ಕಡಬ: ಶ್ರೀ ಭಗವತೀ ಚಾರಿಟೇಬಲ್ ಟ್ರಸ್ಟ್ (ರಿ.) ಮರ್ದಾಳ ವತಿಯಿಂದ ಸ್ಥಳೀಯ ಆಂಬುಲೆನ್ಸ್ ಚಾಲಕರೊಬ್ಬರ ಅನಾರೋಗ್ಯ ಪೀಡಿತ ಪತ್ನಿಗೆ ಆರ್ಥಿಕ ನೆರವನ್ನು ನೀಡಲಾಯಿತು.
ಕಳೆದ ಹಲವು ಸಮಯಗಳಿಂದ ಮಾರಕ ಖಾಯಿಲೆಗೆ ತುತ್ತಾಗಿ ನಿರಂತರ ಚಿಕಿತ್ಸೆಯಲ್ಲಿರುವ ಮಹಿಳೆಯ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ, ಹಾಗೂ ಮನೆಯ ಬಡತನವನ್ನು ಅರಿತುಕೊಂಡು ಈ ಕಾರ್ಯ ಮಾಡಲಾಗಿದ್ದು, ಈ ಹಿಂದೆಯೂ ಟ್ರಸ್ಟ್ ವತಿಯಿಂದ ಅರೋಗ್ಯ ತಪಾಸಣ ಶಿಬಿರ, ಸಹಿತ ಹಲವು ಮಂದಿ ಅಸಹಾಯಕರಿಗೆ ನೆರವಿನ ಹಸ್ತ ಚಾಚಲಾಗಿತ್ತು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಮೋನಪ್ಪ ಪೂಜಾರಿ ಮರ್ದಾಳ, ಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಮರ್ದಾಳ, ಗೌರವ ಸಲಹೆಗಾರರಾದ ಗೋವಿಂದ ನಾಯಕ್, ಪುಷ್ಪಾವತಿ ಕರ್ಮಾಯಿ, ಶಿವಕುಮಾರ್ ಕೋಡಿಂಬಾಳ, ವಿನಯ ಮಿತ್ತೋಡಿ , ಸಂತೋಷ್ ನೈಲ ಮತ್ತಿತರರು ಉಪಸ್ಥಿತರಿದ್ದು ಶೀಘ್ರ ಗುಣಮುಖರಾಗಲು ಹಾರೈಸಿದರು.






















