ಕಡಬ: ತಾಲೂಕಿನ ಎಡಮಂಗಲ ಗ್ರಾಮದ ಬೇಕರಿ ಉದ್ಯಮಿ ಮೋಹನ್ ನಾಯ್ಕ ದಡ್ಡುರ (35.ವ) ಅವರು ಮೆದುಳಿನ ರಕ್ತಸ್ರಾವದಿಂದ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಸೆ.8ರಂದು ನಿಧನರಾದರು.
ಎಡಮಂಗಲದಲ್ಲಿ ಬೇಕರಿ ನಡೆಸುತ್ತಿದ್ದ ಮೋಹನ್ ಅವರು ಸೆ.6 ರಂದು ಸಿದ್ಧಪಡಿಸಿದ್ದ ಪಫ್ಸ್ ಗಳನ್ನು ಸರಬರಾಜು ಮಾಡಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾಗಿ ಬ್ರೈನ್ ಹೆಮರೇಜ್ ಸಂಭವಿಸಿದೆ ಎನ್ನಲಾಗಿದೆ.ತಕ್ಷಣ ಕಡಬ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

























