• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರಿನಲ್ಲಿ ವಿದ್ಯುತ್ ಖಾಸಗೀಕರಣದ ವಿರುದ್ಧ ಮೆಸ್ಕಾಂ, ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಭಟನೆ

ಪುತ್ತೂರಿನಲ್ಲಿ ವಿದ್ಯುತ್ ಖಾಸಗೀಕರಣದ ವಿರುದ್ಧ ಮೆಸ್ಕಾಂ, ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಭಟನೆ

June 17, 2026
ನಾಳೆ ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ 300 ಬೆಡ್ ಮೆಡಿಕಲ್ ಆಸ್ಪತ್ರೆಗೆ ಭೂಮಿ ಪೂಜೆ

ನಾಳೆ ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ 300 ಬೆಡ್ ಮೆಡಿಕಲ್ ಆಸ್ಪತ್ರೆಗೆ ಭೂಮಿ ಪೂಜೆ

September 24, 2026
ದಕ್ಷಿಣ ಕನ್ನಡ ನೂತನ ಡಿಸಿಸಿ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅಧಿಕಾರ ಸ್ವೀಕಾರ

ದಕ್ಷಿಣ ಕನ್ನಡ ನೂತನ ಡಿಸಿಸಿ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅಧಿಕಾರ ಸ್ವೀಕಾರ

September 24, 2026
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರು ದೀಪೋತ್ಸವ’ ಸಮಿತಿಗೆ ಆಯ್ಕೆ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರು ದೀಪೋತ್ಸವ’ ಸಮಿತಿಗೆ ಆಯ್ಕೆ

September 24, 2026
ಪುತ್ತೂರು: ತಾಲೂಕು ಮಟ್ಟದ ಹಿರಿಯ ನಾಗರಿಕರಿಗಾಗಿ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮ

ಪುತ್ತೂರು: ತಾಲೂಕು ಮಟ್ಟದ ಹಿರಿಯ ನಾಗರಿಕರಿಗಾಗಿ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮ

September 24, 2026
ಪುತ್ತಿಲ ಪರಿವಾರದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರುಮಾರು ಗದ್ದೆಯಲ್ಲಿ  ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ.

ಪುತ್ತಿಲ ಪರಿವಾರದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರುಮಾರು ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ.

September 24, 2026
ಸುಳ್ಯ ವಲಯ ಮಟ್ಟದ ಪ್ರೌಢಶಾಲಾ ವಿಭಾಗ 17ರ  ವಯೋಮಾನದ ಬಾಲಕ ಬಾಲಕಿಯರ ವಿಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ  ಜಾಲ್ಸೂರು  ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಪಟುಗಳ ತೆಕ್ಕೆಗೆ ಹಲವು ಪದಕ

ಸುಳ್ಯ ವಲಯ ಮಟ್ಟದ ಪ್ರೌಢಶಾಲಾ ವಿಭಾಗ 17ರ ವಯೋಮಾನದ ಬಾಲಕ ಬಾಲಕಿಯರ ವಿಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಪಟುಗಳ ತೆಕ್ಕೆಗೆ ಹಲವು ಪದಕ

September 23, 2026
ರಾಮಕುಂಜ: ಅರಣ್ಯ ವೀಕ್ಷಕ ಹೃದಯಾಘಾತದಿಂದ ನಿಧನ

ರಾಮಕುಂಜ: ಅರಣ್ಯ ವೀಕ್ಷಕ ಹೃದಯಾಘಾತದಿಂದ ನಿಧನ

September 23, 2026
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂಗೆ 3.5 ಕೋಟಿ; ಶಾಸಕ ಅಶೋಕ್ ರೈ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂಗೆ 3.5 ಕೋಟಿ; ಶಾಸಕ ಅಶೋಕ್ ರೈ

September 23, 2026
ಉಡುಪಿ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ, ಬ್ರಹ್ಮಾವರ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸುವಂತೆ ಉಡುಪಿ ಶಾಸಕ ಯಶಪಲ್ ಸುವರ್ಣ  ಸಚಿವರಲ್ಲಿ ಮನವಿ 

ಉಡುಪಿ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ, ಬ್ರಹ್ಮಾವರ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸುವಂತೆ ಉಡುಪಿ ಶಾಸಕ ಯಶಪಲ್ ಸುವರ್ಣ  ಸಚಿವರಲ್ಲಿ ಮನವಿ 

September 23, 2026
ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿಗಳಾದ ಉಳ್ಳಾಲ ಮೂಲದ ಪ್ರೀತೇಶ್ ಹಾಗೂ ಪುತ್ತೂರಿನ ಕಿರಣ್ ಗೆ ಜೀವಾವಧಿ ಶಿಕ್ಷೆ ಪ್ರಕಟ

ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿಗಳಾದ ಉಳ್ಳಾಲ ಮೂಲದ ಪ್ರೀತೇಶ್ ಹಾಗೂ ಪುತ್ತೂರಿನ ಕಿರಣ್ ಗೆ ಜೀವಾವಧಿ ಶಿಕ್ಷೆ ಪ್ರಕಟ

September 22, 2026
ಧರ್ಮಸ್ಥಳದಿಂದ ಉಜಿರೆ- ಬಂದಾರು-ಉಪ್ಪಿನಂಗಡಿ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ  ಬಸ್ ಪ್ರಾರಂಭ

ಧರ್ಮಸ್ಥಳದಿಂದ ಉಜಿರೆ- ಬಂದಾರು-ಉಪ್ಪಿನಂಗಡಿ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾರಂಭ

September 22, 2026
ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ನಿಧನ

ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ನಿಧನ

September 22, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, September 24, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ನಾಳೆ ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ 300 ಬೆಡ್ ಮೆಡಿಕಲ್ ಆಸ್ಪತ್ರೆಗೆ ಭೂಮಿ ಪೂಜೆ

    ನಾಳೆ ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ 300 ಬೆಡ್ ಮೆಡಿಕಲ್ ಆಸ್ಪತ್ರೆಗೆ ಭೂಮಿ ಪೂಜೆ

    ದಕ್ಷಿಣ ಕನ್ನಡ ನೂತನ ಡಿಸಿಸಿ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅಧಿಕಾರ ಸ್ವೀಕಾರ

    ದಕ್ಷಿಣ ಕನ್ನಡ ನೂತನ ಡಿಸಿಸಿ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅಧಿಕಾರ ಸ್ವೀಕಾರ

    ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರು ದೀಪೋತ್ಸವ’ ಸಮಿತಿಗೆ ಆಯ್ಕೆ

    ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರು ದೀಪೋತ್ಸವ’ ಸಮಿತಿಗೆ ಆಯ್ಕೆ

    ಪುತ್ತೂರು: ತಾಲೂಕು ಮಟ್ಟದ ಹಿರಿಯ ನಾಗರಿಕರಿಗಾಗಿ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮ

    ಪುತ್ತೂರು: ತಾಲೂಕು ಮಟ್ಟದ ಹಿರಿಯ ನಾಗರಿಕರಿಗಾಗಿ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮ

    ಪುತ್ತಿಲ ಪರಿವಾರದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರುಮಾರು ಗದ್ದೆಯಲ್ಲಿ  ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ.

    ಪುತ್ತಿಲ ಪರಿವಾರದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರುಮಾರು ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ.

    ಸುಳ್ಯ ವಲಯ ಮಟ್ಟದ ಪ್ರೌಢಶಾಲಾ ವಿಭಾಗ 17ರ  ವಯೋಮಾನದ ಬಾಲಕ ಬಾಲಕಿಯರ ವಿಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ  ಜಾಲ್ಸೂರು  ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಪಟುಗಳ ತೆಕ್ಕೆಗೆ ಹಲವು ಪದಕ

    ಸುಳ್ಯ ವಲಯ ಮಟ್ಟದ ಪ್ರೌಢಶಾಲಾ ವಿಭಾಗ 17ರ ವಯೋಮಾನದ ಬಾಲಕ ಬಾಲಕಿಯರ ವಿಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಪಟುಗಳ ತೆಕ್ಕೆಗೆ ಹಲವು ಪದಕ

    ರಾಮಕುಂಜ: ಅರಣ್ಯ ವೀಕ್ಷಕ ಹೃದಯಾಘಾತದಿಂದ ನಿಧನ

    ರಾಮಕುಂಜ: ಅರಣ್ಯ ವೀಕ್ಷಕ ಹೃದಯಾಘಾತದಿಂದ ನಿಧನ

    ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂಗೆ 3.5 ಕೋಟಿ; ಶಾಸಕ ಅಶೋಕ್ ರೈ

    ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂಗೆ 3.5 ಕೋಟಿ; ಶಾಸಕ ಅಶೋಕ್ ರೈ

    ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿಗಳಾದ ಉಳ್ಳಾಲ ಮೂಲದ ಪ್ರೀತೇಶ್ ಹಾಗೂ ಪುತ್ತೂರಿನ ಕಿರಣ್ ಗೆ ಜೀವಾವಧಿ ಶಿಕ್ಷೆ ಪ್ರಕಟ

    ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿಗಳಾದ ಉಳ್ಳಾಲ ಮೂಲದ ಪ್ರೀತೇಶ್ ಹಾಗೂ ಪುತ್ತೂರಿನ ಕಿರಣ್ ಗೆ ಜೀವಾವಧಿ ಶಿಕ್ಷೆ ಪ್ರಕಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಈಶ್ವಮಂಗಲ

