ದೇಶದಲ್ಲಿ ಮಳೆಯಿಂದಾಗಿ ಆಗುವ ಅನಾಹುತಗಳು ಇನ್ನೂ ಮುಗಿದಿಲ್ಲ, ಆಕಾಶದಿಂದ ಒಂದು ದೊಡ್ಡ ಆಪತ್ತು ಬರಲಿದೆ ಎಂದು ಹಾರನಹಳ್ಳಿ ಗ್ರಾಮದ ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನಮ್ಮ ದೇಶದಲ್ಲಿ ಮಳೆ ಇನ್ನೂ ಮುಕ್ತಾಯವಾಗಿಲ್ಲ. ನಾನು ಈ ಹಿಂದೆ ಪ್ರಾಕೃತಿಕ ದೋಷವಿದೆ ಎಂದು ಹೇಳಿದಂತೆ ಅದಿನ್ನೂ ಸಂಭವಿಸುತ್ತದೆ. ಈ ಬಾರಿ ಆಕಾಶದಿಂದ ಭಾರೊ ದೊಡ್ಡ ಆಪತ್ತು ಕಾದಿದೆ ಎಂದು ಹಾರನಹಳ್ಳಿ ಗ್ರಾಮದ ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಒಂದು ಆಕಾಶ ತತ್ವ ಪ್ರಕಾರ ತೊಂದರೆ ಆಗಬಹುದು. ಅದು ರಾಜನ ಮೇಲೆ ಭಂಗ ಬೀರುತ್ತದೆ. ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕಟ್ ಮಾಡಿಸಿದ. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮಾ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ಲುತ್ತಾನೆ. ಸೆಂಟ್ರಲ್, ಸ್ಟೇಟ್‌ಲ್ಲೂ ಇದೆ ಆಗೋದು. ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಅಂತ ಹೇಳಿದ್ದೇನೆ. ಜಲ, ಅಗ್ನಿ, ಪೃಥ್ವಿ, ವಾಯು ಅಂತ ಇರುತ್ತದೆ. ಅದರಿಂದ ತೊಂದರೆ ಆಗುವುದು ತಪ್ಪಿದ್ದಲ್ಲ ಎಂದು ತಿಳಿಸಿದರು.