ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ಜಂಟಿ ಆಶ್ರಯದಲ್ಲಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ದಿ| ಜ್ಞಾನಪ್ರಕಾಶ್ ಆಚಾರ್ಯ ಅಶ್ವಥನಗರ ಪೆರುವಾಯಿ ಇವರ ಸ್ಮರಣಾರ್ಥವಾಗಿ
ದಿನಾಂಕ 21-07-2024 ನೇ ಆದಿತ್ಯವಾರದಂದು ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲತ್ತಡ್ಕದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಸಭಾವೇದಿಕೆಯಲ್ಲಿ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಕಾಳಿಕಾಂಬಾ ಆಂಜನೇಯ ಕ್ಷೇತ್ರ ಕುಕ್ಕಾಜೆ, ಹಿಂದೂ ಮುಖಂಡರು ಹಾಗೂ ರಾಜಕೀಯ ಮುಂದಾಳು ಶ್ರೀ ಅರುಣ್ ಕುಮಾರ್ ಪುತ್ತಿಲ,ಭಾಜಪ ಪುಣಚ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ್ ಶೆಟ್ಟಿ ಉಜಿರೆಮಾರು, ಶ್ರೀ ಪದ್ಮನಾಭ ಕಟ್ಟೆ ಜಿಲ್ಲಾ ಮಂದಿರ ಅರ್ಚಕ ಪ್ರಮುಖ ವಿಶ್ವ ಹಿಂದೂ ಪರಿಷತ್ ಪುತ್ತೂರು,ಶಾಲಾ ಮುಖ್ಯೋಪಾದ್ಯಯರು ಶ್ರೀ ಕುಂಜ್ಞ ನಾಯ್ಕ,ನಿಕಟ ಪೂರ್ವ ಪಂಚಾಯತ್ ಅಧ್ಯಕ್ಷರು ಹಾಗೂ ಹಾಲಿ ಪಂಚಾಯತ್ ಸದಸ್ಯರಾದ ಶ್ರೀ ಬಾಲಕೃಷ್ಣ ಪೂಜಾರಿ ಕಲ್ಲಡ್ಕ ಪೆರುವಾಯಿ ಹಾಗೂ ಕ್ವಾಲಿಟಿ ಆಂಡ್ ಟೆಕ್ನಿಕಲ್ ಮ್ಯಾನೇಜರ್ ಎ ಜೆ ಬ್ಲಡ್ ಗ್ರೂಪಿನ ಪಿ ಆರ್ ಗೋಪಾಲ್ ಕೃಷ್ಣ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪೆರುವಾಯಿ ಘಟಕದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶ್ರೀ ಶೇಖರ ಪೂಜಾರಿ ಕುಂಬಳಕೋಡಿ ಹಾಗೂ ಬಜರಂಗದಳ ಸಂಚಾಲಕರಾದ ಶ್ರೀ ವಿನೀತ್ ಶೆಟ್ಟಿ ಕಾನ ಪೆರುವಾಯಿ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷರಾದ ಶ್ರೀ ಮಂಜುನಾಥ ಆಚಾರ್ಯರವರು ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸ್ವರ್ಗಸ್ಥರಾದ ಜ್ಞಾನಪ್ರಕಾಶ್ ಆಚಾರ್ಯ ಇವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಲಾಯಿತು.
ಜ್ಞಾನಪ್ರಕಾಶ್ ಇವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿದ್ದರು.
ಶ್ರೀಮತಿ ಅಶ್ವಿನಿ ಜಯಪ್ರಕಾಶ್ ಪಾಟಳಿ ಕೊಲ್ಲತ್ತಡ್ಕರವರು ಪ್ರಾರ್ಥಿಸಿದರು.ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೋಕ್ಷಿತ್ ಪೆರುವಾಯಿ ಸ್ವಾಗತಿಸಿ,ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶ್ರೀ ಶೇಖರ ಪೂಜಾರಿ ಕುಂಬಳಕೋಡಿರವರು ವಂದಿಸಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೆರುವಾಯಿ ಮಂಡಲ ಕಾರ್ಯವಾಹರಾದ ಶ್ರೀ ವಿಕಾಸ್ ರಾಜ್ ಓಣಿಬಾಗಿಲು ರವರು ಕಾರ್ಯಕ್ರಮ ನಿರೂಪಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.