ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸವಣೂರು ನಿವಾಸಿ ಹಸೈನಾರ್ ಈ ಹಿಂದೆ ಈ ಮಸೀದಿಯಿಂದ ಪ್ರತಿ ಮನೆಗೆ 250 ರೂಪಾಯಿಗಳ ಕರ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಈ ಮಸೀದಿಯ ಅಧಿಕೃತ ಆಡಳಿತ ಮಂಡಳಿಯನ್ನು ಮಸೀದಿಯ ಗೌರವಾಧ್ಯಕ್ಷ ಮಹಮ್ಮದ್ ಅಮೀದ್ ಎನ್ನುವ ತಂಞಳ್ ಒಬ್ಬರು ವಕ್ಫ್ ಬೋರ್ಡ್ ಮೂಲಕ ಆಯ್ಕೆಯಾದ ಅಧಿಕೃತ ಆಡಳಿತ ಮಂಡಳಿಯನ್ನು ವಜಾ ಮಾಡಿ ತಮ್ಮ ಬೆಂಬಲಿಗರನ್ನು ಸೇರಿಸಿಕೊಂಡು ವಕ್ಫ್ ಬೋರ್ಡ್ ನ ಅನುಮತಿ ಪಡೆಯದೆ ಅನಧಿಕೃತ ಮಂಡಳಿಯನ್ನು ನೇಮಿಸಿದ್ದಾರೆ.
ಅಲ್ಲದೆ ಮಸೀದಿಗೆ ಸಂಬಂಧಿಸಿದ ಸಾರ್ವಜನಿಕರ ಗಮನಕ್ಕೆ ತರದೆ ಮನೆ ಮನೆಯಿಂದ ಸಂಗ್ರಹಿಸುವ ಮಾಸಿಕ ಕರವನ್ನು ಏಕಾಏಕಿ ಏರಿಸಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಬಗ್ಗೆ ಮಸೀದಿ ಮಂಡಳಿಯಲ್ಲಿ ವಿಚಾರಿಸಿದ್ದಕ್ಕೆ ನನ್ನ ಮೇಲೆ ಬೆಂಬಲಿಗರಿಂದ ಹಲ್ಲೆ ನಡೆಸಿರುವುದಲ್ಲದೆ, ನನ್ನ ಮೇಲೆ ಕೊಲೆಯತ್ನದ ಸುಳ್ಳು ಪ್ರಕರಣವನ್ನೂ ದಾಖಲಿಸಿ ಜೈಲಿಗಟ್ಟಿದ್ದಾರೆ. ಕಮಿಟಿ ನಿರ್ಧಾರವನ್ನು ಪ್ರಶ್ನಿಸಿದವರ ಮೇಲೆ ಬೆದರಿಕೆ,ಹಲ್ಲೆ ನಡೆಸುವ ಕೆಲಸವನ್ಜು ಅನಧಿಕೃತ ಮಂಡಳಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.