ಬಂಟ್ವಾಳ : ಕಡೂರು – ಬಿ.ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕೆಎ-19-ಹೆಚ್ ಜೆ-7258ನೇ ಸ್ಕೂಟರನ್ನು , ಅದರ ಸವಾರ ಸುಮಿತ್ ರವರು, ಸಹ ಸವಾರ ಗುರುಪ್ರೀತ್ ಎಂಬವರನ್ನು ಕುಳ್ಳಿರಿಸಿಕೊಂಡು, ಸವಾರಿ ಮಾಡಿಕೊಂಡು ಬಿ.ಸಿ ರೋಡ್ ಕಡೆಗೆ ಹೋಗುತ್ತಿರುವಾಗ, ಬಂಟ್ವಾಳ ತಾಲೂಕು ಕಾಡಬೆಟ್ಟು ಗ್ರಾಮದ ವಗ್ಗ ಎಂಬಲ್ಲಿ, ಬಂಟ್ವಾಳ ಕಡೆಯಿಂದ ಕೆಎ-25-ಸಿ-6489 ನೇ ಲಾರಿಯನ್ನು ಅದರ ಚಾಲಕ ನಿಶೇಮಪ್ಪ ವಾಲಿ ಶೆಟ್ಟರ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಢಿಕ್ಕಿ ಹೊಡೆದಿರುತ್ತಾರೆ.
ಪರಿಣಾಮ ಸ್ಕೂಟರ್ ಸವಾರ ಸುಮಿತ್ ಮತ್ತು ಸಹ ಸವಾರ ಗುರುಪ್ರೀತ್ ರವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿರುತ್ತಾರೆ. ಅವರುಗಳನ್ನು ಫಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಸುಮಿತ್ ರವರು ಮೃತ ಪಟ್ಟಿದ್ದು, ಸಹ ಸವಾರ ಗುರುಪ್ರೀತ್ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 117/2024, ಕಲಂ : 281,125(A),106,BNS ರಂತೆ ಪ್ರಕರಣ ದಾಖಲಾಗಿದೆ.