ಪುತ್ತೂರು: ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರಿಂದ ಕೆಮ್ಮಿಂಜೆ ವೆಂಕಟೇಶ ನಗರದಲ್ಲಿನ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗಾಗಿ ರೂ.4ಲಕ್ಷ ಅನುದಾನ ಒದಗಿಸಿಕೊಟ್ಟ ಹಿನ್ನೆಲೆಯಲ್ಲಿ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ರಸ್ತೆ ಅಭಿವೃದ್ಧಿಯಲ್ಲಿ ತಡೆಗೋಡೆ ಮತ್ತು ಇಂಟರ್ಲಾಕ್ ಅಡಿಸುವ ಕಾಮಗಾರಿಗೆ ಊರವರು ಜೊತೆಯಾಗಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್ , ಜಿಲ್ಲಾ ಬಿಜೆಪಿಯ ಪ್ರಮುಖರಾದ ಬೂಡಿಯಾರ್ ರಾಧಾಕೃಷ್ಣ ರೈ, ನಗರಸಭೆ ಸ್ಥಾಯಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಿಕಟಪೂರ್ವ ಸದಸ್ಯೆ ಶಶಿಕಲಾ ಸಿ.ಎಚ್, ಶಕ್ತಿ ಕೇಂದ್ರದ ನಾಗೇಶ್ ಟಿ.ಎಸ್, ಸುರೇಶ್ಚಂದ್ರ ರೈ, ನಾಗೇಂದ್ರ ಬಾಳಿಗ, ಸುನಿತ್ ಭಟ್, ಮಾಧ್ಯಮ ವಕ್ತರಾ ರಾಜೇಶ್ ಬನ್ನೂರು ಮತ್ತು ಬಾಬು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

























