ದ್ವಾರಕೀಶ್ ಎಂದ ತಕ್ಷಣ ಹಾಸ್ಯಕ್ಕೆ ಹೆಸರು ಪಡೆದ ನಟ.ಆಗಸ್ಟ್ 19 1942 ರಂದು ಮೈಸೂರಿನ ಹುಣಸೂರಿನಲ್ಲಿ ಜನಿಸಿದ ಇವರು ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿದವರು. 1964 ರಲ್ಲಿ ವೀರ ಸಂಕಲ್ಪ ಸಿನೆಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇವರು ಕಳ್ಳ- ಕುಳ್ಳ ಸಿನೆಮಾದಲ್ಲಿ ವಿಷ್ಣುವರ್ಧನ್ ಜೊತೆ ಅಭಿನಯಿಸಿ ಬೇಶ್ ಎನಿಸಿಕೊಂಡಿತ್ತು.
ಮೇಯರ್ ಮುತ್ತಣ್ಣ ಮೂಲಕ ಸ್ವತಂತ್ರ ನಿರ್ಮಾಪಕರಾದರು. ನೂರಾರು ಸಿನೆಮಾಗಳಲ್ಲಿ ನಟಿಸಿದ ಇವರು 1985 ರಲ್ಲಿ ನೀ ಬರೆದ ಕಾದಂಬರಿ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ಇವರು ಕೊನೆಯ ಕಾಲದಲ್ಲಿ ವಿಷ್ಣುವರ್ಧನ್ ಜೊತೆ ಆಪ್ತಮಿತ್ರ ಸಿನೆಮಾ ನಟಿಸಿ ಜನ ಮೆಚ್ಚುಗೆ ಪಡೆದ ಕೌಟುಂಬಿಕ ಸಿನೆಮಾ ಎಂದು ನೋಡುಗರಿಂದ ಮಾಕ್ಸ್ ಪಡೆದು ಕನ್ನಡ ಮಾತ್ರವಲ್ಲದೆ ಹಿಂದಿ ತಮಿಳು ಸಿನೆಮಾ ನಿರ್ಮಿಸಿದ ಕೀರ್ತಿ ಇವರಿಗಿದೆ.
81 ವಯಸ್ಸಿನ ಇವರು ವಯೋಸಹಜ ಕಾಯಿಲೆಯಿಂದ ಇಂದು ನಿಧನರಾದರು