ವಿಶ್ವದ ಅತಿದೊಡ್ಡ ಬಿಸಿ ಮರುಭೂಮಿ ಸಹರಾ ಮರುಭೂಮಿ. 9,200,000 ಚದರ ಕಿಲೋಮೀಟರ್ ವಿಸ್ತೀರ್ಣದೊಂದಿಗೆ ಮೂರನೇ ಅತಿದೊಡ್ಡ ಮರುಭೂಮಿ ಎನಿಸಿಕೊಂಡಿದೆ. ಅಂಟಾರ್ಕ್ಟಿಕಾ ಮತ್ತು ಉತ್ತರ ಆರ್ಕ್ಟಿಕ್ ಮರುಭೂಮಿಗಳಿಗಿಂತ ಚಿಕ್ಕದಾಗಿದ್ದು ಉತ್ತರ ಆಫ್ರಿಕಾದಾದ್ಯಂತ ವ್ಯಾಪಿಸಿರುವ ಮರುಭೂಮಿಯಾಗಿದೆ.
ಗ್ರಹದ ಅತ್ಯಂತ ಶುಷ್ಕ ಪ್ರದೇಶಗಳಲ್ಲಿ ಒಂದಾದ ಸಹಾರಾ ಮರುಭೂಮಿಯು ಭಾರೀ ಮಳೆಯಿಂದಾಗಿ ಹಸಿರಾಗಿ ಕಾಣಿಸುತ್ತಿರುವುದು ವಿಸ್ಮಯವನ್ನು ಹುಟ್ಟಿಸಿದೆ.
ಸೆಪ್ಟೆಂಬರ್ 7 ಮತ್ತು 8 ರಂದು ಚಂಡಮಾರುತದ ನಂತರದ ಮಳೆಯು ವಾಯುವ್ಯ ಆಫ್ರಿಕಾದ ಕೆಲವು ಭಾಗಗಳಲ್ಲಿ ಸಸ್ಯವರ್ಗದ ಬೆಳವಣಿಗೆಯನ್ನು ಕಾಣಬಹುದು ಎಂದು ಅಧ್ಯಯನದ ವರದಿ ತಿಳಿಸಿದೆ.
ನಾಸಾದ ಉಪಗ್ರಹ ಸೆರೆಹಿಡಿದ ಚಿತ್ರಗಳು ಈ ಹಸಿರಿನ ಉಪಸ್ಥಿತಿಯನ್ನು ಪತ್ತೆಹಚ್ಚಿವೆ.
ಮೊರಾಕೊ, ಅಲ್ಜೀರಿಯಾ, ಟುನೀಶಿಯಾ ಮತ್ತು ಲಿಬಿಯಾದಲ್ಲಿ ಅಪರೂಪವಾಗಿ ಮಳೆ ಬೀಳುವ ಪ್ರದೇಶಗಳು ಈಗ ಹಸಿರು ಕುರುಹುಗಳನ್ನು ತೋರಿಸುತ್ತಿವೆ ಎಂದು ನಾಸಾದ ಭೂ ವೀಕ್ಷಣಾಲಯ ತಿಳಿಸಿದೆ.
ಆದಾಗ್ಯೂ, ವಿಜ್ಞಾನಿಗಳು ಸಹಾರಾದಲ್ಲಿನ ಹಸಿರು ಹೊಸ ವಿದ್ಯಮಾನವಲ್ಲ ಎಂದು ಹೇಳುತ್ತಾರೆ.
ವುಡ್ಸ್ ಹೋಲ್ ಓಷಿಯಾನೋಗ್ರಾಫಿಕ್ ಸಂಸ್ಥೆಯ ಅಧ್ಯಕ್ಷ ಪೀಟರ್ ಡಿಮಾಕ್ ಅವರ ಸಂಶೋಧನೆಯು 5,000 ವರ್ಷಗಳ ಹಿಂದೆ ಸಹಾರಾದಲ್ಲಿ ಸಸ್ಯವರ್ಗ ಮತ್ತು ಸರೋವರಗಳು ಅಸ್ತಿತ್ವದಲ್ಲಿದ್ದವು ಎಂದು ಸೂಚಿಸುತ್ತದೆ.
ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಆಫ್ ಅರ್ಥ್ ಸೈನ್ಸಸ್‌ನ ಪ್ರೊಫೆಸರ್ ಮೋಶೆ ಅರ್ಮನ್, ಆಫ್ರಿಕಾದಲ್ಲಿ ಇತ್ತೀಚಿನ ಪ್ರವಾಹದ ಪರಿಣಾಮವಾಗಿ ಸಾಮಾನ್ಯವಾಗಿ ಒಣಗಿದ ಸರೋವರಗಳು ನೀರಿನಿಂದ ತುಂಬಿವೆ ಎಂದು ಹೇಳುತ್ತಾರೆ.
ವರ್ಲ್ಡ್ ಫುಡ್ ಪ್ರೋಗ್ರಾಂ ಮತ್ತು ಅಸೋಸಿಯೇಟೆಡ್ ಪ್ರೆಸ್ ವರದಿಯು ಆಫ್ರಿಕದಲ್ಲಿನ ವಿರಳ ಜನಸಂಖ್ಯೆಯ ಪ್ರದೇಶಗಳ ಮೇಲೆ ಮಳೆಯು ಗಮನಾರ್ಹವಾಗಿ ಪ್ರಭಾವ ಬೀರಿದೆ.
ಪ್ರವಾಹದಿಂದಾಗಿ, 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಆಫ್ರಿಕನ್ ದೇಶಗಳಲ್ಲಿ ಸುಮಾರು 4 ಮಿಲಿಯನ್ ಜನರು ಬಳಲುತ್ತಿರುವುದಾಗಿ ತಿಳಿದು ಬಂದಿದೆ.