ಪುತ್ತೂರಿನಲ್ಲಿ ವಿದ್ಯುತ್ ಖಾಸಗೀಕರಣದ ವಿರುದ್ಧ ಮೆಸ್ಕಾಂ, ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಭಟನೆ

by ಪ್ರಜಾಧ್ವನಿ ನ್ಯೂಸ್
June 17, 2026
in ಈಶ್ವಮಂಗಲ, ಉಪ್ಪಿನಂಗಡಿ, ಕಡಬ, ಕುಂಬ್ರ, ಪುತ್ತೂರು, ಪ್ರಾದೇಶಿಕ, ಬೆಳ್ತಂಗಡಿ, ಬೆಳ್ಳಾರೆ, ಮಾಣಿ, ವಿಟ್ಲ, ಸವಣೂರು, ಸುಬ್ರಹ್ಮಣ್ಯ, ಸುಳ್ಯ
0
ಪುತ್ತೂರಿನಲ್ಲಿ ವಿದ್ಯುತ್ ಖಾಸಗೀಕರಣದ ವಿರುದ್ಧ ಮೆಸ್ಕಾಂ, ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಭಟನೆ
44
SHARES
125
VIEWS
ShareShareShare

ಪುತ್ತೂರು: ಮೆಸ್ಕಾಂನ 3 ಜಿಲ್ಲೆ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್ ಇಲಾಖೆಯನ್ನು ಕರ್ನಾಟಕದಲ್ಲಿ ಖಾಸಗೀಕರಣಗೊಳಿಸುವುದರ ವಿರುದ್ಧ ಜೂ.16ರಂದು ಬನ್ನೂರಿನಲ್ಲಿರುವ ಮೆಸ್ಕಾಂನ ಪುತ್ತೂರು ವಿಭಾಗದ ಕಚೇರಿಯಲ್ಲಿ ಮೆಸ್ಕಾಂನ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.

ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಈಗಾಗಲೇ ಕರ್ನಾಟಕದಲ್ಲಿ ಪ್ರಾರಂಭಗೊಂಡಿದೆ. ಟಾಟಾ ಕಂಪನಿಯವರು ಖಾಸಗಿಗೆ ಅರ್ಜಿ ಹಾಕಿದ್ದಾರೆ. ಖಾಸಗಿಯವರಿಗೆ ನೀಡಬೇಕಾದರೆ ಕರ್ನಾಟಕ ವಿದ್ಯುತ್ಚಕ್ತಿ ನಿಯಂತ್ರಣ ಆಯೋಗ ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪಣೆಗಳನ್ನು ಪಡೆಯಬೇಕು. ಆಕ್ಷೇಪಣೆಗಳನ್ನು ಸಲ್ಲಿಸಲು ಜೂ.23ರ ತನಕ ಅವಕಾಶವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಖಾಸಗೀಕರಣಗೊಂಡರೆ ಕೃಷಿ, ಕೈಗಾರಿಕೆ, ಗುತ್ತಿಗೆದಾರರು ಸಹಿತ ಎಲ್ಲಾ ವರ್ಗದವರಿಗೂ ಪರಿಣಾಮ ಬೀಳಲಿದೆ. ಹೀಗಾಗಿ ಪ್ರತಿಯೊಬ್ಬ ನಾಗರೀಕರು ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಖಾಸಗೀಕರಣದಿಂದ ಸಂಭವಿಸಬಹುದಾದ ಹೊಡೆತ, ಸಮಸ್ಯೆಗಳನ್ನು ತಡೆಯುವಂತೆ ಪ್ರತಿಭಟನೆಯಲ್ಲಿ ಆಗ್ರಹ ವ್ಯಕ್ತವಾಯಿತು.

ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಡಿಪ್ಲೋಮ ಇಂಜಿನಿಯರ‍್ಸ್ ಎಸೋಸಿಯೇಶನ್ ರಾಜ್ಯಾಧ್ಯಕ್ಷರಾಗಿರುವ ರಾಮಚಂದ್ರ ಎ. ಮಾತನಾಡಿ, ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರೀಯೆ ಈಗಾಗಲೇ ಪ್ರಾರಂಭಗೊಂಡಿದೆ. ವಿದ್ಯುತ್ ಖಾಸಗೀಕರಣಗೊಂಡರೆ ಬಿಎಸ್‌ಎನ್‌ಎಲ್‌ನ ಪರಿಸ್ಥಿತಿ ಎದುರಿಸಬೇಕಾಗಬಹುದು. ಅಧಿಕ ಜನಸಂಖ್ಯೆ ಆದಾಯ ಬರುವ ಪ್ರಮುಖ ನಗರಗಳನ್ನು ಏರ್‌ಟೆಲ್, ಜಿಯೋದಂತಹ ಖಾಸಗಿ ಕಂಪನಿಗಳು ಪಡೆದುಕೊಂಡಿದೆ. ಆದಾಯ ಇಲ್ಲದೇ ಇರುವ ಗ್ರಾಮೀಣ ಪ್ರದೇಶಗಳು ಸರಕಾರಿ ಸಂಸ್ಥೆಗಳ ಕೈಯಲ್ಲಿದ್ದು ಅಲ್ಲಿ ಸಮಸ್ಯೆ ನಿಭಾಯಿಸಲು ಅಸಾಧ್ಯವಾಗಿದೆ. ಮುಂದೆ ಮೆಸ್ಕಾಂನ ಸ್ಥಿತಿಯೂ ಇದೇ ರೀತಿಯಾಗುವ ಸಾಧ್ಯತೆಯಿದೆ. ಟಾಟಾ ಸಂಸ್ಥೆಯ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ, ಉಡುಪಿ, ಶಿವಮೊಗ್ಗ ನಗರ ಮಾತ್ರ ಖಾಸಗಿಕಣಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದಾರೆ. ಸುಳ್ಯ, ನೆಲ್ಯಾಡಿ ಪುತ್ತೂರುಗಳನ್ನು ಅವರು ಬಿಟ್ಟಿದ್ದಾರೆ. ದೊಡ್ಡ ನಗರಗಳಲ್ಲಿ ಬೃಹತ್ ಕೈಗಾರಿಕೆಗಳು, ಅಪಾರ್ಟ್ ಮೆಂಟ್‌ಗಳಿದ್ದು ಅಲ್ಲಿ ದೊಡ್ಡ ಮಟ್ಟದ ಆದಾಯ ಬರುತ್ತದೆ. ಖಾಸಗಿಯವರು ಸ್ವಂತ ಲಾಭಾಕ್ಕಾಗಿ ಮಾತ್ರ ಮಾಡುತ್ತಾರೆಯೇ ವಿನಃ ಸಾರ್ವಜನಿಕ ಹಿತಾಶಕ್ತಿ ನೋಡಲು ಸಾಧ್ಯವಿಲ್ಲ. ಈಗಾಗಲೇ ಖಾಸಗೀಕರಣಗೊಂಡಿರುವ ದೆಹಲಿ, ಒಡಿಸ್ಸಾ, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳಲ್ಲಿ ಅಲ್ಲಿನ ಜನತೆ ಬಹಳಷ್ಟು ಸಂಕಷ್ಟು ಎದುರಿಸುತ್ತಿದ್ದು ಈ ಪರಿಸ್ಥಿತಿ ಕರ್ನಾಟಕದ ಜನತೆಗೆ ಬಾರದಂತೆ ಪ್ರತಿಯೊಬ್ಬರೂ ಆಕ್ಷೇಪಣೆ ಸಲ್ಲಿಸುವಂತೆ ಅವರು ವಿನಂತಿಸಿದರು.

ಖಾಸಗೀಕರಣದಿಂದ ಗೃಹಜ್ಯೋತಿ ಸಹಿತ ಎಲ್ಲಾ ಉಚಿತ ಯೋಜನೆಗಳಿಗೆ ಕುತ್ತು
ವಿದ್ಯುತ್ ಇಲಾಖೆ ಖಾಸಗೀಕರಣದಿಂದ ಇಲಾಖೆಗೆ ಮಾತ್ರ ಸಂಕಷ್ಟವಲ್ಲ. ರೈತರು, ಗ್ರಾಹಕರು, ಗುತ್ತಿಗೆದಾರರು, ಕೈಗಾರಿಕೋದ್ಯಮಿಗಳಿಗೂ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ಗೃಹ ಜ್ಯೋತಿಯಂತಹ ಉಚಿತ ವಿದ್ಯುತ್ ಯೋಜನೆ, ಪಂಪ್‌ಸೆಟ್‌ಗಳಿಗೆ ರಿಯಾಯಿತಿ ಸಹಿತ ಎಲ್ಲಾ ರಿಯಾಯಿತಿಗಳಿಗೂ ಹೊಡೆತ ಬೀಳಲಿದೆ. ನಾವು ಇಲಾಖೆಯ ಒಳಗಡೇ ಇರುವುದರಿಂದ ನಮಗೆ ಇದರ ಸುಳಿವು ದೊರೆತಿದ್ದು ಆಕ್ಷೇಪಣೆ ಪ್ರಾರಂಭಿಸಿದ್ದೇವೆ. ಸಾರ್ವಜನಿಕರು, ರೈತರು, ಕೈಕಾರಿಕೋದ್ಯಮಿಗಳು, ಗುತ್ತಿಗೆದಾರರು ಸಹಿತ ಪ್ರತಿಯೊಬ್ಬರೂ ಆಕ್ಷೇಪಣೆ ಸಲ್ಲಿಸುವ ಮೂಲಕ ಖಾಸಗೀಕರಣ ಎಂಬ ಪ್ರಕ್ರೀಯೆ ಕರ್ನಾಟಕ ರಾಜ್ಯದೊಳಗೆ ಪ್ರವೇಶಿಸದಂತೆ ಮುಂಜಾಗ್ರತೆ ವಹಿಸಬೇಕು ಎಂದು ಕಾರ್ಯನಿರ್ವಾಹಕ ಇಂಜಿನಿಯರ್, ರಾಜ್ಯಾಧ್ಯಕ್ಷರು ಡಿಪ್ಲೋಮ ಇಂಜಿನಿಯರ‍್ಸ್ ಎಸೋಸಿಯೇಶನ್
ರಾಮಚಂದ್ರ ಹೇಳಿದರು.

