ವೀರಕಂಭ: ಮನೆ ಬಾಗಿಲಿಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಸದಸ್ಯರ ಮೇಲೆ ಹಲ್ಲೆ ನಡೆಸಿ “ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಮೈರ ಎಂಬಲ್ಲಿ ನಡೆದಿದೆ.
ವೀರಕಂಬ ಗ್ರಾಮದ ಮೈರ ನಿವಾಸಿ ಯತೀಶ ಎಮ್ ಸಿ ಎಂಬವರು ಜ.31 ರಂದು ರಾತ್ರಿ 8:00 ಗಂಟೆಗೆ ಅವರ ಮನೆಯ ಅಂಗಳದಲ್ಲಿ ಮಗುವಿನ ಜೊತೆ ಆಟವಾಡುತ್ತಿರುವಾಗ ಮೋಹನ ಗೌಡ ಎಂಬಾತನು ಏಕಾ ಏಕಿಯಾಗಿ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವರ ಮೇಲೆ ಹಿಗ್ಗಾ ಮುಗ್ಗ ಹಲ್ಲೆ ನಡೆಸಿದ್ದಾನೆ. ಈ ವೇಳೆ 6 ವರ್ಷದ ಮಗುವಿನ ಮೇಲೂ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಯತೀಶ್ ರವರ ತಾಯಿ ಮತ್ತು ಪತ್ನಿ ಬೊಬ್ಬೆ ಹಾಕಿದಾಗ ಆರೋಪಿ ಮೋಹನ್ ಗೌಡ ಓಡಿ ಹೋಗಿ ತನ್ನ ಮನೆಗೆ ತೆರಳಿ, ದೊಣ್ಣೆ ತಂದು ಮನೆಯ ಸದಸ್ಯರ ಮೇಲೆ ಹಲ್ಲೆ ಮಾಡಲು ಯತ್ನಿಸಿರುತ್ತಾನೆ. ಈ ವೇಳೆ ಯತೀಶ್ ರವರ ತಾಯಿ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದಾಗ ಯತೀಶ್ ರವರ ತಾಯಿಯ ಮೇಲೂ ದೊಣ್ಣೆಯಿಂದ ಹಲ್ಲೆ ನಡೆಸಿ ಕ್ರೂರ ಕೃತ್ಯ ನಡೆಸಿರುತ್ತಾನೆ. ಬಳಿಕ ಯತೀಶ್ ರವರನ್ನು ಸಂಬಂಧಿಕರು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಳಿಸಿದ್ದಾರೆ.
ಆರೋಪಿ ಮೋಹನ್ ಗೌಡ ಈ ಹಿಂದೆಯೂ ಅನೇಕ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಇದೀಗ ಅದೇ ಚಾಳಿ ಬುದ್ದಿಯನ್ನು ಪ್ರದರ್ಶಿಸಿದ್ದಾನೆ.
6 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿ ಕುಕೃತ್ಯ ಮೆರೆದ ಆರೋಪಿ ಮೋಹನ್ ಗೌಡ ನನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ವಿಫಲರಾಗಿದ್ದಾರೆ.
.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ 2023 (Us-115(2) 118(1) 329(4) 352 351(2)ಪ್ರಕರಣ ದಾಖಲಾಗಿದೆ.