ಪುತ್ತೂರು: ರಾಜ್ಯ ಮಟ್ಟದ ಕರಾಟೆಯಲ್ಲಿ ಪ್ರಾಪ್ತಿ ಶೆಟ್ಟಿ ಪ್ರಥಮ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಪುತ್ತೂರು : ಬೆಂಗಳೂರಿನಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಕರಾಟೆ ಟೂರ್ನಮೆಂಟ್ ನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಪ್ತಿ ಶೆಟ್ಟಿ ಪ್ರಥಮ ಸ್ಥಾನಗಳಿಸಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಪ್ತಿ ಶೆಟ್ಟಿ ಆಶಾ ಮತ್ತು ಗಿರೀಶ್ ಶೆಟ್ಟಿ ಇವರ ಪುತ್ರಿಯಾಗಿದ್ದು, ಇವರಿಗೆ ಸೆನ್ಸಾಯಿ ಮಾಧವ ಅಳಿಕೆ ಇವರ ಮಾರ್ಗದರ್ಶನದಲ್ಲಿ ಸುರೇಶ್, ದಿಲೀಪ್, ರೋಹಿತ್, ನಿಖಿಲ್, ನಿವೇದಿತಾ, ರೋಶಿನಿ ತರಬೇತಿಯನ್ನ ನೀಡಿರುತ್ತಾರೆ.