ಸುಳ್ಯದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಪ್ರೀತ್ ಕುಮಾರ್ ಮಾತನಾಡಿ, ಕೇಂದ್ರ ಸರಕಾರವು 2003ರಲ್ಲಿ ಜಾರಿ ಮಾಡಿದ ವಿದ್ಯುತ್ ಕಾಯಿದೆಯಂತೆ ಖಾಸಗಿಕರಣಗೊಂಡ ಬಳಿಕ ಯಾವುದೇ ಸಮಸ್ಯೆಯಾದರೂ ಕಾಯಿದೆಯಂತೆ ಸಾರ್ವಜನಿಕ ಹಿತದೃಷ್ಠಿಯಿಂದ ಸೆಕ್ಷನ್ 108ರಲ್ಲಿಅಧಿಕಾರ ಚಲಾಯಿಸಿ ಖಾಸಗಿಯವರ ಲೈಸನ್ಸ್ ರದ್ದು ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿತ್ತು. ಆದರೆ 2026ರ ತಿದ್ದುಪಡಿ ಕಾಯಿದೆಯಲ್ಲಿ ಸೆಕ್ಷನ್ 108ನ್ನು ತೆಗೆದುಹಾಕಿದ್ದಾರೆ. ಹೀಗಾಗಿ ಮುಂದೆ ತಿದ್ದುಪಡಿ ಕಾಯಿದೆ ಜಾರಿಯಾದರೆ ರಾಜ್ಯ ಸರಕಾರಕ್ಕೆ ಯಾವುದೇ ಅಧಿಕಾರವಿರುವುದಿಲ್ಲ. ಈ ಕಾಯಿದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯ ಸಭೆಯಲ್ಲಿದೆ. ಅಲ್ಲಿಯೂ ಅನುಮೋದನೆ ದೊರೆತರೆ ಮುಂದೆ ಸಂಭವಿಸಬಹುದಾದ ಸಮಸ್ಯೆಗಳ ಬಗ್ಗೆ ನಾವು ಯೋಚಿಸಬೇಕು. ಗ್ರಾಹಕರೂ ಆಕ್ಷೇಪಣೆ ಸಲ್ಲಿಸಬೇಕು. ನಾಗರಿಕರೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ. ಅದು ಪುತ್ತೂರಿನಿಂದ ಪ್ರಾರಂಭವಾಗಬೇಕು ಎಂದು ಹೇಳಿದರು.

ಸಂಘದ ಕೇಂದ್ರ ಸಮಿತಿ ಸದಸ್ಯ ಕರಿಬಸಪ್ಪ , ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಷಣ್ಮುಗಪ್ಪ, ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಪ್ರಶಾಂತ್ ,ಇಂಜಿನಿಯರ‍್ಸ್ ಸಂಘದ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಪೈ, 659 ನೌಕರರ ಸಂಘದ ಅಧ್ಯಕ್ಷ ಶಂಕರ ಪ್ರಕಾಶ್, ಎಸ್‌ಎಲ್‌ಇಎಸ್‌ಟಿ ಅಸೋಸಿಯೇಶನ್‌ನ ಕೇಂದ್ರ ಸಮಿತಿ ಸದಸ್ಯ ಸದಾಶಿವ, ಸಂಘದ ಕೇಂದ್ರ ಸಮಿತಿ ಸದಸ್ಯ ಪುತ್ತು ಜೆ. ನಗರ ಉಪ ವಿಭಾಗ ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ, ಮೆಸ್ಕಾಂ ಪುತ್ತೂರು ವಿಭಾಗದ ಸುಳ್ಯ, ಸುಬ್ರಹ್ಮಣ್ಯ, ಕಡಬ, ಪುತ್ತೂರು ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು, ಗುತ್ತಿಗೆದಾರರು, ವಿವಿಧ ವಿಭಾಗಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜಾಹೀರಾತು

ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ವಿದ್ಯುತ್ ಸರಬರಾಜು ಮಾಡಲು ಕರ್ನಾಟಕದಲ್ಲಿ 2003ರ ವರೆಗೆ 5 ಸರ್ಕಾರಿ ಕಂಪನಿಗಳಿಗೆ ಮಾತ್ರ ಅನುಮತಿ ಇತ್ತು. ಈ 5 ಕಂಪನಿಗಳು
ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ,ಸೆಸ್ಕ್
ಈ ಅನುಮತಿಯನ್ನು ಖಾಸಗಿ ಕಂಪನಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರವು ವಿದ್ಯುತ್ ಕಾಯ್ದೆ 2003ನ್ನು ಜಾರಿಗೆ ಮಾಡಿತು, ಇದರಂತೆ ಈ 5 ಕಂಪನಿಗಳ ಹೊರತಾಗಿ ಖಾಸಗಿ ಕಂಪನಿಗಳು ಕೂಡ ವಿದ್ಯುತ್ ಸರಬರಾಜು ಕ್ಷೇತ್ರದಲ್ಲಿ ತೊಡಗಿಕೊಳ್ಳಬಹುದಾಗಿದೆ.
ಯಾವುದೇ ಒಂದು ಉದ್ಯಮಕ್ಕೆ ಸರಕಾರವು ಶೇ. 51% ಅನುದಾನವನ್ನು ನೀಡಿದರೆ ಆ ಕಂಪನಿಯು ಸರಕಾರಿ ಸ್ವಾಮ್ಯದ ಕಂಪನಿಯೆಂದು ಪರಿಗಣಿಸಲಾಗುತ್ತದೆ. ಉದಾರಣೆಗೆ ಮೇಲಿನ 5 ಕಂಪನಿಗಳಿಗೆ ಶೇ 51%ಕಿಂತ ಜಾಸ್ತಿ ಅನುದಾನಗಳು ಸರಕಾರದಿಂದ ಮಂಜೂರು ಆಗುತ್ತದೆ.

8722552464 Astrloger

ಜಾಹೀರಾತು

ಅದು ಸರಕಾರದ ಯೋಜನೆಗಳಿರಬಹುದು
ಹೊಸ ವಿದ್ಯುತ್ ಲೈನ್ ಗೆ ಅನುದಾನ ನೀಡುವುದಾಗಿರಬಹುದು.
ಮಳೆಗಾಲದಲ್ಲಿ ಕಂಬ ತುಂಡು ಆಗಿ ಬಿದ್ದು ನಷ್ಟ ಉಂಟಾದಾಗ ಅದಕ್ಕೆ ಪರಿಹಾರ ನೀಡುವುದಾಗಿರಬಹುದು ,
ಕೃಷಿ ಪಂಪು ಮತ್ತು 200 units free ವಿದ್ಯುತ್ ಬಿಲ್ಲಿನ ಮೊತ್ತವನ್ನು ವಿದ್ಯುತ್ ಕಂಪನಿಗಳಿಗೆ ಪಾವತಿಸುವುದಾಗಿರಬಹುದು ಇತ್ಯಾದಿ.

ಈ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ನೀಡಿದಾಗ ಆ ಕಂಪನಿಗೆ ಸರಕಾರದ ಅನುದಾನ ಇರುವುದಿಲ್ಲ. ಬದಲಾಗಿ ಕಂಪನಿಯು ಎಲ್ಲಾ ನಷ್ಟಗಳನ್ನು ನೇರವಾಗಿ ಗ್ರಾಹಕರ ಮೇಲೆಯೇ ಏರುತ್ತದೆ.

ನಾವು ಈಗಾಗಲೇ ಅನುಭವಿಸಿದ್ದೇವೆ.
ಪ್ರಾರಂಭದಲ್ಲಿ BSNL ಕ್ಷೇತ್ರವು ಉತ್ತಮ ಲಾಭದಾಯಕ ಸ್ಥಾನದಲ್ಲಿತ್ತು. ಖಾಸಗಿ ಕಂಪನಿಗಳಿಗೆ ವಿನಾಯಿತಿ ನೀಡುವ ಮೂಲಕ JIO ಸಂಸ್ಥೆ ಉಚಿತವಾಗಿ ಕರೆ ಮತ್ತು ಇಂಟರ್ನೆಟ್ ಸೌಲಭ್ಯವನ್ನು ನೀಡಿ BSNL ಸೇರಿದಂತೆ ಎಲ್ಲಾ ಗ್ರಾಹಕರನ್ನು ತನ್ನ ಬಳಿ ಸೆಳೆಯುವಂತೆ ಮಾಡಿತು.
ಎಲ್ಲರೂ JIO ಬಳಕೆದಾರರಾದ ನಂತರ ದರವನ್ನು ಸ್ವಲ್ಪ ಸ್ವಲ್ಪನೇ ಹೆಚ್ಚಿಸಲಾಯಿತು.ಇದರ ವಿರುದ್ಧ ಧ್ವನಿ ಎತ್ತುವ ಪರಮಾಧಿಕಾರವನ್ನೇ ಜನಸಾಮಾನ್ಯರಾದ ನಾವುಗಳು ಕಳೆದುಕೊಂಡು ಬಿಟ್ಟಿದ್ದೇವೆ. ಅವರು ನಿಗದಿಪಡಿಸುವ ವೆಚ್ಚವನ್ನು ಪಾವತಿಸಿ ಅವರು ನೀಡುವ ಸೌಲಭ್ಯವನ್ನು ಅನುಭವಿಸಬೇಕಾದ ಪರಿಸ್ಥಿತಿ.

