ಪುತ್ತೂರು: ಕೋಡಿಂಬಾಡಿ 43ನೇ ವರ್ಸದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ 02-08-2026ನೇ ಆದಿತ್ಯವಾರ ಬಿಡುಗಡೆ ಪ್ರಥಮವಾಗಿ ಗ್ರಾಮ ದೇವಸ್ಥಾನ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕರು ರಾಮಕೃಷ್ಣ ಭಟ್ ಅಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು ನಂತರ ಮಠದಬೆಟ್ಟು ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.
ಈ ಎಲ್ಲಾ ಸಂಧರ್ಭಗಳಲ್ಲಿಯೂ ಗಣೇಶೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು,ಎಲ್ಲಾ ಉಪ ಸಮಿತಿಗಳ ಸಂಚಾಲಕರು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು ಈ ಪುಣ್ಯ ಕಾರ್ಯದ ಭಕ್ತಿಯ,ಸಡಗರದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ನಮ್ರ ವಿನಂತಿ ಕೊರಿದ್ದಾರೆ.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ವಾರಿಸೇನ ಜೈನ್, ಅಧ್ಯಕ್ಷ ಭಾರತ್ ಗೌಡ ನಿಡ್ಯಾ, ,ಪ್ರದಾನ ಕಾರ್ಯದರ್ಶಿ ದೇವಾನಂದ ಕೆ, ಕಾರ್ಯದರ್ಶಿ ಕುಮಾರ್ ನಾಥ್, ಕೋಶಾಧಿಕಾರಿ ಚೆನ್ನನ್ನ ಗೌಡ, ಜಯಾನಂದ ಕೆ ಪ್ರಭಾಕರ್ ಸಾಮಾನಿ, ಉಮೇಶ್, ಸುರೇಶ, ಪ್ರದೀಪ್ ಶೆಟ್ಟಿ, ರುಕ್ಮಯ ನಾಯ್ಕ್, ಬಾಲಕೃಷ್ಣ ಶೆಟ್ಟಿ, ಮತ್ತು ಸಮಿತಿ ಸದ್ಯಸರು ಭಕ್ತದಿಗಳು ಉಪಸ್ಥಿತರಿದ್ದರು.
























