ಬೆಳಗಾವಿ: ಮೊಹರಂ ಹಬ್ಬ ದಿನ ಬುದ್ಧಿಮಾಂದ್ಯ ಯುವತಿ ಮೇಲೆ ಅನ್ಯಕೋಮಿನ ಯುವಕನಿಂದ ಅತ್ಯಾಚಾರ ಯತ್ನ.
ತಾಲೂಕಿನ ಕಡೋಲಿ ಗ್ರಾಮದಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಅನ್ಯಕೋಮಿನ ಯುವಕ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.
ಕಡೋಲಿ ಗ್ರಾಮದ ಆಜಾದ್ ಗಲ್ಲಿಯ ಸಮೀರ ಅಬ್ಬಾಸ್ ಧಾಮಣೆಕರ ಎಂಬ ಯುವಕ ಬುದ್ದಿಮಾಂದ್ಯ ಯುವತಿಯನ್ನು ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದು ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಜು. 17 ರಂದು ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ವೇಳೆ ಈ ಯುವಕ ಬುದ್ಧಿಮಾಂದ್ಯತೆಯ ಯುವತಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಈತನನ್ನು ಗ್ರಾಮಸ್ಥರು ಹಿಡಿದು ಕಾಕತಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನ್ಯಮತೀಯ ಯುವಕ ಮತ್ತೊಂದು ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಕಡೋಲಿ ಗ್ರಾಮಸ್ಥರು ಠಾಣೆಗೆ ಮುಂದೆ ಜಮಾಯಿಸಿದ್ದರು. ಎಲ್ಲರನ್ನೂ ಪೊಲೀಸರು ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಡಿಸಿಪಿಗಳಾದ ರೋಹನ್ ಜಗದೀಶ ಹಾಗೂ ಪಿ.ವಿ.ಸ್ನೇಹ ಠಾಣೆಗೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಗ್ರಾಮದಲ್ಲಿ ಸಭೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.