ವಿದ್ಯುತ್ ಕ್ಷೇತ್ರ ಖಾಸಗಿಕರಣಗೊಂಡರು ಸಹ ಗೃಹಜ್ಯೋತಿ ಮತ್ತು ಪಂಪ್ ಸೆಟ್ ಗಳ ಬಿಲ್ಲುಗಳ ಮೊತ್ತವನ್ನು ಸರ್ಕಾರ ಪಾವತಿಸುವ ಬರವಸೆಗಳನ್ನು ನೀಡಿದರು ಸಹ ಸರಕಾರವು ಅವುಗಳನ್ನ ನೇರವಾಗಿ ಖಾಸಗಿ ಕಂಪನಿಗಳಿಗೆ ಪಾವತಿಸುವುದಿಲ್ಲ. ಬದಲಾಗಿ ಕೃಷಿ ನೀರಾವರಿ ಪಂಪ್ ಮತ್ತು ಉಚಿತ ಗೃಹ ವಿದ್ಯುತ್ ಬಿಲ್ಲಿನ ಮೊತ್ತವನ್ನು ಗ್ರಾಹಕರೇ ಮೊದಲು ಖಾಸಗಿ ವಿದ್ಯುತ್ ಕಂಪನಿಗೆ ಪಾವತಿದ ನಂತರ ಸಬ್ಸಿಡಿ ಹಣವನು DBT ಮೂಲಕ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು.

ಒಂದೊಮ್ಮೆ ಯೋಚಿಸಿ..
ಕೆಲವು ವರ್ಷದ ಹಿಂದೆ ಗ್ಯಾಸ್ ಮೊತ್ತವನ್ನು ಪೂರ್ತಿಯಾಗಿ ಪಾವತಿಸಿದ ನಂತರ ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿತ್ತು.
ಆ ನಂತರ ಸಬ್ಸಿಡಿ ಅನಿವಾರ್ಯ ಇಲ್ಲದೇ ಇರುವವರು ಅನುಕೂಲಸ್ಥರು ಸಬ್ಸಿಡಿ ಮೊತ್ತವನ್ನು ಬಿಟ್ಟು ಕೊಡುವ ಅಭಿಯಾನವನ್ನು ಪ್ರಾರಂಭ ಮಾಡಲಾಯಿತು. ಕೆಲವೇ ಕೆಲವು ಜನರು ಸಬ್ಸಿಡಿಯನ್ನು ಬಿಟ್ಟು ಕೊಟ್ಟರಾದರೂ ಸಹ ಎಲ್ಲಾ ಗ್ಯಾಸ್ ಬಳಕೆದಾರರ ಸಬ್ಸಿಡಿ ಮೊತ್ತವನ್ನು ನಿಲ್ಲಿಸಲಾಯಿತು. 300/- ರೂಪಾಯಿ ಸಬ್ಸಿಡಿಯನ್ನೇ ನಿಲ್ಲಿಸಿದ ಮೇಲೆ ವಿದ್ಯುತ್ ಬಿಲ್ಲಿನ (ಮನೆಗೆ 1500+ ಕೃಷಿ ಪಂಪ್ 10 ರಿಂದ 15 ಸಾವಿರ )ಮೊತ್ತ DBT ಮೂಲಕ ಗ್ರಾಹಕರ ಖಾತೆಗೆ ಜಮೆ ಆಗುವುದೆಂದು ಯಾವ ಭರವಸೆ?

ನಾಳೆ ದಿನ ವಿದ್ಯುತ್ ಕ್ಷೇತ್ರದಲ್ಲಿ ಕೂಡ ಇದೆ ರೀತಿಯ ಪರಿಸ್ಥಿತಿ ಬಾರದಿರಲಿ.

