮೋಹನಾಂಗಿ ಬೀಜಂತ್ತಡ್ಕರವರು ಅತಿಥಿಗಳನ್ನು ಗೌರವಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

LOTUS TRAVEL

ಜಾಹೀರಾತು

ಮಾಸ್‌ನ ಕಾವು ಅಡಿಕೆ ಖರೀದಿ ಕೇಂದ್ರದಲ್ಲಿ ಉದ್ಘಾಟನಾ ದಿನದಂದೇ ಅಡಿಕೆ ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಉದ್ಘಾಟನಾ ದಿನದ ಸಲುವಾಗಿ ಪ್ರತಿ ಕೆ.ಜಿ ಅಡಿಕೆಗೆ ರೂ.2 ಹೆಚ್ಚಳ ದರ ನೀಡಲಾಗಿತ್ತು, ಪ್ರಥಮ ದಿನದಂದು 76 ಗ್ರಾಹಕರಿಂದ ಸುಮಾರು 5.3 ಟನ್‌ನಷ್ಟು ಅಡಿಕೆ ಖರೀದಿ ಆಗಿದೆ, ಹೊಸ ಅಡಿಕೆ ರೂ.387, ಹಳೆ ಅಡಿಕೆ ರೂ.465ಕ್ಕೆ ಖರೀದಿ ಆಗಿದೆ ಎಂದು ಮಾಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ ಲೋಕೇಶ್‌ರವರು ಮಾಹಿತಿ ನೀಡಿದ್ದಾರೆ.

SendShare7Share
Previous Post

ಪುತ್ತೂರು: ನಿಪ್ಪಾನ್ ಪೈಂಟ್ಸ್‌ನ ಮಳಿಗೆ ಗಜಾನನ ಟ್ರೆಡರ್ಸ್ ಸ್ಥಳಾಂತರಗೊಂಡು ಶುಭಾರಂಭ

Next Post

ಮಂಗಳೂರು: ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಲು ಭರತ್ ಶೆಟ್ಟಿ ಟೆರರಿಸ್ಟ. ಹಾಗಾದರೆ ಶಸ್ತ್ರಾಸ್ತ್ರಗಳನ್ನು ಎಲ್ಲಿಟ್ಟಿದ್ದಾರೆ: ಮಂಜುನಾಥ್ ಭಂಡಾರಿ ಪ್ರಶ್ನೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..