ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಅಂಗವಾಗಿ ಹಸಿರುವಾಣಿಯ ಸಮರ್ಪಣೆ ಅ.11ರಂದು ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಠಂತಬೆಟ್ಟುವಿನಲ್ಲಿರುವ, ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವ ಆರಂಭ.
ವಿನಾಯಕ ನಗರದಲ್ಲಿರುವ ಶ್ರೀ ಮಹಿಷಮರ್ದಿನಿ ದ್ವಾರದ ಬಳಿ ಹಿರಿಯರಾದ ವಿಠಲ ಶೆಟ್ಟಿ ಪಿಜಿನಡ್ಕ, ಎಲ್ಯಣ್ಣ ಗೌಡ ಮೇಲಿನಹಿತ್ಲು-ಬಾರಿಕೆ, ಕುಸುಮಾವತಿ ಡೆಕ್ಕಾಜೆ ಮತ್ತು ಚಂದ್ರಶೇಖರ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು ಅವರು ಹೊರೆಕಾಣಿಕೆಯ ಮೆರವಣಿಗೆ ಉದ್ಘಾಟಿಸಿದರು. ಬಳಿಕ ಮಠಂತಬೆಟ್ಟುವರೆಗೆ ನಡೆದ ಮೆರವಣಿಗೆಯನ್ನು ದೇವಳದಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಪ್ರಾರ್ಥನೆ ನೆರವೇರಿಸಿದರು. ನಂತರ ಹಸಿರುವಾಣಿ ಯನ್ನು ದೇವರಿಗೆ ಅರ್ಪಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ, ಉದ್ಯಮಿ ಹರಿಪ್ರಸಾದ್ ರೈ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಭಂಡಾರಿ ಕೈಪ ಬಾಲಕೃಷ್ಣ ಶೆಟ್ಟಿ ಕುಮಾರ್ ನಾಥ್, ಸುಮಾ ಅಶೋಕ್ ರೈ, ಪ್ರಭಾಕರ್ ಸಾಮಾನಿ, ಶಿವಪ್ರಸಾದ್ ರೈ, ರೇಣುಕಾ ಯಂ ರೈ, ಉಲ್ಲಾಸ್, ಸಂತೋಷ, ಅಮಿತಾ ಕುಕ್ಯನ್ ಸಹಿತ ಹಲವು ಭಕ್ತರು ಭಾಗವಹಿಸಿದ್ದರು.



