ಈಗಾಗಲೇ TATA Power ಕಂಪನಿಯೂ ಕರ್ನಾಟಕದಲ್ಲಿ ಕೆಲವು ಲಾಭ ಬರಬಹುದಾದ ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಮಗೂ ವಿದ್ಯುತ್ ಸರಬರಾಜು ಮಾಡುವುದಕ್ಕೆ ಕೇಂದ್ರ ಸರಕಾರ ದ ವಿದ್ಯುತ್ ಕಾಯ್ದೆ 2003ರ ಪ್ರಕಾರ ಅವಕಾಶ ಕೊಡಿ ಅಂತ ಅರ್ಜಿಯನ್ನು KERC ಗೆ ಸಲ್ಲಿಸಿದೆ. ಈ ಅರ್ಜಿಯು ವಿಚಾರಣೆ ಅಂಥದಲ್ಲಿದ್ದು ಸಾರ್ವಜನಿಕ ಆಕ್ಷೇಪನೆಗಳಿದ್ದಲ್ಲಿ ಆಕ್ಷೇಪ ಸಲ್ಲಿಸಲು ಈ ತಿಂಗಳ 23 ದಿನಾಂಕದ ವರೆಗೆ ಅವಕಾಶವಿದೆ.
ಅಂತಿಮವಾಗಿ ಅವರ ಅರ್ಜಿಯು ಪುರಸ್ಕಾರಗೊಂಡಲ್ಲಿ
ಕೇಳಿರುವ ಜಿಲ್ಲೆಗಳಲ್ಲಿ Tata ಕಂಪನಿ ಅವರ ವಿದ್ಯುತ್ ಸರಬರಾಜು ಆಗುವ ದಿನ ದೂರವಿಲ್ಲ.
ಮೇಲೆ ತಿಳಿಸಿದ JIO ದಂತೆ ಜನರನ್ನು ತನ್ನ ಬಳಿ ಸೆಳೆಯಲು ಕೆಲವು ಉಚಿತ ಸೌಲಭ್ಯಗಳನ್ನು ನೀಡಿ ಶೇ 90% ಜನ ಖಾಸಗಿ ಕಂಪನಿಗೆ ಶಿಫ್ಟ್ ಆದ ನಂತರ ಅವರದೇ ಕಾನೂನು ಅವರದೇ ನಿಯಮ ಅವರದೇ ದರ ನಿಗದಿ ಮಾಡಿ ಜನರ ಜೀವ ಹಿಂಡುವ ದಿನ ದೂರವಿಲ್ಲ ಸ್ನೇಹಿತರೆ.

KERC ಮತ್ತು ರಾಜ್ಯಸರಕಾರವು ಯಾವುದೇ ಕಾರಣಕ್ಕೂ ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶವನ್ನು ನೀಡದಂತೆ ಈ ಕೆಳಗೆ ನೀಡಿರುವ link open ಮಾಡಿ
ಅದರಲ್ಲಿ ಹೆಸರು ಜಿಲ್ಲೆ ಫೋನ್ ನಂಬರ್ ಇಮೇಲ್ id update ಮಾಡಿ ಪಕ್ಕದಲ್ಲಿರುವ box tick ಮಾಡಿ raise your voice ಕ್ಲಿಕ್ ಮಾಡಿದಾಗ ನಿಮ್ಮ ಇಮೇಲ್ auto open ಆಗುತ್ತದೆ.
ಅಲ್ಲಿ ಯಾವುದೇ ಟೈಪ್ ಮಾಡುವ ಅಗತ್ಯ ಇರುವುದಿಲ್ಲ. ಎಲ್ಲಾ ವಿವರಗಳು ready draft ನಲ್ಲಿರುತ್ತದೆ. Just send ಮಾಡಿ. ಆ ಮೆಸೇಜ್ ನೇರವಾಗಿ KERC ಕಛೇರಿಯ ಇಮೇಲ್ ಗೆ send ಆಗುತ್ತದೆ.
ಇಷ್ಟು ಮಾತ್ರವಲ್ಲ ವಿವಿಧ ರೈತ ಪರ ಸಂಘಟನೆಗಳಿರಬಹುದು ಉದ್ಯಮ ಕ್ಷೇತ್ರಗಳಿರಬಹುದು ಜನ ಪ್ರತಿನಿಧಿಗಳಿರಬಹುದು ಅವರಿಂದ ಪ್ರತ್ಯೇಕ ಆಕ್ಷೇಪಣೆಗಳನ್ನು ಪತ್ರದ ಮೂಲಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಸಲ್ಲಿಸಲು ವಿನಂತಿಸಲಾಗಿದೆ.

SendShare18Share
Previous Post

ಬಂಟ್ವಾಳದಲ್ಲಿ ನಡೆದ ಪ್ರತಿಭಟನೆಗೆ ಬಿಜೆಪಿಯವರನ್ನು ಕರೆಯಲಿಲ್ಲ ಮಠಂದೂರು ಬಂದು ಸೇರಿಕೊಂಡದ್ದು- ನಾನು ಅಪ್ಪಟ ಕಾಂಗ್ರೆಸ್ಸಿಗ: ಗಿರಿಧರ್ ನಾಯ್ಕ್

Next Post

ಪುತ್ತೂರು ವಿಧಾನಸಭಾ ಕ್ಷೇತ್ರದ ಮೂರು ರಸ್ತೆಗಳ ಅಭಿವೃದ್ಧಿಗೆ 6 ಕೋಟಿ ಅನುದಾನ ಮಂಜೂರು

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಸಚಿವ ಸ್ಥಾನ ದೊರೆಯಲು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಮೂರು ರಸ್ತೆಗಳ ಅಭಿವೃದ್ಧಿಗೆ 6 ಕೋಟಿ ಅನುದಾನ ಮಂಜೂರು

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..