ಪುತ್ತೂರು: ಬೋಲ್ವಾರಿನ ಪ್ರಗತಿ ಆಸ್ಪತ್ರೆ ಎದುರುಗಡೆ ಆಟೋರಿಕ್ಷಾ ಒಂದು ಪಲ್ಟಿಯಾಗಿ ಮಹಿಳೆಯೋರ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಗತಿ ಆಸ್ಪತ್ರೆ, ಎದುರುಗಡೆ ಪುತ್ತೂರಿಂದ ಬೊಳುವಾರು ಕಡೆ ಆಟೋರಿಕ್ಷಾ ಒಂದು ಬರುತ್ತಿರುವಾಗ, ಎದುರುಗಡೆಯಿಂದ ಬರುವ ರಿಕ್ಷಾವೊಂದು ಸಡನ್ ಆಗಿ ತಿರುಗಿಸಿದಾಗ, ಪೇಟೆ ಕಡೆಯಿಂದ ಬರುವ ರಿಕ್ಷಾ ಚಾಲಕ ಕೂಡಲೇ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಪಲ್ಟಿ ಯಾದ ಘಟನೆ ನಡೆದಿದೆ.
ಪಲ್ಟಿಯಾದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅತೂರಿನ ಮಹಿಳೆಯೋರ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಕೂಡಲೇ ಪ್ರಗತಿ ಅಸ್ಪತ್ರೆ ಮ್ಯಾನೇಜರ್ ವಿಠಲರವರು ವೀಲ್ ಚಯರ್ ಮೂಲಕ ಕರೆದುಕೊಂಡು ಹೋಗಿ ಅಸ್ಪತ್ರೆಗೆ ದಾಖಲಿಸಿದ್ದಾರೆ.